BREAKING NEWS / ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ/ ಶಿವಮೊಗ್ಗದಲ್ಲಿಯು ರೇಡ್! ವಿವರ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Apr 24, 2023 GOOGLE NEWS


ಶಿವಮೊಗ್ಗ  /  ರಾಜ್ಯದಲ್ಲಿ ಇವತ್ತು  ಲೋಕಾಯುಕ್ತ ಅದಿಕಾರಿಗಳು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ವಿವಿಧ ಅಧಿಕಾರಿಗಳ ಮನೆಗಳ ಮೇಲೆ  ರೇಡ್ ನಡೆಸಲಾಗಿದೆ. 

ಶಿವಮೊಗ್ಗದಲ್ಲಿಯು ರೇಡ್

ಶಿವಮೊಗ್ಗ ಜಿಲ್ಲೆಯಲ್ಲಿ ವಿವಿದೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ, ನಿವೃತ್ತಿಯಾಗಿರುವ ಅಧಿಕಾರಿಯೊಬ್ಬರ ಮನೆ ಹಾಗೂ ಫಾರ್ಮ್​ ಹೌಸ್ ಮತ್ತು ಇತರ ಆಸ್ತಿಗಳ ಮೇಲೆ  ರೇಡ್ ಆಗಿದೆ ಎನ್ನಲಾಗುತ್ತಿದೆ.  

ದಾವಣಗೆರೆಯಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಹೊಳಲ್ಕೆರೆ ಅಧಿಕಾರಿಯವರಿಗೆ ಸೇರಿರುವ ಶಿಕಾರಿಪುರದ ನಿವಾಸದ ಮೇಲೂ ರೇಡ್​ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ನಿವೃತ್ತ ಡಿಸಿಎಫ್ ನಾಗರಾಜ್ ,  ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್ ರವರ ಆಸ್ತಿಗಳ ಮೇಲೆ ಲೋಕಾಯುಕ್ತರು ರೇಡ್ ನಡೆಸಿ ಪರಿಶೀಲನೆ ನಡೆಸ್ತಿದ್ದಾರೆ. 

ಒಟ್ಟು ಏಳು ಸ್ಥಳಗಳಲ್ಲಿ ರೇಡ್ ಆಗಿದೆ ಎನ್ನಲಾಗಿದ್ದು,  ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.  

ಬೆಂಗಳೂರಿನಲ್ಲಿ ಬಿಬಿಎಂಪಿ ಅದಿಕಾರಿಯೊಬ್ಬರ ಮೇಲೆ ರೇಡ್ ನಡೆದಿದ್ದು, ಅವರ ನಿವಾಸದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. 

ಇನ್ನೂ ಕೋಲಾರದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಮೇಲೆ ರೇಡ್ ನಡೆದಿದ್ದು, ಬೀದರ್​ ಹಾಗೂ ಬೆಳ್ತಂಗಡಿಯಲ್ಲಿಯು ಅಧಿಕಾರಿಗಳು ಕಾರ್ಯಾಚರಣೆ ನಡೆಸ್ತಿದ್ದಾರೆ. 

Malenadutoday.com Social media

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor