KARNATAKA NEWS/ ONLINE / Malenadu today/ Oct 31, 2023 SHIVAMOGGA NEWS
SHIVAMOGGA | ಅಕೇಶಿಯಾ ಮರಗಳ ಕಡಿತಲೆ…ಪ್ರತ್ಯೇಕ ಬಿಲ್ ಗಳ ಸುರಿಮಳೆ..ಹಣ ಲೂಟಿ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಅರಣ್ಯ ಜಾಗೃತ ದಳ ಕ್ರಮ ಕೈಗೊಳ್ಳುವುದೇ..?
ತೀರ್ಥಹಳ್ಳಿ ಹೊಸನಗರ ಸಾಗರ ತಾಲೂಕಿನಲ್ಲಿ ಎಂಪಿಎಂ ಕಾರ್ಖಾನೆ ಪಲ್ಪ್ ಗಾಗಿ ಲೀಸ್ ಗೆ ನೀಡಲಾಗಿರುವ ಅಕೇಶಿಯಾ ನೆಡುತೋಪುಗಳು ಅರಣ್ಯ ಇಲಾಖೆ ಅದಿಕಾರಿಗಳ ಪಾಲಿಗೆ ಅಕ್ಷಯ ಪಾತ್ರೆಯಾಗಿ ಮಾರ್ಪಟ್ಟಿದೆ. ಮರಗಳ ಕಡಿತಲೆಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆಯುತ್ತಿದ್ದು, ಹಗಲು ದರೋಡೆಯಾಗಿ ಮಾರ್ಪಟ್ಟಿದೆಯ ಕಳೆದ ವರ್ಷ ಹಾಗು ಪ್ರಸ್ಥುತ ವರ್ಷದ ಅರಣ್ಯ ಮರಗಳ ಕಡಿತಲೆಯಲ್ಲಿ ಅದಿಕಾರಿಗಳ ಜೇಬು ಭರ್ತಿಯಾಗಿದ್ದಂತೂ ಸುಳ್ಳಲ್ಲ. ಮೀಟರ್ ಲೆಕ್ಕದಲ್ಲಿ ಟಿಂಬರ್ ಕಡಿಯುವುದು ವಾಡಿಕೆ. ಮರಗಳ ಮೀಟರ್ ನಲ್ಲಿ ವ್ಯತ್ಸಾಸ ಮಾಡಿ ಹೆಚ್ಚುವರಿ ಮೀಟರ್ ಮರದ ಹಣವನ್ನು ಪೀಕುವುದೇ ಈ ದಂಧೆಯ ತಿರುಳಾಗಿದೆ.
READ : ಎಸ್ಟೇಟ್ ಸೂಪರ್ವೈಸರ್ & ರೈಟರ್ರಿಂದ ಸಾಗುವಾನಿ ನಾಟಾ ಕಳ್ಳತನ | ಅರಣ್ಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಆರೋಪಿಗಳು
ಉದಾಹರಣೆಗೆ ಒಂದು ಪ್ರದೇಶದಲ್ಲಿ ಎರಡು ಎಕರೆ ಅಕೇಶಿಯಾ ಬೆಳೆದಿದ್ದರೆ, ಅದನ್ನು ಪೋರ್ಷನ್ ಆಗಿ ಕಡಿಯುವುದು. ಅರ್ಧ ಭಾಗ ಕಡಿದು ಉಳಿದರ್ಧ ಭಾಗವನ್ನು ಹಾಗೆಯೇ ಬಿಡಲಾಗುತ್ತೆ.. ಇಲ್ಲಿ ಸ್ಥಳೀಯರಿಗೆ ಟೆಂಡರ್ ಸಿಗುವುದು ಕಷ್ಟ. ಹೊರ ಊರಿನವರಿಗೆ ಕಡಿತಲೆಗೆ ಟೆಂಡರ್ ನೀಡಲಾಗುತ್ತದೆ. ಪತ್ರಿಕೆಗಳಿಗೆ ಜಾಹಿರಾತು ನೀಡದೆ. ಒಳಗಿಂದೊಳಗೆ ಆನ್ ಲೈನ್ ಟೆಂಡರ್ ಎಂದು ತಮಗೆ ಬೇಕಾದವರಿಗೆ ಟೆಂಡರ್ ನೀಡಲಾಗುತ್ತದೆ.
ಹೊರಗಿನವರಿಗೆ ಮರದ ಲೆಕ್ಕದಲ್ಲಿ ಟೆಂಡರ್ ನೀಡಿದ್ದೇವೆ ಎಂದು ಕೇಳಿದವರಿಗೆ ಅಧಿಕಾರಿಗಳು ಸಬೂಬು ನೀಡುತ್ತಾರೆ. ಇದಕ್ಕೆ ಮರದ ತುಂಡು ಕಾಟಿಂಗ್ ಗೆ ಒಂದು ಬಿಲ್, ಕಡಿದ ಮರಗಳನ್ನು ಜೋಡಿಸುವುದಕ್ಕೆ ಒಂದು ಬಿಲ್ ಜೋಡಿಸುವ ಕ್ರೈನ್ ಗೆ ಒಂದು ಬಿಲ್ ಲಾರಿಯವರಿಗೆ ಒಂದು ಬಿಲ್ ಲಾರಿಯವರಿಗೆ ದಿನಕ್ಕೆ ಎಂಟು ಸಾವಿರ ರೂಪಾಯಿ ಇದ್ದರೆ ಅವರಿಗೆ ದಕ್ಕುವುದು ಮೂರೇ ಸಾವಿರ.
