ಲಾಂಚ್ ಡೋರ್​ ಕೇಬಲ್ ಕಟ್/ ಶರಾವತಿ ಹಿನ್ನೀರಿಗೆ ಬಿದ್ದ ಬೈಕ್ ಮತ್ತು ಲಾಂಚ್ ಸಿಬ್ಬಂದಿ! ಆಗಿದ್ದೇನು!?

ಹಂಚಿಕೊಳ್ಳಿ
WhatsApp Facebook X Telegram
ಲಾಂಚ್ ಡೋರ್​ ಕೇಬಲ್ ಕಟ್/ ಶರಾವತಿ ಹಿನ್ನೀರಿಗೆ ಬಿದ್ದ ಬೈಕ್ ಮತ್ತು ಲಾಂಚ್ ಸಿಬ್ಬಂದಿ! ಆಗಿದ್ದೇನು!?

KARNATAKA NEWS/ ONLINE / Malenadu today/ May 1, 2023 GOOGLE NEWS


ಹೊಸನಗರಶಿವಮೊಗ್ಗ/  ಇಲ್ಲಿನ ಹಸಿರುಮಕ್ಕಿ ಲಾಂಚ್ ನಲ್ಲಿ ನಿನ್ನೆ ದುರ್ಘಟಣೆಯೊಂದು ಸಂಭವಿಸಿದೆ. ಲಾಂಚ್​ನ ಡೋರ್​ ಕೇಬಲ್​ ಕಟ್ ಆಗಿ, ಡೋರ್ ಮೇಲೆ ನಿಂತಿದ್ದ ಬೈಕ್​ ನೀರಿಗೆ ಬಿದ್ದಿದೆ.ಈ ವೇಳೆ ಬೈಕ್​ನ್ನ ಹಿಡಿದುಕೊಳ್ಳಲು ಮುಂದಾದ ಲಾಂಚ್ ಸಿಬ್ಬಂದಿ ಕೂಡ ಹಿನ್ನಿರಿಗೆ ಬಿದ್ದಿದ್ದಾರೆ.

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 

ಏನಾಗಿದ್ದು?

ಶರಾವತಿ ಹಿನ್ನೀರಿನಲ್ಲಿ (Sharavati back water) ಹಸಿರು ಮಕ್ಕಿ ಕಡೆಯಿಂದ ಲಾಂಚ್​ ಇನ್ನೊಂದು ಬದಿಯ ದಡದ ಹತ್ತಿರ ಬರುತ್ತಿತ್ತು. ಈ ವೇಳೆ ಲಾಂಚ್​ನ ಡೋರ್​ಗೆ ಹಾಕಲಾಗಿದ್ದ ಕೇಬಲ್ ಕಟ್ ಆಗಿದೆ. ಪರಿಣಾಮ ಅದರ ಮೇಲೆ ನಿಲ್ಲಿಸಿದ್ದ ಬೈಕ್ ಹಿನ್ನೀರಿಗೆ ಬೀಳಲು ಆರಂಭಿಸಿದೆ. ಅದನ್ನ ಹಿಡಿದುಕೊಳ್ಳಲು ಹೋದ ಸಿಬ್ಬಂದಿ ಸಹ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. 

ನೀರಿಗೆ ಬಿದ್ದ ಸಿಬ್ಬಂದಿ ಈಜಿ ದಡ ಸೇರಿದ್ದಾರೆ. ಇನ್ನೊಂದೆಡೆ ಸ್ಥಳೀಯರು ನೀರಿಗೆ ಬಿದ್ದ ಬೈಕ್​ನ್ನ ಕೂಡ ದಡಕ್ಕೆ ಎಳೆದು ತಂದಿದ್ಧಾರೆ. ಇನ್ನೂ ಲಾಂಚ್ ಕೇಬಲ್ ಕಟ್ ಆಗಿದ್ದರಿಂದ ಪ್ರಯಾಣಿಕರನ್ನ ದಡ ಸೇರಿಸುವುದು ಕಷ್ಟವಾಗಿತ್ತು. ಲಾಂಚ್​ನಲ್ಲಿ ವಾಹನಗಳು ಸಿಕ್ಕಿಬಿದ್ದಿದ್ದವು. 

ಇದನ್ನೂ ಓದಿ / ಒಂದೇ ದಿನ 90 ಲಕ್ಷದ ಎಣ್ಣೆ ಜಪ್ತಿ/ ಶಿಕಾರಿಪುರದಲ್ಲಿ ಭರ್ಜರಿ ಹಣ ಪತ್ತೆ/  ಒಂದೇ ರಾತ್ರಿ 19 ಪಿಟ್ಟಿಕೇಸ್/ ಎ.ಎ. ಸರ್ಕಲ್​ ನಲ್ಲಿ ರೂಟ್ ಮಾರ್ಚ್​! ಪೊಲೀಸ್ ನ್ಯೂಸ್​ 

ಲಾಂಚ್​ ಡೋರ್​ನ ಮೇಲೆ ವಾಹನಗಳನ್ನು ನಿಲ್ಲಿಸುವಂತಿಲ್ಲ. ಆದರೆ ಜನರ ಒತ್ತಡದಲ್ಲಿ ಲಾಂಚ್​ನ ಡೋರ್​ ಮೇಲೂ ವಾಹನಗಳು ನಿಂತಿರುತ್ತವೆ. ನಿನ್ನೆ ಅದೃಷ್ಟಕ್ಕೆ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ.   

Malenadutoday.com Social media

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor