ಇವರ ಸುಳಿವು ಸಿಕ್ಕರೆ ಕೂಡಲೇ ಸಾಗರ ಪೊಲೀಸರಿಗೆ ಕರೆ ಮಾಡಿ ತಿಳಿಸಿ!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS

ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಮನವಿ 

ಶಿವಮೊಗ್ಗ ಜಿಲ್ಲೆ  ಸಾಗರ ಟೌನ್ ಕತ್ತಲೆ ಬಜಾರ್ ಜೆ.ಪಿ ನಗರ ವಾಸಿಯ ಮಂಜುನಾಥ್ ಎನ್ ಎಂಬ 38 ವರ್ಷದ ವ್ಯಕ್ತಿ 2023ರ ಜನವರಿ 04 ರಂದು ಮನೆಯಿಂದ ಹೋದವರು ವಾಪಸ್ಸಾಗಿರುವುದಿಲ್ಲ. 

ಈ ವ್ಯಕ್ತಿಯ ಚಹರೆ 152.ಮೀ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಕಾಫಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. 

ಇನ್ನೊಂದು ಪ್ರಕರಣದಲ್ಲಿ ಸಾಗರ ಟೌನ್ ವಿನೋಬ ನಗರ ವಾಸಿಯ ಮಹಾದೇವ ಎಂಬ 71 ವರ್ಷದ ವ್ಯಕ್ತಿ 2023ರ ಜೂನ್ 08 ರಂದು ಮನೆಯಿಂದ ಹೋದವರು ವಾಪಸ್ಸಾಗಿರುವುದಿಲ್ಲ.   

ಈ ವ್ಯಕ್ತಿಯ ಚಹರೆ 175.ಮೀ ಎತ್ತರ, ಗೋಧಿ ಮೈಬಣ್ಣ, ಉದ್ದ ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಲರ್ ಟೀ ಶರ್ಟ್ ಮತ್ತು ಬರ್ಮುಡಾ ಧರಿಸಿರುತ್ತಾರೆ. ಕಾಣೆಯಾಗಿರುವ ಈ ವ್ಯಕ್ತಿಗಳ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಸಾಗರ ಟೌನ್ ಪೊಲೀಸ್ ಸಾಗರ, ದೂ. ಸಂ.: ಸಾಗರ ಪೇಟೆ ಪೊಲೀಸ್ ಠಾಣೆ 08183-226067(9480803360), ಎಎಸ್‍ಪಿ, ಸಾಗರ 08183-226082,  ಶಿವಮೊಗ್ಗ 08182-262400 ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.


ಇನ್ನಷ್ಟು ಸುದ್ದಿಗಳು 


 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor