ಗಂಟೆ ಹನ್ನೆರಡಾದರೂ ತಗ್ಗದ ಜನ ಜಂಗುಳಿ! ಮೊಬೈಲ್​ಗಳಲ್ಲಿ ಉಗ್ರಂ ವೀರಂ ಹಾವಳಿ! ಗಾಂಧಿಬಜಾರ್​ ನಲ್ಲಿ ಹೇಗಿತ್ತು ಗೊತ್ತಾ ಸನ್ನಿವೇಶ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 28, 2023 SHIVAMOGGA NEWS’ 

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆಯಲ್ಲಿ ಶಿವಮೊಗ್ಗ ಸಿಟಿ ಕೇಸರಿ ಮಯವಾಗಿದೆ. ಎಲ್ಲಿ ನೋಡಿದರೂ ಲೈಟಿಂಗ್ಸ್ ಹಾಗೂ ಕೇಸರಿ ಬಣ್ಣದ ಬಟಿಂಗ್ಸ್, ಬ್ಯಾನರ್​ಗಳು ರಾರಾಜಿಸುತ್ತಿವೆ. ವಿಶೇಷವಾಗಿ ಈ ಸಲ ಸನಾತನ ಹಿಂದೂ ಧರ್ಮದ ಕಾನ್ಸೆಪ್ಟ್​ನಲ್ಲಿ ಅಲಂಕಾರ ಕೈಗೊಳ್ಳಲಾಗಿದ್ದು, ಎಲ್ಲೆಡೆ ಸನಾತನ ಹಿಂಧೂ ಧರ್ಮಕ್ಕೆ ಸಂಬಂಧಿಸಿದ ಘಟನೆಗಳು ಹಾಗೂ ಇತಿಹಾಸ ಪುರುಷರ ಚಿತ್ರಗಳು ಮತ್ತು ದೇವರ ಅವತಾರಗಳ ಚಿತ್ರಣವನ್ನು ಪ್ರದರ್ಶನ ಮಾಡಲಾಗುತ್ತಿದೆ. 

ಗಂಟೆ ಹನ್ನೆರಡಾದರೂ ತಗ್ಗದ ಜನ ಜಂಗುಳಿ! ಮೊಬೈಲ್​ಗಳಲ್ಲಿ ಉಗ್ರಂ ವೀರಂ ಹಾವಳಿ! ಗಾಂಧಿಬಜಾರ್​ ನಲ್ಲಿ ಹೇಗಿತ್ತು ಗೊತ್ತಾ ಸನ್ನಿವೇಶ

ಇನ್ನೂ ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತದಲ್ಲಿ ಸ್ಥಾಪಿಸಲಾಗಿರುವ ಉಗ್ರ ನರಸಿಂಹನ ಅವತಾರ ನೋಡಲು ಜನಸಾಗರವೇ ಮುಗಿಬಿದ್ದಿದೆ. ನಿನ್ನೆ ಪೊಲೀಸ್ ಇಲಾಖೆ ರಾತ್ರಿ 8.30 ಸುಮಾರಿಗೆ ಅಂಗಡಿಗಳನ್ನು ಕ್ಲೋಸ್ ಮಾಡಿಸಿತ್ತು. ಆದರೆ, ಜನರು ಮನೆಗೆ ಹೋಗದೇ ಶಿವಪ್ಪನಾಯಕ ಸರ್ಕಲ್ ಬಳಿಗೆ ದಾವಿಸಿದರು, ಗೋಪಿ ಸರ್ಕಲ್​, ಅಮೀರ್​ ಅಹಮದ್ ಸರ್ಕಲ್​ ಹಾಗೂ ಶಿವಪ್ಪನಾಯಕ ಸರ್ಕಲ್​ಗಳಲ್ಲಿ ನಡೆಯುತ್ತಿರುವ ಕೆಲಸ ಹಾಗೂ ಮಾಡಲಾದ ಅಲಂಕಾರಗಳನ್ನು ಕಣ್ತುಂಬಿಕೊಳ್ತಿದ್ದ ಜನರು ಸೆಲ್ಪಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ಅಲ್ಲದೆ ವಿಡಿಯೋ ಮಾಡಿ ರೀಲ್ಸ್​ಗಳಲ್ಲಿ ಹರಿಬಿಡುತ್ತಿದ್ದರು. 

