ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಹಸಿ ಶುಂಠಿ ಬೆಲೆ ಎಷ್ಟಿದೆ ಇವತ್ತು

ಹಂಚಿಕೊಳ್ಳಿ
WhatsApp Facebook X Telegram
Ginger Prices today
Ginger Prices today

Ginger Prices today : ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಹಸಿ ಶುಂಠಿ ಬೆಲೆ ಎಷ್ಟಿದೆ ಇವತ್ತು

Ginger Prices today ಬೆಂಗಳೂರು : ಕರ್ನಾಟಕದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (ಎಪಿಎಂಸಿ) ಇಂದಿನ ಹಸಿ ಶುಂಠಿ ಬೆಲೆಗಳು ಪ್ರಕಟಗೊಂಡಿವೆ. ಕ್ವಿಂಟಾಲ್‌ಗೆ 4100 ರಿಂದ 5000 ರೂಪಾಯಿಯ ಗರಿಷ್ಠ ಬೆಲೆಯೊಂದಿಗೆ ಬೆಂಗಳೂರು ಮಾರುಕಟ್ಟೆ ಮುಂಚೂಣಿಯಲ್ಲಿದೆ. ಇದು ಶುಂಠಿ ಬೆಳೆಗಾರರಿಗೆ ಉತ್ತಮ ಬೆಲೆಯನ್ನು ತಂದುಕೊಟ್ಟಿದೆ.

ಇನ್ನು, ಮಧುಗಿರಿಯಲ್ಲಿ ಹಸಿ ಶುಂಠಿಗೆ ಅತಿ ಕಡಿಮೆ ಬೆಲೆ ದಾಖಲಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 800 ರಿಂದ 1100 ರೂಪಾಯಿ ಇದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 1500 ರಿಂದ 2500 ರೂಪಾಯಿ ಬೆಲೆ ಸಿಕ್ಕಿದ್ದರೆ, ಹುಣಸೂರುನಲ್ಲಿ ಸ್ಥಿರವಾಗಿ 1100 ರೂಪಾಯಿ ಇದೆ.

ಪಿರಿಯಾಪಟ್ಟಣದಲ್ಲಿ ಹಸಿ ಶುಂಠಿ ಕ್ವಿಂಟಾಲ್‌ಗೆ 1400 ರಿಂದ 1500 ರೂಪಾಯಿ ದರದಲ್ಲಿ ವಹಿವಾಟು ನಡೆದಿದೆ. ಇನ್ನು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶುಂಠಿಗೆ 2800 ರಿಂದ 3000 ರೂಪಾಯಿ ಬೆಲೆ ದೊರೆತಿದೆ.ಒಟ್ಟಾರೆ, ಬೆಂಗಳೂರು ಮಾರುಕಟ್ಟೆಯಲ್ಲಿ ಶುಂಠಿಗೆ ಉತ್ತಮ ಬೇಡಿಕೆ ಮತ್ತು ಬೆಲೆ ಇದ್ದರೆ, ರಾಜ್ಯದ ಇತರ ಮಾರುಕಟ್ಟೆಗಳಲ್ಲಿ ದರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ.

Ginger Prices today
ಶುಂಠಿ

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor