ಗುಜರಿ ಅಂಗಡಿಯಲ್ಲಿತ್ತು ಸುಳಿವು| 2ನೇ ದಿನದಲ್ಲಿ ಕಳ್ಳರಿಗೆ ಶಾಕ್​| ಹೀಗೂ ಹಿಡಿತಾರೆ ಪೊಲೀಸರು!

KARNATAKA NEWS/ ONLINE / Malenadu today/ Oct 30, 2023 SHIVAMOGGA NEWS

ANANDAPURA | ಗುಜರಿ ಅಂಗಡಿಯೊಂದರಲ್ಲಿ ಸಿಕ್ಕ ಸುಳಿವನ್ನ ಆಧರಿಸಿ ಪೊಲೀಸರು ಕಳ್ಳರನ್ನ ಹಿಡಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದಲ್ಲಿ ನಡೆದಿದೆ. ಇಲ್ಲಿನ ಆನಂದಪುರಂ ಪೊಲೀಸ್ ಸ್ಟೇಷನ್ ನ ಪೊಲೀಸರು ಈ ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. 

ಆನಂದಪುರದ ಸಮೀಪದ ಕಣ್ಣೂರಿನ ದೇವಸ್ಥಾನದ ಗೇಟನ್ನು ಹೆಬ್ಬೋಡಿಯ ಶಾಲೆ ಹಾಗೂ ಆನಂದಪುರದ ಕಾಲೇಜಿನ ಗೇಟನ್ನು ಮತ್ತು ರೋಲಿಂಗ್ ಶಟರ್ ಕಳ್ಳತನವಾಗಿತ್ತು. ಪ್ರಕರಣದ ಬಗ್ಗೆ ಅನುಮಾನಗೊಂಡ ಪೊಲೀಸರು ಗುಜರಿ ಅಂಗಡಿಗಳಲ್ಲಿ ವಿಚಾರಣೆ ಆರಂಭಿಸಿದ್ದಾರೆ. 

READ : ಇಸ್ರೇಲ್​ನಿಂದ ಮಧು ಬಂಗಾರಪ್ಪರಿಗೆ ವಿಡಿಯೋ ಕಾಲ್ | ಶಿವಮೊಗ್ಗದ ವ್ಯಕ್ತಿಗೆ ಸಚಿವರ ಸಹಾಯ!

ಗುಜರಿ ಅಂಗಡಿಯಲ್ಲಿ ಮಾರಿದ ವಸ್ತುಗಳ ಮಾಹಿತಿ ಕಲೆಹಾಕಿದ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿದೆ. ಇಬ್ಬರು ವ್ಯಕ್ತಿಗಳು ಗುಜರಿ ಅಂಗಡಿಯಲ್ಲಿ ಕಬ್ಬಿಣ ಮಾರಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಲೆ ಅವರನ್ನಕರೆದು ವಿಚಾರಿಸಿದ್ದಾರೆ. ಈ ವೇಳೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. 

ಸದ್ಯ ಪ್ರಕರಣ ಸಂಬಂಧ ಇಬ್ಬರನ್ನ ಅರೆಸ್ಟ್ ಮಾಡಿರುವ ಪೊಲೀಸರು ಆರೋಪಿಗಳಿಂದ 25 ಸಾವಿರ ಮೌಲ್ಯ ಕಬ್ಬಿಣವನ್ನು ವಶಕ್ಕೆ ಪಡೆದಿದ್ದಾರೆ. 


Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು