ಸಂಸಾರಸ್ಥನ ಜೊತೆಗಿನ ಕುರುಡು ಪ್ರೀತಿಗೆ, ಅಪ್ರಾಪ್ತೆಯರ ಜೀವನದಲ್ಲಿ ಆಟವಾಡಿದ ನರ್ಸ್​! ಯಾರನ್ನೂ ನಂಬದಿರಿ ಹುಷಾರ್!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Nov 10, 2023 SHIVAMOGGA NEWS

Soraba/chikkamagaluru  | ಮನುಷ್ಯನ ಸಂಬಂಧಗಳೇ ವಿಚಿತ್ರ ಅನಿಸುತ್ತದೆ, ಏಕೆಂದರೆ ಕೆಲವೊಮ್ಮ ಸಂಬಂಧಗಳು ಸಿಟ್ಟಿನ ಭರಕ್ಕೆ ಸಿಕ್ಕಿ ತರಗೆಲೆಯಾಗುತ್ತದೆ. ಅದೇ ಕೆಲವೊಮ್ಮೆ ಅದೇ ಸಂಬಂಧಗಳ ಕಾರಣಕ್ಕೆ ಜಗತ್ತೆ ತಲೆತಗ್ಗಿಸುವಂತಹ ಅಪರಾಧಗಳು ಸಂಭವಿಸುತ್ತದೆ. ಸದ್ಯ ಇಂತಹದ್ದೊಂದು ಅಪರಾಧ ನೆರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.. 

ಜಿಲ್ಲೆಯ ………ಶಾಲೆಯ ಪ್ರಿನ್ಸಿಪಾಲರೊಬ್ಬರು ನೀಡಿದ ದೂರಿನೊಂದಿಗೆ ಈ ಪ್ರಕರಣ ಆರಂಭವಾಗಿತ್ತು. ಕೇಸ್​ನ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಇದೆಂತಹ ಹೀನ ಪ್ರಕರಣ ಎಂದಿನಿಸಿತ್ತು. ಎಫ್ಐಆರ್​ನಲ್ಲಿ ……..ಶಾಲೆಯೊಂದರ ಮಕ್ಕಳಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ವರದಿಯಾಗಿತ್ತು. ಆ ವಿಚಾರದ ಬೆನ್ನತ್ತಿದ ಪೊಲೀಸರು ಮೊದಲು ಒಬ್ಬ ವ್ಯಕ್ತಿಯ ಬೆನ್ನತ್ತುತ್ತಾರೆ. ಆತನ ಹಿಂದೆ ಒಬ್ಬ ಮಹಿಳೆ ಸಿಕ್ಕಿಬೀಳುತ್ತಾಳೆ. ಅಂತಿಮವಾಗಿ ಸೊರಬದ ಓರ್ವ ಆರೋಪಿ ತಗ್ಲಾಕ್ಕಿಕೊಳ್ಳುತ್ತಾನೆ. ಅಪ್ರಾಪ್ತ ವಿಚಾರದ ಕಾರಣಕ್ಕೆ ಯಾವುದೆ ವೈಯಕ್ತಿಕ ಗುರುತು ಚಹರೆ ಇಲ್ಲಿ ಬಹಿರಂಗ ಪಡಿಸ್ತಿಲ್ಲ. 

READ : ರಾಜ್ಯದಲ್ಲಿ ಮೊದಲ ಬಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶ ಪಡಿಸಿಕೊಂಡ ಕರಿಮರದ ವಿಶೇಷತೆ ಏನು ಗೊತ್ತಾ?

