ಶಿಕಾರಿಪುರ ಬಳಿ ಬಸ್ ಅಪಘಾತ: ಪ್ರಯಾಣಿಕರಿಗೆ ಗಾಯ

ಹಂಚಿಕೊಳ್ಳಿ
WhatsApp Facebook X Telegram
Bus accident
Bus accident

Bus accident : ಶಿಕಾರಿಪುರ ಬಳಿ ಬಸ್ ಅಪಘಾತ: ಪ್ರಯಾಣಿಕರಿಗೆ ಗಾಯ

ಶಿಕಾರಿಪುರ: ತಾಲೂಕಿನ ಸದಾಶಿವಪುರ ತಾಂಡಾ ಬಳಿಯ ಹೊನ್ನಾಳಿ ರಸ್ತೆಯಲ್ಲಿ ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ಕಳೆದುಕೊಂಡು ಕೆರೆಗೆ ಉರುಳಿದೆ. ಈ ಘಟನೆಯಲ್ಲಿ  ಬಸ್​ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ

ಶಿವಮೊಗ್ಗದಿಂದ ಬಸವಾಸಿಗೆ ತೆರಳುತ್ತಿದ್ದ ಈ ಬಸ್, ಜೀನಹಳ್ಳಿ ಮತ್ತು ಶಿರಾಳಕೊಪ್ಪ ಮಾರ್ಗವಾಗಿ ಸಾಗುತ್ತಿತ್ತು. ಸದಾಶಿವಪುರ ತಾಂಡಾದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆಯ ಪಕ್ಕದಲ್ಲಿದ್ದ ಕೆರೆಯ ದಂಡೆಗೆ ನುಗ್ಗಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆರೆಗೆ ಬಿದ್ದಿದೆ.

ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣವೇ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. 

Bus accident
ಪಲ್ಟಿಯಾದ ಬಸ್​

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor