ಮೈದೊಳಲು ಹನುಮಂತ ದೇವರ ಕಾರ್ಣಿಕೋತ್ಸವದಲ್ಲಿ ಆತಂಕದ ಭವಿಷ್ಯ – “ಶಿವನ ತುರುಬಿಗೆ ಪಂಜರದ ಗಿಳಿ ಹಾರಿತ್ತು ಎಚ್ಚರ | ಏನಿದರ ಅರ್ಥ

ಹಂಚಿಕೊಳ್ಳಿ
WhatsApp Facebook X Telegram
Hanuman Temple Festival
Hanuman Temple Festival

Hanuman Temple Festival ಮೈದೊಳಲು ಹನುಮಂತ ದೇವರ ಕಾರ್ಣಿಕೋತ್ಸವದಲ್ಲಿ ಆತಂಕದ ಭವಿಷ್ಯ – “ಶಿವನ ತುರುಬಿಗೆ ಪಂಜರದ ಗಿಳಿ ಹಾರಿತ್ತು ಎಚ್ಚರ | ಏನಿದರ ಅರ್ಥ

 ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಇಂದು  ಹನುಮಂತ ದೇವರ ಕಾರ್ಣಿಕೋತ್ಸವ ನಡೆದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಎಚ್ಚರಿಕೆಯ ಸಂದೇಶ ನೀಡಿರುವ ಗಣಮಗ, “ಶಿವನ ತುರುಬಿಗೆ ಪಂಜರದ ಗಿಳಿ ಹಾರಿತ್ತು ಎಚ್ಚರ” ಎಂಬ ಅಚ್ಚರಿಯ ಕಾರ್ಣಿಕವನ್ನು ನುಡಿದಿದ್ದಾರೆ.

ಮೈದೊಳಲು ಗ್ರಾಮದ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರದ ಕಂಬವೇರಿ ಗಣಮಗ ನುಡಿದ ಈ ಕಾರ್ಣಿಕ, ಸ್ಥಳೀಯರ ಪ್ರಕಾರ ಹಲವು ಗಂಭೀರ ಪರಿಣಾಮಗಳನ್ನು ಸೂಚಿಸುತ್ತಿದೆ. ಅವರ ವಿಶ್ಲೇಷಣೆಯ ಪ್ರಕಾರ, ಈ ಬಾರಿ ಮುಂಗಾರಿಗಿಂತ ಹಿಂಗಾರು ಜೋರಾಗಲಿದ್ದು, ಅತಿವೃಷ್ಟಿಯಿಂದಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಗಂಭೀರ ಹಿನ್ನಡೆಯಾಗುವುದು. ಇದರ ಜೊತೆಗೆ, ರಾಜ್ಯ ರಾಜಕೀಯದಲ್ಲಿ ತಲ್ಲಣ ನಿಶ್ಚಿತ ಎಂದು ಹೇಳಿದ್ದಾರೆ.

ಪ್ರತಿ ವರ್ಷ ಹನುಮಂತ ದೇವರ ಕಾರ್ಣಿಕೋತ್ಸವದಲ್ಲಿ ನುಡಿಯುವ ಭವಿಷ್ಯವನ್ನು ಜನರು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ. 

Hanuman Temple Festival
Hanuman Temple Festival

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor