agumbe ghat traffic jam ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ

ಹಂಚಿಕೊಳ್ಳಿ
WhatsApp Facebook X Telegram
agumbe ghat traffic jam
agumbe ghat traffic jam

agumbe ghat traffic jam ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ

ಇಂದು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಡುವಂತಾಯಿತು. ಘಾಟಿಯ 7ನೇ ತಿರುವಿನಲ್ಲಿ ಲಾರಿಯ ಆಕ್ಸೆಲ್ ಕಟ್ ಆಗಿ ರಸ್ತೆಯ ಮಧ್ಯದಲ್ಲೇ ಕೆಟ್ಟು ನಿಂತಿತ್ತು.

ಈ ಲಾರಿಯಿಂದಾಗಿ, ಘಾಟಿಯನ್ನು ಹತ್ತಿ ಬರುವ ಮತ್ತು ಇಳಿದು ಹೋಗುವ ವಾಹನಗಳು ಎರಡೂ ಕಡೆಯಿಂದಲೂ ಸಿಲುಕಿಕೊಂಡವು. ಮುಂದಕ್ಕೆ ಹೋಗಲು ಸಾಧ್ಯವಾಗದೆ, ಹಿಂದಕ್ಕೂ ಬರಲಾಗದೆ ವಾಹನ ಸವಾರರು ಗಂಟೆಗಟ್ಟಲೆ ಪರದಾಡಿದರು.

ವಿಷಯ ತಿಳಿಯುತ್ತಿದ್ದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕೆಟ್ಟು ನಿಂತ ಲಾರಿಯನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲು ಕ್ರಮ ಕೈಗೊಂಡಿದ್ದಾರೆ.

agumbe ghat traffic jam ಘಾಟಿಯಲ್ಲಿ ಕೆಟ್ಟು ನಿಂತ ಲಾರಿ
agumbe ghat traffic jam ಘಾಟಿಯಲ್ಲಿ ಕೆಟ್ಟು ನಿಂತ ಲಾರಿ
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor