ಪತ್ನಿ ಅಗಲಿದ ಮೂರೆ ದಿನಕ್ಕೆ ಪತಿ ಸಾವು! ಸಮವಸ್ತ್ರದಲ್ಲಿಯೇ ನೇಣುಬಿಗಿದುಕೊಂಡು ಶಿವಮೊಗ್ಗ ಸಂಚಾರಿ ಠಾಣೆ ಮುಖ್ಯಪೇದೆ ಜಯಪ್ಪ ನಿಧನ

This Article Written by / Malenadu Today / ಅಕ್ಟೋಬರ್ 2, 2023

KARNATAKA NEWS/ ONLINE / Malenadu today/ Oct 2, 2023 SHIVAMOGGA NEWS’ 

 

ಶಿವಮೊಗ್ಗ ನಗರ ಪಶ್ಚಿಮ ಸಂಚಾರಿ ಪೊಲೀಸ್ ಸ್ಟೇಷನ್​ ಮುಖ್ಯಪೇದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಗ್ಗೆ ಕೆಲಸಕ್ಕೆ ಬಂದ ಮುಖ್ಯ ಪೇದೇ ಜಯಪ್ಪ ಉಪ್ಪಾರ್​  ಮನೆಗೆ ವಾಪಸ್ ತೆರಳಿ ನೇಣಿಗೆ ಶರಣಾಗಿದ್ದಾರೆ. 

ಮೂರು ದಿನಗಳ ಹಿಂದೆ ಇವರ ಪತ್ನಿ ಸಾವನ್ನಪ್ಪಿದ್ದರು. ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿದ್ದ  ಪತ್ನಿಯ ಸಾವಿನಿಂದ ಮುಖ್ಯಪೇದೆಯವರು ತೀವ್ರವಾಗಿ ನೊಂದಿದ್ದರು. 

ಇಂದು ಬೆಳಗ್ಗೆ ಡ್ಯೂಟಿಗೆ ಬಂದಿದ್ದ ಜಯಪ್ಪ, ಬಳಿಕ ಹಗ್ಗ ಖರೀದಿ ಮಾಡಿಕೊಂಡು ವಿನೋಬನಗರ ಚೌಕಿ ಬಳಿ ಇರುವ ತಮ್ಮ ಮನೆಗೆ ತೆರಳಿದ್ದಾರೆ. ಅಲ್ಲಿ ಮನೆಯ ಮೇಲುಗಡೆ ಇರುವ ಶೆಡ್​ಗೆ ಹಾಕಿದ್ದ ಬೀಮ್​ಗೆ ಸಮವಸ್ತ್ರದಲ್ಲಿಯೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. 

ಸದ್ಯ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸ್ ಸಿಬ್ಬಂದಿ ಸ್ನೇಹಜೀವಿಯಾಗಿದ್ದ ಜಯಪ್ಪರ ಅಗಲಿಕೆಗೆ ದುಃಖ ವ್ಯಕ್ತಪಡಿಸುತ್ತಿದ್ದಾರೆ 


ಇನ್ನಷ್ಟು ಸುದ್ದಿಗಳು 

  1. ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ! ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ! ಎಲ್ಲೆಲ್ಲಿಗೆ ಯಾರ್ಯಾರು ಓದಿ

  2. 2 ಲಕ್ಷ ಜನ! 3 ಸಾವಿರಕ್ಕೂ ಹೆಚ್ಚು ಪೊಲೀಸ್ ! ನಾಳಿನ ಬಂದೋಬಸ್ತ್​ ಬಗ್ಗೆ ಎಸ್​ಪಿ ಬ್ರೀಫಿಂಗ್​!

  3. ಹಿಂದೂ ಮಹಾಸಭಾದ ಮೊದಲ ಗಣಪತಿ ಪ್ರತಿಷ್ಟಾಪನೆಯಾಗಿದ್ದು ಶಿವಮೊಗ್ಗದಲ್ಲೆ! ಇಲ್ಲಿದೆ ನೋಡಿ ಇತಿಹಾಸದ ವಿನಾಯಕನ ದೃಶ್ಯಗಳು!

  4. ಹಿಂದೂ ಮಹಾಸಭಾ ಗಣಪತಿಗೆ ಸರ್ವಧರ್ಮ ‘ಸೌಹಾರ್ದ’ ಹೂವಿನ ಹಾರ!


 

ಮುಂದಿನ ಸುದ್ದಿ ಒದಿ

Leave a Comment