ಸಮಾಜದಲ್ಲಿ ನಡೆಯುತ್ತಿರುವ ದುರಂತ ಕ್ರೌರ್ಯಗಳ ಬಗ್ಗೆಯಷ್ಟೆ ವರದಿ ಮಾಡುತ್ತಿದ್ದು, ಪ್ರಕರಣದಲ್ಲಿ ಸಿಕ್ಕಿಬಿದ್ದ ಮೂವರನ್ನ ಪೊಲೀಸರು ವಿಚಾರಿಸಿದಾಗ ನಡೆದ ಕ್ರೈಂನ ಚಿತ್ರಣ ಕೇಳಿ ಪೊಲೀಸರಿಗೆ ಶಾಕ್ ಆಗಿತ್ತು. ಒಬ್ಬ ಮಹಿಳೆ ತಾನು ಪ್ರೀತಿಸಿದ ಪುರುಷನಿಗಾಗಿ ಏನೂ ತಿಳಿಯುದ ಹೆಣ್ಣುಮಕ್ಕಳನ್ನ ದುರ್ಬಳಕೆ ಮಾಡಿಕೊಂಡಿದ್ದಳು.. 

ಚಿಕ್ಕಮಗಳೂರು ಜಿಲ್ಲೆ ಯುವತಿ, ಶಿವಮೊಗ್ಗ ಜಿಲ್ಲೆಯ ಯುವಕ ಪ್ರೇಮಿಗಳು, ಅವಳಿಗೂ ಮದುವೆಯಾಗಿದೆ, ಈತನ ಸಂಸಾರಸ್ಥ, ಆದಾಗ್ಯ ಇಬ್ಬರ ನಡುವೆ ಪ್ರೀತಿ ಮುಂದುವರಿದಿತ್ತು. ಹಾಗಾಗಿ ಇಬ್ಬರು ಆಗಾಗ ಸಂಧಿಸುತ್ತಿದ್ರು. ಈ ಮಧ್ಯೆ ಯುವಕ ಅಪ್ರಾಪ್ತೆಯರು ಬೇಕು ಎಂದು ಆಸೆ ವ್ಯಕ್ತಪಡಿಸಿದ್ದಕ್ಕೆ ಸರ್ಕಾರಿ ನೌಕರಿಯಲ್ಲಿದ್ದ ಯವತಿ ತನಗೆ ಗೊತ್ತಿದ್ದ ವ್ಯಕ್ತಿಗೆ ಹೇಳಿ ಡೀಲ್ ಮಾಡಿದ್ದಳು. 

READ : ಕಾಡುಗಳ್ಳ ವೀರಪ್ಪನ್ ಹಾಟ್ ಸ್ಪಾಟ್ ಆಗಿದ್ದ ಕಾಡು ಪ್ರದೇಶ ಈಗ ನಕ್ಸಲರಿಗೆ ರೆಡ್ ಕಾರ್ಪೇಟ್ ಹಾಸಿದೆಯಾ..? ಜೆಪಿ ಬರೆಯುತ್ತಾರೆ

ಆತ ಅದ್ಯಾವ ಆಮೀಷಕ್ಕೆ ಬಲಿಯಾದ್ನೋ ಏನೋ ……..ಶಾಲೆಯ ಮಕ್ಕಳ ಪೋಷಕರಿಗೆ ಹೇಳಿ, ನರ್ಸಿಂಗ್ ಟ್ರೈನಿಂಗ್​ ಇದೆ ಎಂದು ಹೇಳಿ, ಇಬ್ಬರು ಅಪ್ರಾಪ್ತೆಯರನ್ನ ಇವರಿಬ್ಬರ ಬಳಿ ಕಳಿಸಿದ್ದ. ಅಲ್ಲಿ ಮತ್ತು ಬರಿಸುವ ಔಷಧಿ ನೀಡಿ, ಆರೋಪಿ ಲೈಂಗಿಕ ದೌರ್ಜನ್ಯವೆಸಗಿದ್ದ. ಇವೆಲ್ಲ ವಿಚಾರಣೆ ವೇಳೆ ತಿಳಿದ ಪೊಲೀಸರು ಸ್ಟ್ರ್ಯಾಂಗ್​ ಸೆಕ್ಷನ್​ಗಳನ್ನು ಹಾಕಿ ಯಾವ ಮುಲಾಜನ್ನು ತೋರದೇ ಮೂವರು ಆರೋಪಿಗಳನ್ನ ಜೈಲಿಗಟ್ಟಿದ್ದಾರೆ. 


ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor