ಜಾನುವಾರಿಗೆ ಕಟ್ಟಿದ್ದ ಹಗ್ಗವೇ ಉರುಳಿತು ತಂದಿತು ಸಾವು

Published: 26 ಸೆಪ್ಟೆಂಬರ್ 2025, 5:55 ಅಪರಾಹ್ನ • 1 min read





✨ AI ಓವರ್‌ವ್ಯೂ (ಮುಖ್ಯಾಂಶ)

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 :  ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ದುರಂತವೊಂದು ಸಂಭವಿಸಿದೆ. ಅಚಾನಕ್ ಆಗಿ ನಡೆದ ಘಟನೆಯಲ್ಲಿ ತಾನು ಸಾಕಿದ ಹಸುವಿನಿಂದಲೇ ವ್ಯಕ್ತಿಯೊಬ್ಬರ ಸಾವು ಸಂಭವಿಸಿದೆ. ಇಲ್ಲಿನ ಚುಂಚಿನಕೊಪ್ಪದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಲಭ್ಯ ಮಾಹಿತಿ ಪ್​ರಕಾರ, ಹಸುಗಳಿಗೆ ನೀರು ಕುಡಿಸಲು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ.  ಹಸುಗಳು ರಸ್ತೆಯಲ್ಲಿ…

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 :  ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ದುರಂತವೊಂದು ಸಂಭವಿಸಿದೆ. ಅಚಾನಕ್ ಆಗಿ ನಡೆದ ಘಟನೆಯಲ್ಲಿ ತಾನು ಸಾಕಿದ ಹಸುವಿನಿಂದಲೇ ವ್ಯಕ್ತಿಯೊಬ್ಬರ ಸಾವು ಸಂಭವಿಸಿದೆ. ಇಲ್ಲಿನ ಚುಂಚಿನಕೊಪ್ಪದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಲಭ್ಯ ಮಾಹಿತಿ ಪ್​ರಕಾರ, ಹಸುಗಳಿಗೆ ನೀರು ಕುಡಿಸಲು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. 

ಹಸುಗಳು ರಸ್ತೆಯಲ್ಲಿ ಬರುತ್ತಿದ್ದ ವಾಹನ ಶಬ್ದಕ್ಕೆ ಹೆದರಿ ಕಂಗಾಲಾಗಿ ಓಡಿದ ಸಂದರ್ಭದಲ್ಲಿ ಹಸುವಿಗೆ ಕಟ್ಟಿದ ಹಗ್ಗ ವ್ಯಕ್ತಿಯ ಕುತ್ತಿಗೆಗೆ ಉರುಳಾಗಿ ಬಿಗಿದೆ. ಪರಿಣಾಮ ಅವರು ಅಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರನ್ನು 50 ವರ್ಷದ ಗಣೇಶ್ ಎಂದು ಗುರತಿಸಲಾಗಿದೆ. 

ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

END OF STORY

ajjimane ganesh

Senior Journalist | Malenadu Today
✓ Verified Journalist