KARNATAKA NEWS/ ONLINE / Malenadu today/ Oct 19, 2023 SHIVAMOGGA NEWS’
ಇತ್ತೀಚೆಗೆಷ್ಟೆ ತೀರ್ಥಹಳ್ಳಿಯ ನಾಲ್ವರಿಗೆ ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀ ತನಿಖಾ ದಳ ನೋಟಿಸ್ ನೀಡಿತ್ತು. ಇದರ ನಡುವೆ ಎನ್ಐಎ ನಡೆಸ್ತಿರುವ ತೀರ್ಥಹಳ್ಳಿ ಶಂಕಿತರ ವಿಚಾರಣೆಯಲ್ಲಿ ಕೆಲವೊಂದು ವಿಚಾರಗಳು ಹೊರಬಿದ್ದಿವೆ.
ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಶಾರೀಖ್ ಹಾಗೂ ಅರಾಫತ್ ಅಲಿ ಟೀಂ ಮಂಗಳೂರು (Mangaluru) ಕುಕ್ಕರ್ ಸ್ಫೋಟಕ್ಕೆ ಸಂಚು ರೂಪಿಸಿದ್ದು ನಿಜ. ಆದರೆ ಟಾರ್ಗೆಟ್ ಕೇವಲ ಕದ್ರಿ ದೇವಸ್ಥಾನವಷ್ಟೆ ಆಗಿರಿಲಿಲ್ಲ. ಈ ಪ್ಲಾನ್ ಸಕ್ಸಸ್ ಆಗಿದ್ದರೇ ಉಡುಪಿ ಕೃಷ್ಣ ಮಠ ಹಾಗೂ ಚಿಕ್ಕಮಗಳೂರು ಬಿಜೆಪಿಯ ಕಚೇರಿಯನ್ನು ಬ್ಲಾಸ್ಟ್ ಮಾಡಲು ಪ್ಲಾನ್ ಆಗಿತ್ತು ಎನ್ನಲಾಗಿದೆ.
ಈ ಬಗ್ಗೆ ರಾಜ್ಯಮಟ್ಟದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಅದರ ಪ್ರಕಾರ, ಕದ್ರಿ ದೇವಸ್ಥಾನದ ಗುರಿಯು ಫೇಲ್ ಆಗಿದ್ದರಿಂದ ಉಳಿದೆಲ್ಲಾ ಟಾರ್ಗೆಟ್ಗಳನ್ನು ಶಂಕಿತರು ಕೈ ಬಿಟ್ಟಿದ್ದರಂತೆ. ಸದ್ಯ ಎನ್ಐಎ ನಡೆಸ್ತಿರುವ ತನಿಖೆಯಲ್ಲಿ ಈ ವಿಚಾರ ಹೊರಬಿದ್ದಿದೆ ಎಂದು ಹೇಳಲಾಗಿದೆ.
ಇನ್ನಷ್ಟು ಸುದ್ದಿಗಳು
ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