ತಮಾಷೆಗೆ ಕುಡಿದಿದ್ದೀಯಾ ಎಂದು ಕೇಳಿದ್ದಕ್ಕೆ ಹಲ್ಲೆ! ದಾಖಲಾಯ್ತು ಕೇಸ್!

Malenadu Today

KARNATAKA NEWS/ ONLINE / Malenadu today/ Aug 7, 2023 SHIVAMOGGA NEWS

ಕುಡಿದಿದ್ದೀಯಾ ಎಂದು ಹೇಳಿದ ವಿಚಾರಕ್ಕೆ ಕಿರಿಕ್ ಆಗಿ ವ್ಯಕ್ತಿಯೊಬ್ಬನ ಮೇಲೆ ಆರು ಮಂದಿ ಹಲ್ಲೆ ನಡೆಸಿದ ಘಟನೆ ಭದ್ರಾವತಿ ಓಲ್ಡ್​ ಟೌನ್ ಪೊಲೀಸ್ ಸ್ಟೇಷನ್ (Bhadravati Old Town Police Station)​ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ 2 ನೇ ತಾರೀಖು ನಡೆದ ಘಟನೆ ಸಂಬಂಧ ಪೊಲೀಸರಿಗೆ ಗಾಯಾಳು ದೂರು ನೀಡಿದ್ದಾರೆ. ಘಟನೆ ನಡೆದ ದಿನ ರಾತ್ರಿ 11 ಗಂಟೆ ಭದ್ರಾವತಿ ಸರ್ಕಾರಿ ಆಸ್ಪತ್ರೆಯ ಬಳಿಯಲ್ಲಿ  ನಂದ ಎಂಬವರು ಆಟೋ ನಿಲ್ಲಿಸಿಕೊಂಡಿದ್ದರು. ಈ ವೇಳೆ ಅಲ್ಲಿಗೆ ಅಮಿತ್ ಎಂಬಾತ ಬಂದಿದ್ಧಾನೆ. ಗುರುತು ಇರುವ ವ್ಯಕ್ತಿಯಾಗಿದ್ದರಿಂದ ಕುಡಿದಿದ್ದೀಯಾ ಎಂದು ತಮಾಷೆ ಮಾಡಿದ್ಧಾರೆ. ಇದೆ ವಿಚಾರಕ್ಕೆ ಕಿರಿಕ್ ಆಗಿ ಅಮಿತ್ ಜೊತೆಗೆ ಐವರು ನಂದಾರವರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ನಂದಾರವರನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆಸ್ಪತ್ರೆಯಲ್ಲಿ ನೋಂದ ಸಂತ್ರಸ್ತ ನೀಡಿದ ಹೇಳಿಕೆ ಅನ್ವಯ  IPC 1860 (U/s-143,147,323,324,504,506,149) ಕೇಸ್ ದಾಖಲಾಗಿದೆ.   

ತೀರ್ಥಹಳ್ಳಿಯಲ್ಲಿ ನಡೆದ ಶಿಕಾರಿ ಶೂಟ್ ಪ್ರಕರಣ! ಪೊಲೀಸ್ ಪ್ರಕಟಣೆಯಲ್ಲಿ ಏನಿದೆ ಗೊತ್ತಾ?

ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Share This Article