trump Hotel Rental app scam / ಟ್ರಂಪ್​ ಹೋಟೆಲ್​ ಬ್ಯುಸಿನೆಸ್​ ಬಗ್ಗೆ ನಿಮಗೂ ಆಫರ್ ಬಂದಿದ್ಯಾ!? 800 ಜನ್ರಿಗೆ ಟೋಪಿ!

ಹಂಚಿಕೊಳ್ಳಿ
WhatsApp Facebook X Telegram
trump Hotel Rental app scam
trump Hotel Rental app scam

trump Hotel Rental app scam ಕರ್ನಾಟಕದಲ್ಲಿ “ಟ್ರಂಪ್ ಹೋಟೆಲ್ ಬಾಡಿಗೆ” ಎಂಬ ನಕಲಿ ಅಪ್ಲಿಕೇಶನ್ ಹಾವಳಿ ಶುರುವಾಗಿದೆ. ಸೈಬರ್​ ಕ್ರೈಂನ ಹೊಸ ರೂಪ ಇದಾಗಿದ್ದು, ಈಗಾಗಲೇ ಸುಮಾರು 200 ಜನರನ್ನು ವಂಚಿಸಿ 2 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ವಂಚಿಸಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೋಟೋಗಳನ್ನು ಹೂಡಿಕೆದಾರರಿಗೆ 100%ಕ್ಕೂ ಹೆಚ್ಚು ರಿಟರ್ನ್ ಭರವಸೆ ನೀಡುತ್ತಾ ವಂಚಿಸಲಾಗುತ್ತಿದೆ. ಇನ್​ವೆಸ್ಟ್ ಮೆಂಟ್​ ಮಾಡಿದರೆ, ನೂರಕ್ಕೆ ನೂರರಷ್ಟು ಲಾಭ ಎಂದು ಹೇಳಿ ಬೆಂಗಳೂರು, ತುಮಕೂರು, ಮಂಗಳೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಶಿವಮೊಗ್ಗ, ಬಳ್ಳಾರಿ ಮತ್ತು ಬೀದರ್ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ 800ಕ್ಕೂ ಹೆಚ್ಚು ಜನರನ್ನು ಮೋಸ ಮಾಡಲಾಗಿದೆ ಎಂದು ವರದಿಯಾಗಿದೆ. 

trump Hotel Rental app scam

 ಸಾಮಾಜಿಕ ಮಾಧ್ಯಮದ ಮೂಲಕ ಜಾಹೀರಾತು ನೀಡಿ ತನ್ನತ್ತ ಗ್ರಾಹಕರನ್ನು ಸೆಳೆಯುತ್ತಿರುವ ವಂಚಕರು ಅಪ್ಲಿಕೇಶನ್​ವೊಂದನ್ನ ಬಳಸಿ ಮೊದಲು 1,500 ರೂಪಾಯಿ ಕೊಟ್ಟು ನೋಂದಣಿಯಾಗುವಂತೆ ಪ್ರೇರಪಿಸುತ್ತಾರೆ. ಆನಂತರ ಸಣ್ಣ ಹೂಡಿಕೆಗೆ ತಕ್ಕ ಪ್ರತಿಫಲವನ್ನು ಸಹ ನೀಡುತ್ತಿದ್ದಾರೆ. ಆನಂತರೆ ಹೆಚ್ಚುವರಿ ಹೂಡಿಕೆ ಮಾಡಿದಷ್ಟು ಇಲ್ಲದ ನೆಪಗಳನ್ನ ಹೇಳಿ ಹಣವನ್ನು ವಸೂಲಿ ಮಾಡಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಇಂತಹ 15 ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor