ನವುಲೆ, ಆಲ್ಕೋಳ ಚೈನ್​ ಕಳ್ಳತನ : ಶಾಡೋ ಸಚಿನ್ ಹಾಗೂ ಭುವನ್​ ಬಂಧನ

prathapa thirthahalli
Prathapa thirthahalli - content producer

 shimoga Police Arrest : ಶಿವಮೊಗ್ಗ : ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಎರಡು ಪ್ರತ್ಯೇಕ ಸರಗಳ್ಳತನ ಮತ್ತು ದರೋಡೆ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಒಟ್ಟು 2,75,000/- ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Malenadu Today

ಶರಾವತಿ ಕಣಿವೆ ಜಲವಿದ್ಯುತ್ ಯೋಜನೆ ಪ್ರದೇಶದಲ್ಲಿ ಬಿಗಿ  ಭದ್ರತೆ :  ಪ್ರವಾಸಿಗರಿಗೆ ನಿರ್ಬಂಧ

 shimoga Police Arrest ದಿನಾಂಕ 14/10/2025 ರಂದು ಮುಂಜಾನೆ 4-00 ಗಂಟೆಯ ಸಮಯದಲ್ಲಿ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ನವುಲೆ ಶಿವಬಸವನಗರ ಕ್ರಾಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಅಪರಿಚಿತ ವ್ಯಕ್ತಿಯೊಬ್ಬರು ಬೈಕ್‌ನಲ್ಲಿ ಬಂದು ಅಡ್ಡಗಟ್ಟಿ, ಕೈಯಲ್ಲಿದ್ದ ಬಂಗಾರದ ಉಂಗುರ ಹಾಗೂ ನಗದು ಹಣವನ್ನು ಕಿತ್ತುಕೊಂಡು ತಳ್ಳಿ ಪರಾರಿಯಾಗಿದ್ದರು. ಹಾಗೆಯೇ, ದಿನಾಂಕ 25/10/2025 ರಂದು ಬೆಳಿಗ್ಗೆ 8-00 ಗಂಟೆಯ ಸಮಯದಲ್ಲಿ ಆಲ್ಕೊಳ ಮಂಗಳ ಮಂದಿರ ರಸ್ತೆಯಲ್ಲಿರುವ ಕಾಳಿಕಾಂಭಾ ದೇವಸ್ಥಾನದ ಪಕ್ಕದ ವಾಸದ ಮನೆಯ ಮುಂದೆ ಮಹಿಳೆಯೊಬ್ಬರು ರಂಗೋಲಿ ಹಾಕುವಾಗ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯು ಬಾಡಿಗೆ ಮನೆ ವಿಚಾರಿಸುವ ನೆಪದಲ್ಲಿ ಬಂದು, ನೀರು ಕುಡಿದು ಲೋಟ ಕೊಡುವಾಗ ಮಹಿಳೆಯ ಕೊರಳಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ.

ಈ ಎರಡೂ ಪ್ರಕರಣಗಳು ವಿನೋಬನಗರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ದಾಖಲಾಗಿತ್ತು. ಈ ಹಿನ್ನೆಲೆ  ಕಳುವಾದ ಮಾಲು, ನಗದು ಹಾಗೂ ಆರೋಪಿಗಳನ್ನು ಪತ್ತೆ ಮಾಡಲು  ವಿಶೇಷ ತಂಡ ರಚನೆ ಮಾಡಲಾಗಿತ್ತು.  ಪ್ರಕರಣ ತನಿಖೆ ನಡೆಸಿದ ಪೊಲೀಸರು ಸಚಿನ್ @ ಶಾಡೋನನ್ನ ಬಂಧಿಸಿದ್ದಾರೆ. ಅಲ್ಲದೆ ಆತನಿಂದ 7.90 ಗ್ರಾಂ ತೂಕದ ಚಿನ್ನದ ಸರ (ಬೆಲೆ 55,000/- ರೂ) ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ಕೆಎ 14 ಐ.ಎಂ 1490 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ಬೈಕ್ ಸೇರಿದಂತೆ ಒಟ್ಟು 1,15,000/- ರೂ. ಮೌಲ್ಯದ ವಸ್ತುಗಳನ್ನು  ವಶಕ್ಕೆ ಪಡೆದಿದ್ದಾರೆ. 

ಇನ್ನೊಂದು ಪ್ರಕರಣದಲ್ಲಿ  ಭುವನೇಶ್ವರ @ ಭುವನ  ಎಂಬಾತನನ್ನ ಬಂದಿಸಲಾಗಿದ್ದು, ಆತನಿಂದ  13 ಗ್ರಾಂ ತೂಕದ ಬಂಗಾರದ ಸರ ಮತ್ತು ಗುಂಡುಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ಕೆಎ 27 ಈ ಎಫ್ 5698 ನೊಂದಣಿ ಸಂಖ್ಯೆಯ ಸ್ಪೆಂಡರ್ ಪ್ಲಸ್ ಬೈಕ್ ಸೇರಿದಂತೆ ಒಟ್ಟು 1,60,000/- ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡಿಸಿಕೊಂಡಿದ್ಧಾರೆ.

 shimoga Police Arrest

Malenadu Today

Share This Article