ಕಾರು ಟಚ್​ ಮಾಡಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಕಿರಿಕ್ ! ಬಿತ್ತು ಇಟ್ಟಿಗೆಯಿಂದ ಏಟು!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA NEWS / Malenadu today/ Nov 27, 2023 | Malenadutoday.com  

SHIKARIPURA  |  ಕಾರಿಗೆ ಟಚ್​ ಮಾಡಿದ್ದನ್ನ ಪ್ರಶ್ನಿಸಿದ್ದಕ್ಕೆ ಮತ್ತೆ ಪುನಃ ತನ್ನ ಕಾರಿನಿಂದ ಡಿಕ್ಕಿ ಹೊಡೆಸಿದಷ್ಟೆ ಅಲ್ಲದೆ ಇಟ್ಟಿಗೆಯಿಂದ ಪ್ರಶ್ನಿಸಿದವನ ತಲೆಗೆ ಹೊಡೆದ ಘಟನೆಯೊಂದು ಶಿಕಾರಿಪುರದ ಹಳ್ಳಿಯೊಂದರಲ್ಲಿ ನಡೆದಿದೆ. 

ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ ಕೇಸ್ 

ಇಲ್ಲಿನ ಗ್ರಾಮವೊಂದರಲ್ಲಿ ಕೆಲಸ ಮುಗಿಸಿ ಮನೆಗೆ ಹೊರಟ್ಟಿದ್ದ ವ್ಯಕ್ತಿಯೊಬ್ಬರು ತಮ್ಮ ಕಾರನ್ನ ಬಸವೇಶ್ವರ ದೇವಾಲಯದ ಬಳಿ ನಿಲ್ಲಿಸಿದ್ದರು. ಈ ವೇಳೆ ಅದೇ ದಾರಿಯಲ್ಲಿ ಇನ್ನೊಬ್ಬ ವ್ಯಕ್ತಿ ಕಾರು ಚಲಾಯಿಸಿಕೊಂಡು ಬಂದಿದ್ದಾರೆ. ಈ ವೇಳೆ ಸಂತ್ರಸ್ತರ ಕಾರಿಗೆ, ಎದುರಿನಿಂದ ಬಂದ ಕಾರು ಟಚ್ ಆಗಿದೆ. 

READ :ದೀವರ ಸಾಂಸ್ಕೃತಿಕ ವೈಭವ ಹೇಗಿತ್ತು ನೋಡಿ! ಅರಮನೆ ಮೈದಾನದಲ್ಲಿ ಮುಂದಿನ ಸಮಾವೇಶ ! ಸಚಿವರು ಹೇಳಿದ್ದೇನು?

ಕಾರು ಟಚ್ ಮಾಡಿದ ಆರೋಪ

ಯಾಕೆ ಕಾರಿಗೆ ಟಚ್​ ಮಾಡಿದ್ರಿ ಎಂದು ದೂರುದಾರರು ಆರೋಪಿಯನ್ನ ಕೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕಾರಿನ ಮಾಲೀಕ ಪುನಃ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ದೂರುದಾರರ ವಾಹನಕ್ಕೆ ಟಚ್​ ಮಾಡಿದ್ದಾರೆ. ಈ ವೇಳೆ ಪರಸ್ಪರ ಹೊಡೆದಾಟವಾಗಿದೆ. ಹೊಡೆದಾಟದಲ್ಲಿ ದೂರುದಾರರ ತಲೆಗೆ ಇಟ್ಟಿಗೆಯಿಂದ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ. 

ಸದ್ಯ ಪ್ರಕರಣ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ (Shikaripura Rural Police Station) ನಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ  

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor