missing 2 ವರ್ಷದ ಹಿಂದೆ ಎರಡುವರೆ ಲಕ್ಷದೊಂದಿಗೆ ನಾಪತ್ತೆ! ಈಕೆ ಬಗ್ಗೆ ಹೊರಬಿತ್ತು ಪೊಲೀಸ್ ಪ್ರಕಟಣೆ

Shivamogga Mar 5, 2024  missing  ಸರಿಸುಮಾರು ಎರಡು ವರ್ಷದ ಹಿಂದೆ ಕಾಣೆಯಾದ ಯುವತಿ ಬಗ್ಗೆ ಇದೀಗ ಪೊಲೀಸ್ ಪ್ರಕಟಣೆ ಹೊರಬಿದ್ದಿದೆ. ಆಕೆಯ ಹೆಸರು ಶೀತಲ್ ಅಲಿಯಾಸ್ ನಮಿತಾ, 29 ವರ್ಷ, ಈಕೆ ಲಷ್ಕರ್ ಮೊಹಲ್ಲಾದಿಂದ  2022 ರ ಮೇ 13 ರಂದು ಕಾಣೆಯಾಗಿದ್ದಾಳೆ ಎನ್ನಲಾಗಿದೆ. ಅಲ್ಲದೆ ಎರಡುವರೆ ಲಕ್ಷ ರೂಪಾಯಿ ಸಮೇತ ನಾಪತ್ತೆಯಾಗಿದ್ದಾಳೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಪೊಲೀಸ್ ಪ್ರಕಟಣೆ.

ಕಾಣೆಯಾದ ಶೀತಲ್ ರೂ.6 ಲಕ್ಷ ಹಣದ ಬ್ಯಾಗಿನೊಂದಿಗೆ ತಮ್ಮ ಪತಿಯೊಂದಿಗೆ ಲಷ್ಕರ್ ಮೊಹಲ್ಲಾಗೆ ಹೋಗಿದ್ದಳು., ಪತಿ ಕೋಳಿ ಫಾರಂ ಮಾಲೀಕರಿಗೆ ಹಣ ಕೊಟ್ಟು ಬರೋಣವೆಂದು ಕರೆದಾಗ ಇಲ್ಲೇ ತರಕಾರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ಬಳಿಕ ಪತಿ ಕೋಳಿ ಫಾರಂ ಮಾಲೀಕರಿಗೆ ಹಣ ನೀಡಲು ತೆರಳಿದಾಗ ರೂ.2.5 ಲಕ್ಷ ಕಡಿಮೆ ಇರುವುದು ಕಂಡು ಬಂದು ಪತ್ನಿಗೆ ಕರೆ ಮಾಡಿದ್ದಾರೆ. ಈ ವೇಳೆಎ ಹಣ ಕಳೆದುಹೋಗಿದೆ ಇಲ್ಲೇ ಮಾರ್ಕೆಟ್‍ನಲ್ಲಿ ಹುಡುಕುತ್ತಿದ್ದೇನೆ ಎಂದು ಹೇಳಿದ್ದಾಳೆ. ನಂತರ ಶೀತಲ್‍ರ ಮೊಬೈಲ್ ಸ್ವಿಚ್‍ಆಫ್ ಆಗಿರುತ್ತದೆ. ಎಲ್ಲ ಕಡೆ ಹುಡುಕಿದರು ಅವರು ಸಿಕ್ಕಿರುವುದಿಲ್ಲ.

ಕಾಣೆಯಾದ ಶೀತಲ್ ಸಾಧಾರಣ ಮೈಕಟ್ಟು, ಕೋಲು ಮುಖ, 5.2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ತಲೆಯಲ್ಲಿ ಕಪ್ಪು ಕೂದಲು ಇರುತ್ತದೆ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆ ಮಾತನಾಡುತ್ತಾರೆ. ಈಕೆ ಯಾರಿಗಾದರೂ ಪತ್ತೆಯಾದಲ್ಲಿ ಕೋಟೆ ಪೊಲೀಸ್ ಠಾಣೆ, ದೂ.ಸಂ: 08182261415 ನ್ನು ಸಂಪರ್ಕಿಸಬಹುದೆಂದು ಕೋಟೆ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು