ಒಂದೇ ದಿನದಲ್ಲಿ 11,786 ಮಹಿಳೆಯರಿಗೆ ಉಚಿತ ಇಸಿಜಿ ಪರೀಕ್ಷೆ: ನಾರಾಯಣ ಹೆಲ್ತ್‌ನಿಂದ ಗಿನ್ನಿಸ್​​ ದಾಖಲೆ

ಹಂಚಿಕೊಳ್ಳಿ
WhatsApp Facebook X Telegram
Narayana Health care
Narayana Health care

Narayana Health care :  ಶಿವಮೊಗ್ಗ: ದೇಶದ ಪ್ರಮುಖ ವೈದ್ಯಕೀಯ ಸಂಸ್ಥೆಯಾದ ನಾರಾಯಣ ಹೆಲ್ತ್, ಕೇಂದ್ರ ಸರ್ಕಾರದ ‘ಸ್ವಸ್ಥ ನಾರಿ, ಸಶಕ್ತ ಪರಿವಾರ’ ಅಭಿಯಾನದ ಭಾಗವಾಗಿ ಒಂದೇ ದಿನದಲ್ಲಿ 11,786 ಮಹಿಳೆಯರಿಗೆ ಉಚಿತ ಇಸಿಜಿ ಪರೀಕ್ಷೆಗಳನ್ನು ನಡೆಸಿ ಹೊಸ ದಾಖಲೆ ಬರೆದಿದೆ. ಸೆಪ್ಟೆಂಬರ್ 17ರಂದು, ದೇಶಾದ್ಯಂತ ಇರುವ ತನ್ನ 20ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಈ ವಿಶೇಷ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರಂಭಿಸಿದ ಈ ಅಭಿಯಾನವು ದೇಶದ ಮಹಿಳೆಯರು ಮತ್ತು ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶವನ್ನು ಹೊಂದಿದೆ. ನಾರಾಯಣ ಹೆಲ್ತ್ ಈ ಯೋಜನೆಗೆ ಸಹಭಾಗಿತ್ವ ನೀಡುವ ಮೂಲಕ, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ಸಹಯೋಗದ ಮಹತ್ವವನ್ನು ಎತ್ತಿ ತೋರಿಸಿದೆ.

ಈ ಅಭಿಯಾನಕ್ಕೆ ಮಹಾನಗರಗಳಿಂದ ಹಿಡಿದು ಚಿಕ್ಕ ಪಟ್ಟಣಗಳ ಮಹಿಳೆಯರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾರಾಯಣ ಹೆಲ್ತ್‌ನ ಆಸ್ಪತ್ರೆಗಳು, ಹೃದಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸಿ, ಎಲ್ಲ ವಯಸ್ಸಿನ ಮಹಿಳೆಯರಿಗೆ ಯಾವುದೇ ತೊಡಕಿಲ್ಲದೆ ಇಸಿಜಿ ಪರೀಕ್ಷೆಗಳನ್ನು ನಡೆಸಿವೆ. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 350 ಇಸಿಜಿ ಪರೀಕ್ಷೆಗಳು ನಡೆದಿರುವುದು ವಿಶೇಷ.

Narayana Health care ಈ ಸಾಧನೆಯ ಕುರಿತು ಮಾತನಾಡಿದ ನಾರಾಯಣ ಹೆಲ್ತ್ ಸಂಸ್ಥಾಪಕ, ಡಾ. ದೇವಿ ಶೆಟ್ಟಿ, “ಕೇವಲ 10,000 ಇಸಿಜಿ ಪರೀಕ್ಷೆಗಳು ನಡೆದಿದ್ದು ನಮಗೆ ಸಂತಸ ತಂದಿದೆ. ಇದು ಕೇವಲ ಸಂಖ್ಯೆಯಲ್ಲ, ಬದಲಿಗೆ ಹೃದಯದ ಆರೋಗ್ಯದ ಬಗ್ಗೆ ಅರಿತುಕೊಂಡು ಹೆಜ್ಜೆ ಇಟ್ಟ ಮಹಿಳೆಯರ ಯಶಸ್ಸು” ಎಂದರು. ರೋಗ ತಡೆಗಟ್ಟುವ ಚಿಕಿತ್ಸೆಯೇ ಆರೋಗ್ಯವಂತ ರಾಷ್ಟ್ರದ ಅಡಿಪಾಯ ಎಂದು ಅವರು ಅಭಿಪ್ರಾಯಪಟ್ಟರು.

ನಾರಾಯಣ ಹೆಲ್ತ್ ಗ್ರೂಪ್ ಸಿಇಒ ಡಾ. ಇಮ್ಯಾನುಯೆಲ್ ರೂಪರ್ಟ್ ಅವರು, “ಈ ಅಭಿಯಾನದಿಂದ ರೋಗ ತಡೆಗಟ್ಟುವ ಚಿಕಿತ್ಸೆಯ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ. ಪ್ರಮುಖ ನಗರಗಳ ಜೊತೆಗೆ, ಚಿಕ್ಕ ಪಟ್ಟಣಗಳ ಮಹಿಳೆಯರೂ ಈ ಪರೀಕ್ಷೆಗಳ ಲಾಭ ಪಡೆದಿದ್ದಾರೆ. ನಮ್ಮ ತಂಡಗಳ ಅವಿರತ ಶ್ರಮದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ” ಎಂದು ತಿಳಿಸಿದರು.

Narayana Health care ಮಹಿಳಾ ಆರೋಗ್ಯಕ್ಕೆ ಒತ್ತು

ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಸಂಭವಿಸುವ ಸಾವಿನಲ್ಲಿ ಸುಮಾರು ಶೇಕಡ 25ರಷ್ಟು ಮಹಿಳೆಯರೇ ಇದ್ದಾರೆ. ‘ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ’ ಪ್ರಕಾರ, ಶೇಕಡ 18ರಷ್ಟು ಮಹಿಳೆಯರು ಹೃದಯ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ನಾರಾಯಣ ಹೆಲ್ತ್‌ನ ಈ ಮಹತ್ವದ ಉಪಕ್ರಮವು ಮಹಿಳೆಯರ ಆರೋಗ್ಯಕ್ಕೆ ವಿಶೇಷ ಗಮನ ಹರಿಸುವ ಅಗತ್ಯವನ್ನು ತೋರಿಸುತ್ತದೆ. ಈ ಹೊಸ ದಾಖಲೆಯು, 2023ರಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಒಂದೇ ಸ್ಥಳದಲ್ಲಿ 24 ಗಂಟೆಗಳಲ್ಲಿ 3,797 ಇಸಿಜಿಗಳನ್ನು ನಡೆಸಿ ಸ್ಥಾಪಿಸಿದ್ದ ಗಿನ್ನಿಸ್ ವಿಶ್ವ ದಾಖಲೆಯನ್ನೂ ಮೀರಿಸಿದೆ. ಈ ಮೂಲಕ ನಾರಾಯಣ ಹೆಲ್ತ್ ತನ್ನ ಹಿಂದಿನ ಸಾಧನೆಯನ್ನೇ ತಾನೇ ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor