KARNATAKA NEWS/ ONLINE / Malenadu today/ Aug 1, 2023 SHIVAMOGGA NEWS
ಶಿವಮೊಗ್ಗ ಮೆಸ್ಕಾಂ ವಿಭಾಗ ಇದೇ ಆಗಸ್ಟ್ 2 ರಂದು ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 02 ರ ಬೆಳಿಗ್ಗೆ 09.00 ರಿಂದ ಮಧ್ಯಾಹ್ನ 1.00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲೆಲ್ಲಿ ಕರೆಂಟ್ ಕಟ್
ಪೊಲೀಸ್ ಚೌಕಿ, ಸೂಡಾ ಕಚೇರಿ, ದಯಾನನ ಪ್ರಿಂಟರ್ಸ್, ಕೆಂಚಪ್ಪ ಲೇಔಟ್, ಎನ್.ಎಂ.ಸಿ ಕಾಂಪೌಂಡ್, ಕುವೆಂಪು ಬಡಾವಣೆ, ಲಕ್ಷ್ಮೀಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಇನ್ನಷ್ಟು ಸುದ್ದಿಗಳು