ಇದರ ಲೆಕ್ಕವನ್ನು ಯಾರು ಬರೆಯುವುದಿಲ್ಲ ಯಾರೂ ಕೇಳುವುದಿಲ್ಲ. ಉದಾಹರಣೆಗೆ ಹತ್ತು ಮೀಟರ್ ಮರ ಹರಾಜು ಎಂದು ಹಾಕಿದ್ರೆ. ಅದರಲ್ಲಿ ನಾಲ್ಕು ಮೀಟರ್ ಮರ ಎಕ್ಸ್ ಟ್ರಾ ಇರುತ್ತೆ. ಇದು ಅರಣ್ಯಾಧಿಕಾರಿಗಳ ಅಡ್ ಜಸ್ಟ್ ಮೆಂಟ್. ಯಾರು ಟೇಪ್ ಇಟ್ಕೋಂಡು ಇಲ್ಲಿ ಅಳೆಯುವುದಕ್ಕೆ ಬರೋದಿಲ್ಲ. ಹಾಲಿ ತಾಲೂಕಿನಲ್ಲಿರುವ ಕಾಟಿಂಗ್ ಪ್ಲಾಟ್ ನೋಡಿದರೆ.ಗೊತ್ತಾಗುತ್ತದೆ. ಮರದ ದಪ್ಪ ಉದ್ದ ಅಗಲದ ಲೆಕ್ಕವನ್ನು ಅರಣ್ಯಾಧಿಕಾರಿ ತನ್ನ ಮೂಗಿನ ನೇರಕ್ಕೆ ಬರೆಯುತ್ತಾನೆ. ಯಾರಾದ್ರೂ ಪ್ರಶ್ನಿಸಿದರೆ ಇದು ಆನ್ ಲೈನ್ ಟೆಂಡರ್ ಎಂದು ಸಬೂಬು ಹೇಳುತ್ತಾರೆ.
ಸ್ಥಳೀಯರು ಟೆಂಡರ್ ಹಿಡಿದರೆ ಸಂಬಂಧಿಸಿದ ಅಧಿಕಾರಿ ಲ್ಲಸಲ್ಲದ ಕಠಿಣ ದಾಖಲಾತಿ ಕೇಳುತ್ತಾರೆ. ಹೊರಗಿನ ಟೆಂಡರ್ ದಾರರಾದ್ರೆ..ಹಣದ ಲೆಕ್ಕದಲ್ಲಿ ಎಲ್ಲವೂ ಸೆಟಲ್ ಆಗುತ್ತದೆ. ಸ್ಥಳೀಯ ಟೆಂಡರ್ ದಾರರು ಎಕ್ಸ್ ಟ್ರಾ ಮೀಟರ್ ಮರದ ದುಡ್ಡನ್ನು ಕೊಡುವುದಿಲ್ಲ. ಹೊರಗಿನ ಗುತ್ತಿಗೆದಾರರಾದ್ರೆ..ಹಣದ ಹೊಳೆಯೇ ಹರಿಸಿ ಸಿದಾ ಮಾಲು ಸಾಗಿಸುತ್ತಾರೆ. ಹಿಂದೆಲ್ಲಾ ಅಕೇಶಿಯಾಾ ಪ್ಲಾಂಟೇಷನ್ ಬಳಿಯೇ ಓಪನ್ ಟೆಂಡರ್ ಕರೆಯಲಾಗುತ್ತಿತ್ತು. ಈಗ ಅರಣ್ಯಾಧಿಕಾರಿಗಳು ಹಾಕಿದ ಪೋಟೋ ದಲ್ಲಿ ಆನ್ ಲೈನ್ ಬಿಡ್ ನಡೆಯುತ್ತದೆ. ಇದೊಂದು ಮಾಫೀಯವಾಗಿ ಪರಿವರ್ತನೆಯಾಗುತ್ತಿದೆ ಎನ್ನಲಾಗುತ್ತಿದೆ.
ಲಾರಿಯವರಿಗೆ ಟನ್ ಗೆ ಒಂದು ಸಾವಿರ ನೀಡಿದ್ರೆ,ಸರ್ಕಾರದ ಲೆಕ್ಕದಲ್ಲಿ ಹೆಚ್ಚಿಗೆ ಹಣವನ್ನು ತೋರಿಸಲಾಗುತ್ತಿದೆ. ಇನ್ನು ಮರದ ದಿಣ್ಣೆಗಳನ್ನು ಓವರ್ ಲೋಡ್ ಮಾಡಿಕೊಂಡು ಸಾಗುವ ಲಾರಿಗಳಿಗೆ ಆರ್ ಟಿ ಓ ಅಧಿಕಾರಿಗಳು ಕೇಳುವುದಿಲ್ಲ. ಸರ್ಕಾರಿ ನಿಯಮ ಎಲ್ಲಾ ವಾಹನಗಳಿಗೂ ಅನ್ವಯವಾಗಬೇಕಲ್ಲವೇ..ಅಕೇಶಿಯಾ ಮಾಫೀಯದ ಬಗ್ಗೆ ಅರಣ್ಯ ಜಾಗೃತಿ ದಳ ಬೆಳಕು ಚೆಲ್ಲಬೇಕಿದೆ. ಅಲ್ಲದೆ ಲೋಕಾಯುಕ್ತ ಅಧಿಕಾರಿಗಳು ಕೂಡ ಇತ್ತ ಗಮನ ಹರಿಸಬೇಕಿದೆ.