ಬಿಎಸ್​ವೈ ಪುತ್ರನಿಗೆ ಕಾಗೋಡು ತಿಮ್ಮಪ್ಪ ರವರು ಕೊಟ್ಟ ಗೌರವ ನೋಡಿ ಹುಬ್ಬೇರಿಸಿದ ವೇದಿಕೆ! ಏನಿದು ವಿಡಿಯೋ ನೋಡಿ!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS

ರಾಜಕೀಯ ನಾಯಕರು ಸೈದ್ದಾಂತಿಕವಾಗಿ ಬಿನ್ನಾಭಿಪ್ರಾಯ ಹೊಂದಿರುತ್ತಾರೆ ಹೊರತು ವೈಯಕ್ತಿಕವಾಗಿ ಸ್ನೇಹವನ್ನ ಹೊಂದಿರುತ್ತಾರೆ. ಅದರಲ್ಲಿಯು ಮಲೆನಾಡಿನ ಹಿರಿಯ ರಾಜಕಾರಣಿಗಳು, ಕಿರಿಯರಿಗೆ ಉತ್ತಮವಾದುದನ್ನೇ ಹೇಳಿಕೊಟ್ಟು, ಅನುಭವವನ್ನ ದಾರೆ ಎರೆದು, ವಿನಯತೆ ಮಾನವೀಯತೆಯ ಪಾಠ ಹೇಳಿಕೊಡುತ್ತಾರೆ. ಇಂತಹದ್ದೊಂದು ವಿಶೇಷ ಪಾಠಕ್ಕೆ ಸಾಕ್ಷಿಯಾಗಿತ್ತು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ನಡೆದ ಅಪ್ಕೋಸ್ ಸುವರ್ಣ ಮಹೋತ್ಸವದ ಕಾರ್ಯಕ್ರಮ. 

ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳಿಗೆಲ್ಲರಿಗೂ ಆಹ್ವಾನ ನೀಡಿದ್ದ ಕಾರ್ಯಕ್ರಮದಲ್ಲಿ ಮೊದಲಿಗರಾಗಿ ಶಾಸಕ ಬೇಳೂರು ಗೋಪಾಲಕೃಷ್ಣ, ಸಚಿವ ರಾಜಣ್ಣ, ಕಾಂಗ್ರೆಸ್​ ಆರ್​ಎಂ ಮಂಜುನಾಥ್​ ಗೌಡರು,  ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪನವರು  ವೇದಿಕೆಯಲ್ಲಿ ಆಸೀನರಾಗಿದ್ದರು. ಅಷ್ಟೊತ್ತಿಗೆ ಅಲ್ಲಿಗೆ ಬಿವೈ ರಾಘವೇಂದ್ರ  ರವರು ಬಂದರು. ಅವರನ್ನ ಈ ಕಡೆಗೆ ಬನ್ನಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣರವರು ಕರೆದರು. ಇದೇ ವೇಳೆ,   ರಾಜಣ್ಣರವರ ಜೊತೆ ಮಾತನಾಡುತ್ತಿದ್ದ ಕಾಗೋಡು ತಿಮ್ಮಪ್ಪನವರು ಸಂಸದರನ್ನ ನೋಡುತ್ತಲೇ ಎದ್ದು ನಿಂತರು , ಬಾರಾ ಎಂದು ಮಲೆನಾಡ ಮಾತಲ್ಲೆ ಕರೆದ ಅವರು ತಾವು ಕುಳಿತಿದ್ದ ಜಾಗದಲ್ಲಿಯೇ ಕುಳಿತುಕೋ ಎಂದು ಕುರ್ಚಿ ಬಿಟ್ಟುಕೊಟ್ಟರು. ತಕ್ಷಣವೇ ಬೇಡ ಎಂದ ಸಂಸದ ಬಿ.ವೈ. ರಾಘವೇಂದ್ರ ಕಾಗೋಡುರವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಬಳಿಕ ಕಾಗೋಡು ತಿಮ್ಮಪ್ಪನವರು ತಮ್ಮ ಪಕ್ಕದಲ್ಲಿಯೇ ಕೂರುವಂತೆ ಕೂರಿಸಿಕೊಂಡು , ರಾಘವೇಂದ್ರರವರ ಕೈ ಹಿಡಿದುಕೊಂಡು ಯೋಗಕ್ಷೇಮ ವಿಚಾರಿಸಿದರು. ಇದಕ್ಕೆ ಅಲ್ಲಿದ್ದ ಮುಖಂಡರು ಸಾಕ್ಷಿಯಾದರು.  

ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor