KARNATAKA NEWS/ ONLINE / Malenadu today/ Aug 29, 2023 SHIVAMOGGA NEWS
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇದೇ ಆಗಸ್ಟ್ 31 ರಂದು ಬೆಂಗಳೂರಿನಿಂದ ಮೊದಲ ವಿಮಾನ ಬಂದಿಳಿಯಲಿದೆ. ಮೊದಲ ಪ್ಯಾಸೆಂಜರ್ ಆಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರೇ ಪ್ಲೈಟ್ನಲ್ಲಿ ಆಗಮಿಸಲಿದ್ದು, ಸಚಿವ ಎಂ.ಬಿ.ಪಾಟೀಲ್, ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವರು ಶಿವಮೊಗ್ಗಕ್ಕೆ ಬಂದಿಳಿಯಲಿದ್ದಾರೆ.
ಈ ಮಧ್ಯೆ ಶಿವಮೊಗ್ಗ ಸಿಟಿಯಿಂದ-ವಿಮಾನ ನಿಲ್ದಾಣಕ್ಕೆ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವ ಕೆಎಸ್ಆರ್ಟಿಸಿ ಸಂಸ್ಥೆ ಶಿವಮೊಗ್ಗದಿಂದ ವಿಮಾನ ನಿಲ್ದಾಣದವರೆಗೂ ಬಸ್ ಸೌಲಭ್ಯವನ್ನು ಒದಗಿಸಿದೆ. ಈ ಸಂಬಂಧ ಇವತ್ತು ಮೊದಲ ಬಸ್ ವಿಮಾನ ನಿಲ್ದಾಣದವರೆಗೂ ಸಂಚರಿಸಿತು.
ಶಿವಮೊಗ್ಗ ಬಸ್ ನಿಲ್ದಾಣದಿಂದ ವಿಮಾನನಿಲ್ದಾಣದವರೆಗಿನ ರೂಟ್ನಲ್ಲಿ ಸಂಚರಿಸಲಿರುವ ಬಸ್, ಕಾಚಿನಕಟ್ಟೆ, ಎಂಆರ್ಎಸ್ ಸೇರಿದಂತೆ ವಿವಿಧ ಕಡೆಗಳಲ್ಲಿ ನಿಲ್ಲಲಿದೆ. ಇನ್ನೂ ವಿಮಾನ ನಿಲ್ದಾಣಕ್ಕೆ ನೂತನವಾಗಿ ಬಸ್ ಸೌಕರ್ಯ ಕಲ್ಪಿಸಿರುವುದಕ್ಕೆ ಕಾಚಿನಕಟ್ಟೆ ಗ್ರಾಮಸ್ಥರು ಸಂತೋಷಗೊಂಡಿದ್ದು, ಬಸ್ಗೆ ಇವತ್ತು ಪೂಜೆ ಸಲ್ಲಿಸಿದ್ರು.
ಇನ್ನಷ್ಟು ಸುದ್ದಿಗಳು
ಪ್ರೀತಿ ಪೆಟ್ಟು ಹುಷಾರು! ಪ್ರೇಮಿಸಿದ ಯುವಕನನ್ನ ಕೂಡಿ ಹಾಕಿ ಹೊಡೆದ ಹುಡುಗಿ ಕಡೆಯವರು! ದಾಖಲಾಯ್ತು ಎಫ್ಐಆರ್!
ಮನೆ ಹಿತ್ತಲಲ್ಲಿದ್ದ ಬಾವಿಗೆ ಬಿದ್ದ ಮಹಿಳೆ! ಬಚಾವ್ ಆಗಿದ್ದೇ ಹೆಚ್ಚು! ನಡೆದಿದ್ದೇನು?