Massive Bhagavad Gita Chanting Event ಶಿವಮೊಗ್ಗದಲ್ಲಿ ಭಗವದ್ಗೀತೆ ಬೃಹತ್ ಅಭಿಯಾನ: 50 ಸಾವಿರ ಮಂದಿಯಿಂದ ಏಕಕಾಲಕ್ಕೆ ಭಗವದ್ಗೀತೆ ಪಠಣದ ನಿರೀಕ್ಷೆ
ಶಿವಮೊಗ್ಗದಲ್ಲಿ ಮುಂಬರುವ ನವೆಂಬರ್ 30 ರಂದು ಸುಮಾರು 50 ಸಾವಿರಕ್ಕೂ ಹೆಚ್ಚು ಜನರಿಂದ ಎಕಕಾಲದಲ್ಲಿ ಭಗವದ್ಗೀತೆ (Bhagavad Gita) ಪಠಣದ ಕಾರ್ಯಕ್ರಮವೊಂದಕ್ಕೆ ಸಿದ್ದತೆಗಳು ಆರಂಭವಾಗಿದೆ. ಈ ಸಂಬಂಧ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಅವರು ಸಾಗರದಲ್ಲಿ ನಡೆದ ಪ್ರಶಿಕ್ಷಣ ಕಾರ್ಯಕ್ರಮ

ವೊಂದರಲ್ಲಿ ಮಾಹಿತಿ ನೀಡಿದ್ಧಾರೆ.


Massive Bhagavad Gita Chanting Event
ಸಾಗರದ ಭಾರತೀತೀರ್ಥ ಸಭಾಭವನದಲ್ಲಿ ಶೃಂಗೇರಿ ಶಂಕರಮಠ, ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮತ್ತು ಭಗವದ್ಗೀತಾ ಅಭಿಯಾನ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಶೀಕ್ಷಣ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಭಗವದ್ಗೀತೆ ಪಠಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತರಬೇತಿ ನೀಡಲಾಗುತ್ತಿದ್ದು, ಪ್ರಶೀಕ್ಷಣದಲ್ಲಿ ಪಾಲ್ಗೊಂಡವರು ಭಗವದ್ಗೀತೆ ಕಲಿತು, ಅದನ್ನು ತಮ್ಮ ಸುತ್ತಮುತ್ತಲಿನವರಿಗೂ ಕಲಿಸಬೇಕು, ಮತ್ತು ಹಾಗೆ ಕಲಿತವರು ಭಗವದ್ಗೀತೆ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಲಾಗಿದೆ.
ಇನ್ನೂ ಅಭಿಯಾನದ ಕಾರ್ಯಾಧ್ಯಕ್ಷ ಅಶೋಕ್ ಭಟ್, ಸೋಂದಾ ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ಈ ಭಗವದ್ಗೀತೆ ಅಭಿಯಾನ ನಡೆಯುತ್ತಿದೆ. ಈಗಾಗಲೇ ಭಗವದ್ಗೀತೆ ಕಲಿಸುವ ಹಲವು ಕಾರ್ಯಾಗಾರಗಳು (Workshops) ಜಿಲ್ಲೆಯಾದ್ಯಂತ ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
Massive Bhagavad Gita Chanting Event in Shivamogga Organized by Sringeri Shankar Math and Swarnavalli Mahasamsthana, training programs are underway to prepare participants for this spiritual event.
ಭಗವದ್ಗೀತೆ, ಶಿವಮೊಗ್ಗ ಅಭಿಯಾನ, ಏಕಕಂಠ ಪಠಣ, ಶೃಂಗೇರಿ ಶಂಕರಮಠ, ಸೋಂದಾ ಸ್ವರ್ಣವಲ್ಲಿ, ಧಾರ್ಮಿಕ ಕಾರ್ಯಕ್ರಮ, ಆಧ್ಯಾತ್ಮಿಕ, ಸಾಗರ, ನವೆಂಬರ್ 30, Bhagavad Gita, Shivamogga Campaign, Mass Chanting, Sringeri Shankar Math, Swarnavalli Mahasamsthana, Spiritual Event, Religious Program, Sagar, November 30 , #BhagavadGita #Shivamogga #SpiritualEvent #MassChanting #SringeriMath #Swarnavalli #Hinduism #KarnatakaEvents #SpiritualAwakening #Novermber30