ಗಂಟೆ ಹನ್ನೆರಡಾದರೂ ತಗ್ಗದ ಜನ ಜಂಗುಳಿ! ಮೊಬೈಲ್​ಗಳಲ್ಲಿ ಉಗ್ರಂ ವೀರಂ ಹಾವಳಿ! ಗಾಂಧಿಬಜಾರ್​ ನಲ್ಲಿ ಹೇಗಿತ್ತು ಗೊತ್ತಾ ಸನ್ನಿವೇಶ

ನಿನ್ನೆ ರಾತ್ರಿ ಒಂದು ಗಂಟೆ ಸುಮಾರಿನವವರೆಗೂ ಶಿವಪ್ಪನಾಯಕ ವೃತ್ತದಲ್ಲಿ ಜನ ಜಂಗುಳಿ ಮನೆ ಮಾಡಿತ್ತು. ಕುಟುಂಬ ಸಮೇತ ಬರುತ್ತಿದ್ದ ಜನರನ್ನು ಪೊಲೀಸರು ನಿಯಂತ್ರಿಸುವ ಕೆಲಸ ಮಾಡಲಿಲ್ಲ. ಬದಲಾಗಿ ಇನ್ನಷ್ಟು ಬಂದೋಬಸ್ತ್ ಮಾಡಿ ಜನರ ಸಂಭ್ರಮಕ್ಕೆ ಅವಕಾಶ ಮಾಡಿಕೊಟ್ಟರು. ಸೆಲ್ಪಿ  ಪಾಯಿಂಟ್​ಗಳಲ್ಲಿ ಸೆಲ್ಪಿ ತೆಗೆದುಕೊಳ್ತಿದ್ದ ಜನರು ಉಗ್ರನರಸಿಂಹನ (Ugra Narasimha) ಅವತಾರಕ್ಕೆ ಫಿದಾ ಆಗಿದ್ದಾರೆ. 

ಗಂಟೆ ಹನ್ನೆರಡಾದರೂ ತಗ್ಗದ ಜನ ಜಂಗುಳಿ! ಮೊಬೈಲ್​ಗಳಲ್ಲಿ ಉಗ್ರಂ ವೀರಂ ಹಾವಳಿ! ಗಾಂಧಿಬಜಾರ್​ ನಲ್ಲಿ ಹೇಗಿತ್ತು ಗೊತ್ತಾ ಸನ್ನಿವೇಶ


ಇನ್ನಷ್ಟು ಸುದ್ದಿಗಳು 

  1. ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ! ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ! ಎಲ್ಲೆಲ್ಲಿಗೆ ಯಾರ್ಯಾರು ಓದಿ

  2. 2 ಲಕ್ಷ ಜನ! 3 ಸಾವಿರಕ್ಕೂ ಹೆಚ್ಚು ಪೊಲೀಸ್ ! ನಾಳಿನ ಬಂದೋಬಸ್ತ್​ ಬಗ್ಗೆ ಎಸ್​ಪಿ ಬ್ರೀಫಿಂಗ್​!

  3. ಹಿಂದೂ ಮಹಾಸಭಾದ ಮೊದಲ ಗಣಪತಿ ಪ್ರತಿಷ್ಟಾಪನೆಯಾಗಿದ್ದು ಶಿವಮೊಗ್ಗದಲ್ಲೆ! ಇಲ್ಲಿದೆ ನೋಡಿ ಇತಿಹಾಸದ ವಿನಾಯಕನ ದೃಶ್ಯಗಳು!

  4. ಹಿಂದೂ ಮಹಾಸಭಾ ಗಣಪತಿಗೆ ಸರ್ವಧರ್ಮ ‘ಸೌಹಾರ್ದ’ ಹೂವಿನ ಹಾರ!


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor