310 ಅರಣ್ಯ ವೀಕ್ಷಕ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ! ನೇರ ನೇಮಕಾತಿಗೆ ಸಿದ್ದರಾಗಿ! ಇಲ್ಲಿದೆ ವಿವರ

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS’

ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರಣ್ಯ ಇಲಾಖೆ ಅರಣ್ಯ ವೀಕ್ಷಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ ಈ ಸಂಬಂಧ ಸರ್ಕಾರದಿಂದ ಪ್ರಕಟಣೆಯು ಹೊರಬಿದ್ದಿದೆ. ಬೆಂಗಳೂರು, ಬಳ್ಳಾರಿ/ ಬೆಳಗಾವಿ/ ಚಾಮರಾಜನಗರ/ ಚಿಕ್ಕಮಗಳೂರು/ ಧಾರವಾಡ/ ಹಾಸನ/ ಕಲಬುರ್ಗಿ/ ಕೊಡಗು, ಮಂಗಳೂರು, ಮೈಸೂರು, ಶಿವಮೊಗ್ಗದಲ್ಲಿ ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 413 ಅರಣ್ಯ ವೀಕ್ಷಕ ಹುದ್ದೆ ಗಳನ್ನು  ಭರ್ತಿ ಮಾಡಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದ್ದು, ಈ ಸಂಬಂಧ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು,  ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಿದದೆ. ಶೇಕಡ 75ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕಾಗಿದ್ದು, ಅದರನ್ವಯ 310 ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. 

ಎಲ್ಲೆಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಇಲ್ಲಿದೆ ಪ್ರಕಟಣೆಯ ವಿವರ 

ಚಾಮರಾಜನಗರ ವೃತ್ತ: 32

ಚಿಕ್ಕಮಗಳೂರು ವೃತ್ತ: 25

ಧಾರವಾಡ ವೃತ್ತ: 7

ಹಾಸನ ವೃತ್ತ: 20

ಕೆನರಾ ವೃತ್ತ: 32

ಕೊಡಗು ವೃತ್ತ: 16

ಕಲಬುರ್ಗಿ ವೃತ್ತ: 23

ಮಂಗಳೂರು ವೃತ್ತ: 20

ಮೈಸೂರು ವೃತ್ತ: 32

ಶಿವಮೊಗ್ಗ ವೃತ್ತ: 30

ಒಟ್ಟು : 310

ಇನ್ನೂ ಶಿವಮೊಗ್ಗದಲ್ಲಿ ಶಿವಮೊಗ್ಗ ವಿಭಾಗ -08ಹುದ್ದೆಗಳು, ಭದ್ರಾವತಿ ವಿಭಾಗ -08ಹುದ್ದೆಗಳ, ಸಾಗರ ವಿಭಾಗ -06ಹುದ್ದೆಗಳು, ಶಿವಮೊಗ್ಗ ವನ್ಯಜೀವಿ ವಿಭಾಗ -08ಹುದ್ದೆಗಳಿವೆ.  ದಿನಾಂಕ :27.09.2023ರಿಂದ 26.10.2023ರ ವರೆಗಿನ ಅವಧಿಯಲ್ಲಿ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಸಂಬಂಧ ಕರಡು ಅಧಿಸೂಚನೆ ಹೊರಬಿದ್ದಿದೆ. 


ಇನ್ನಷ್ಟು ಸುದ್ದಿಗಳು 

 


 

Leave a Comment