ಶಿವಮೊಗ್ಗ ರೈಲ್ವೆ ಸ್ಟೇಷನ್​ನಲ್ಲಿ ಭಾರೀ ಚಕ್ಕಿಂಗ್​! ಸ್ಪೆಷಲ್​ ಡ್ರೈವ್! ಏತಕ್ಕೆ ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS

SHIVAMOGGA |  ರೈಲುಗಳಲ್ಲಿ ದಹನಕಾರಿ ವಸ್ತುಗಳನ್ನು ಸಾಗಿಸದಂತೆ ಶಿವಮೊಗ್ಗ ರೈಲ್ವೆ ಪೊಲೀಸರು ಇಂದು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.  

ದೀಪಾವಳಿ ಹಬ್ಬ, ಹರಿದಿನಗಳು ಮತ್ತು ಇತ್ತೀಚಿನ ಅಗ್ನಿ ಅವಘಡಗಳನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಮಂಡಳಿ, ನವದೆಹಲಿ ಮತ್ತು ಆರ್‍ಪಿಎಫ್ ಹೆಡ್ ಕ್ವಾರ್ಟರ್ಸ್‍ನ ನಿರ್ದೇಶನದಂತೆ ದಹಿಸುವ ವಸ್ತುಗಳನ್ನು ಸಾಗಿಸುವುದರ ವಿರುದ್ಧ ವಿಶೇಷ ಡ್ರೈವ್ ಮತ್ತು ಸಾಮಾನ್ಯ ಜಾಗೃತಿಯನ್ನು ಇಂದು ಶಿವಮೊಗ್ಗ ರೈಲ್ವೇ ಸ್ಟೇಷನ್‍ನಲ್ಲಿ ಮೂಡಿಸಲಾಯ್ತು. 

ಪೋಸ್ಟ್​  ಕಮಾಂಡರ್, ರೈಲ್ವೆ  ಪ್ರೋಟೆಕ್ಷನ್ ಫೋರ್ಸ್, ಶಿವಮೊಗ್ಗ ಇವರ ವತಿಯಿಂದ ಈ ಡ್ರೈವ್ ಆಯೋಜಿಸಲಾಗಿತ್ತು.   ರೈಲುಗಳಲ್ಲಿ ಅಥವಾ ರೈಲ್ವೇ ಆವರಣದಲ್ಲಿ ಯಾವುದೇ ದಹನಕಾರಿ ವಸ್ತುಗಳು, ಪಟಾಕಿಗಳನ್ನು ಕೊಂಡೊಯ್ಯದಂತೆ ತಿಳಿವಳಿಕೆ ಮೂಡಿಸುವ ಮೂಲಕ ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ಪ್ರಯಾಣಿಕರಿಗೆ ಅರಿವು ಮೂಡಿಸಲಾಯಿತು.

READ : ಅರಸಾಳು, ಹಾರ್ನಳ್ಳಿಯಲ್ಲಿ ರೈಲು ನಿಲ್ಲಿಸ್ತಾರಾ? ಶಿವಮೊಗ್ಗಕ್ಕೂ ಬರುತ್ತಾ ವಂದೆ ಭಾರತ್ ಟ್ರೈನ್​​ ? ಶಿವಮೊಗ್ಗ -ಬೆಂಗಳೂರು-ಮೈಸೂರು ಟ್ರೈನ್​ ಟೈಮಿಂಗ್ಸ್​ ಬದಲಾಗುತ್ತಾ!?

ರೈಲುಗಳಲ್ಲಿ ಪಟಾಕಿ , ಸಿಲೆಂಡರ್ ಗ್ಯಾಸ್ ಇತರೆ ದಹನಕಾರಿ ವಸ್ತುಗಳನ್ನು ಸಾಗಿಸುವುದು ಕಂಡು ಬಂದರೆ ರೈಲ್ವೇ ಕಾಯ್ದೆ 164 ವಿಧಿಯ ಪ್ರಕಾರ 3 ವರ್ಷ ಜೈಲು ಶಿಕ್ಷೆ ಅಥವಾ ರೂ.1000 ದವರೆಗೆ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

ಈ ವೇಳೆ ಆರ್‍ಪಿಎಫ್ ಇನ್ಸ್‍ಪೆಕ್ಟರ್ ಬಿ ಎನ್ ಕುಬೇರಪ್ಪ, ಸಬ್ ಇನ್ಸ್‍ಪೆಕ್ಟರ್ ಸಂತೋಷ್ ಗಾಂವ್ಕರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.


ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor