Traffic rules awareness program june 22/ ಪಿಇಎಸ್​ನಲ್ಲಿ​ ಟ್ರಾಫಿಕ್​ ಪೊಲೀಸರ ಸಭೆ, ವಿದ್ಯಾರ್ಥಿಗಳಿಗೆ ಎಚ್ಚರಿಕೆ

Published: 22 ಜೂನ್ 2025, 12:40 ಅಪರಾಹ್ನ • 1 min read

▶️
ಸುದ್ದಿ ಆಲಿಸಿ




✨ AI ಓವರ್‌ವ್ಯೂ (ಮುಖ್ಯಾಂಶ)

Traffic rules awareness program at PES College ಪಿಇಎಸ್‌ ಕಾಲೇಜಿನಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಕಾರ್ಯಕ್ರಮ Traffic rules awareness program ಶಿವಮೊಗ್ಗ: ಜೂನ್ 21, 2025 ರಂದು ಶುಕ್ರವಾರ, ಶಿವಮೊಗ್ಗ ನಗರದ ಪಿಇಎಸ್‌ ಕಾಲೇಜಿನಲ್ಲಿ ಸಂಚಾರ ನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ…

Traffic rules awareness program at PES College ಪಿಇಎಸ್‌ ಕಾಲೇಜಿನಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಕಾರ್ಯಕ್ರಮ

Traffic rules awareness program ಶಿವಮೊಗ್ಗ: ಜೂನ್ 21, 2025 ರಂದು ಶುಕ್ರವಾರ, ಶಿವಮೊಗ್ಗ ನಗರದ ಪಿಇಎಸ್‌ ಕಾಲೇಜಿನಲ್ಲಿ ಸಂಚಾರ ನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ತಿರುಮಲೇಶ್ ಅವರು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಪಿಎಸ್‌ಐ ತಿರುಮಲೇಶ್, “ಸುರಕ್ಷತೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು” ಎಂದು ಹೇಳಿದರು. ಅಲ್ಲದೆ, “18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಾಲನೆ ಮಾಡಬಾರದು. ಕಡ್ಡಾಯವಾಗಿ ವಾಹನ ಚಾಲನಾ ಪರವಾನಗಿ ಪಡೆದ ನಂತರವೇ ವಾಹನ ಚಲಾಯಿಸಿ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

Traffic rules awareness program at PES College
 

ಪಾದಚಾರಿಗಳ ಸುರಕ್ಷತೆಯ ಬಗ್ಗೆಯೂ ಒತ್ತು ನೀಡಿದ ಅವರು, “ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕಡ್ಡಾಯವಾಗಿ ಪಾದಚಾರಿ ಮಾರ್ಗದಲ್ಲಿಯೇ ನಡೆಯಿರಿ. ರಸ್ತೆ ದಾಟುವಾಗ ರಸ್ತೆಯ ಎರಡೂ ಕಡೆ ನೋಡಿ, ಯಾವುದೇ ವಾಹನ ಬರುತ್ತಿಲ್ಲವೆಂದು ಖಚಿತಪಡಿಸಿಕೊಂಡ ನಂತರವೇ ರಸ್ತೆ ದಾಟಿ” ಎಂದು ಸಲಹೆ ನೀಡಿದರು.

ಇದಲ್ಲದೆ, ಬೈಕ್‌ನಲ್ಲಿ ಟ್ರಿಪಲ್ ರೈಡಿಂಗ್, ವೀಲಿಂಗ್ ಮತ್ತು ರೇಸಿಂಗ್ ಮಾಡುವುದು ಭಾರತೀಯ ಮೋಟಾರು ವಾಹನ ಕಾಯ್ದೆ (IMV Act) ಅಡಿಯಲ್ಲಿ ಅಪರಾಧ ಎಂದು ಎಚ್ಚರಿಕೆ ನೀಡಿದರು.

Traffic rules awareness program at PES College

END OF STORY

ajjimane ganesh

Senior Journalist | Malenadu Today
✓ Verified Journalist