bhadravati news :  ಭದ್ರಾ ಚಾನಲ್​ಗೆ ಬಿದ್ದಿದ್ದ ಜಿಂಕೆ ಮರಿ ರಕ್ಷಣೆ

ಹಂಚಿಕೊಳ್ಳಿ
WhatsApp Facebook X Telegram
bhadravati news
bhadravati news ಜಿಂಕೆ ಮರಿ ರಕ್ಷಣೆ

bhadravati news : ಭದ್ರಾ ಚಾನೆಲ್ ಗೆ ನೀರು ಕುಡಿಯಲು ಬಂದಿದ್ದ ಜಿಂಕೆಯ ಮರಿಯೊಂದು ನೀರೊಳಗೆ ಬಿದ್ದಿದ್ದು, ಶಿವಮೊಗ್ಗದ ಅಗ್ನಿಶಾಮಕದಳದ ಸಿಬ್ಬಂದಿಗಳು ಜಿಂಕೆ ಮರಿಯನ್ನು ರಕ್ಷಿಸಿದ್ದಾರೆ.ಇಂದು ಬೆಳಿಗ್ಗೆ ಭದ್ರಾವತಿ ತಾಲೂಕು ಕೈಮರದ ಅಶೋಕ ನಗರದ ಭದ್ರಾ ಚಾನೆಲ್ ಗೆ ನೀರು ಕುಡಿಯಲು ಜಿಂಕೆ ಮರಿ ಬಂದಿತ್ತು. ಆ ವೇಳೆ ಆಯಾ ತಪ್ಪಿ ನೀರಿನ ಒಳಗೆ ಬಿದ್ದಿದೆ. ಈ ಹಿನ್ನಲೆ ಅದಕ್ಕೆ ನೀರಿನಿಂದ ಮೇಲೆ ಬರಲು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ  ಸ್ಥಳೀಯರು ಶಿವಮೊಗ್ಗದ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಜಿಂಕೆಮರಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭದ್ರ ನಾಲೆಗಳಲ್ಲಿ ನದಿಯ ಒಳಹರಿವು ಹೆಚ್ಚಾಗಿದ್ದು, ಜಿಂಕೆಯೊಂದು ನೀರಿಗೆ ಸಿಲುಕಿಕೊಂಡಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor