ಮೈಸೂರು ಟ್ರೈನ್​ ಸೇರಿದಂತೆ ಹಲವು ರೈಲುಗಳ ಸಂಚಾರ ರದ್ದು! ಕಾರಣವೇನು? ಇಲ್ಲಿದೆ ಮಾಹಿತಿ

This Article Written by / ajjimane ganesh / ಆಗಷ್ಟ್ 19, 2025

Kuvempu Express schedule change, Talguppa Mysuru train timings, Train 16221 new schedule, Kuvempu Express timetable, ಕುವೆಂಪು ಎಕ್ಸ್‌ಪ್ರೆಸ್ ವೇಳಾಪಟ್ಟಿ, ರೈಲು ಸಮಯ ಬದಲಾವಣೆ, Book Kuvempu Express ticket, Kuvempu Express train ticket booking, Kuvempu Express fare , Kuvempu Express train, Train 16221, Kuvempu Express route map. Cancellations Affecting Your Train

Cancellations of mysore Train and more ಶಿವಮೊಗ್ಗ, malenadu today news : August 19 2025 ರೈಲ್ವೆ ಇಲಾಖೆಯು ಶಿವಮೊಗ್ಗ -ಮೈಸೂರು ಟೌನ್ ಟ್ರೈನ್​ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.  ಆಗಸ್ಟ್ 24ರಂದು ಅರಸೀಕೆರೆ-ಬಾಣಾವರ ಮತ್ತು ಅರಸೀಕೆರೆ-ಹಬ್ಬನಘಟ್ಟ ನಿಲ್ದಾಣಗಳ ನಡುವೆ ರೈಲ್ವೆ ಇಲಾಖೆ ಸಿಗ್ನಲಿಂಗ್  ಕಾಮಗಾರಿ ಹಮ್ಮಿಕೊಂಢಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿ ಪ್ರಕಟಣೆ ನೀಡಿದೆ.  ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್​ ಚಾನಲ್​ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..

Cancellations of mysore Train and more
Cancellations of mysore Train and more

rಈ ರೈಲುಗಳ ಸಂಚಾರ ರದ್ದು

  • ಆಗಸ್ಟ್ 23ರಂದು : ರೈಲು ಸಂಖ್ಯೆ 06270: ಎಸ್‌ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ರೈಲು.
  • ಆಗಸ್ಟ್ 24ರಂದು :  ರೈಲು ಸಂಖ್ಯೆ 06269: ಮೈಸೂರು-ಎಸ್‌ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್.
  • ರೈಲು ಸಂಖ್ಯೆ 16226: ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್‌ಪ್ರೆಸ್.
  • ರೈಲು ಸಂಖ್ಯೆ 16225: ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್‌ಪ್ರೆಸ್.
  • ರೈಲು ಸಂಖ್ಯೆ 56267: ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್.
  • ರೈಲು ಸಂಖ್ಯೆ 56268: ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್.
  • ರೈಲು ಸಂಖ್ಯೆ 56266: ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್.
  • ರೈಲು ಸಂಖ್ಯೆ 56265: ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್.
Vande bharath train
Vande bharath train

ಇದನ್ನು ಸಹ ಓದಿ : ಮಲೆನಾಡು ಟುಡೆ ಇವತ್ತಿನ ಇ ಪೇಪರ್! ಮಹತ್ವದ ಅಪ್​ಡೇಟ್ಸ್​ https://malenadutoday.com/malenadu-suddi-e-paper-august-18

ಭಾಗಶಃ ರದ್ದು

ರೈಲು ಸಂಖ್ಯೆ 56271: ಶಿವಮೊಗ್ಗ ಟೌನ್-ಚಿಕ್ಕಮಗಳೂರು ಡೈಲಿ ಪ್ಯಾಸೆಂಜರ್ ರೈಲು ಆಗಸ್ಟ್ 24ರಂದು ಶಿವಮೊಗ್ಗ ಟೌನ್ ಮತ್ತು ಬೀರೂರು ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಬೀರೂರಿನಿಂದ ತನ್ನ ನಿಗದಿತ ಸಮಯದಲ್ಲಿ ಪ್ರಯಾಣ ಮುಂದುವರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರೈಲುಗಳ ನಿಯಂತ್ರಣ

ಆಗಸ್ಟ್ 24ರಂದು ರೈಲು ಸಂಖ್ಯೆ 16587: ಯಶವಂತಪುರ-ಬಿಕಾನೇರ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ಯಶವಂತಪುರದಿಂದ 60 ನಿಮಿಷ ತಡವಾಗಿ ಹೊರಡಲಿದೆ ಮತ್ತು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಲ್ಲಿಸಲಾಗುತ್ತದೆ.

ರೈಲು ಸಂಖ್ಯೆ 18112: ಯಶವಂತಪುರ-ಟಾಟಾನಗರ ಸಾಪ್ತಾಹಿಕ ಎಕ್ಸ್‌ಪ್ರೆಸ್, 12649: ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್, ಮತ್ತು 12725: ಕೆಎಸ್‌ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ದೈನಿಕ ಎಕ್ಸ್‌ಪ್ರೆಸ್ ರೈಲುಗಳು ಮಾರ್ಗಮಧ್ಯೆ 60-75 ನಿಮಿಷಗಳ ಕಾಲ ನಿಲ್ಲಿಸಲಾಗುತ್ತದೆ.

ರೈಲು ಸಂಖ್ಯೆ 17325: ಬೆಳಗಾವಿ-ಮೈಸೂರು ವಿಶ್ವಮಾನವ ದೈನಿಕ ಎಕ್ಸ್‌ಪ್ರೆಸ್ ರೈಲು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಲ್ಲಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್​ಗೆ ಜಾಯಿನ್ ಆಗಿ

Cancellations of mysore Train and more

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

ಮುಂದಿನ ಸುದ್ದಿ ಒದಿ

Leave a Comment