MALNAD SUDDI

bhadra dam water release ಭದ್ರಾ ಜಲಾಶಯದ ಎಡದಂಡೆ ಬಲದಂಡೆ ಕಾಲುವೆಗೆ ನೀರು!

Malenadu Today ನವೀಕರಣ: 08 ಮೇ 2025, 3:27 ಫೂರ್ವಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

bhadra dam water release  ಭದ್ರಾ ಜಲಾಶಯದ ನೀರನ್ನು ನಂಬಿರುವ ರೈತರಿಗೆ ಇಲ್ಲೊಂದು ಗುಡ್​  ನ್ಯೂಸ್​ ಇದೆ. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಬೆಳೆದ ಬೆಳೆ ಕಟಾವಿಗೆ ಇನ್ನೂ ಸಹ ಕಾಲಾವಕಾಶ ಇರುವ ಹಿನ್ನೆಲೆಯಲ್ಲಿ ಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆಯಿಂದ ನೀರು ಹರಿಸುವುದನ್ನು ಮುಂದುವರಿಸಲಾಗಿದೆ.ಈ ಬಗ್ಗೆ ವಿವರ ಹೀಗಿದೆ. 

bhadra dam water release

ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಬೆಳೆಗಳು ಕಟಾವಿಗೆ ಬರಲು ಇನ್ನಷ್ಟು ಸಮಯದ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಭದ್ರಾ ಡ್ಯಾಂನಿಂದ ನೀರು ಹರಿಸುವುದನ್ನು ಮುಂದುವರಿಸುವಂತೆ  ರೈತರು ಬೇಡಿಕೆ ಇಟ್ಟಿದ್ದರು. ಅನ್ನದಾತರ ಬೇಡಿಕೆಗೆ ಪೂರಕವಾಗಿ ಭದ್ರಾ ಜಲಾಶಯದ ಎಡದಂಡೆ ನಾಲೆಯಲ್ಲಿ ಮೇ 10ರವರೆಗೆ ಮತ್ತು ಬಲದಂಡೆ ನಾಲೆಯಲ್ಲಿ ಮೇ 18ರವರೆಗೆ ನೀರು ಹರಿಸುವುದನ್ನು ಮುಂದುವರಿಸಲಾಗುತ್ತಿದೆ. ನೀರು ಹರಿಸುವುದರ ಬಗ್ಗೆ ಅಧಿಕಾರಿಗಳು ಪ್ರಕಟಣೆಯನ್ನು ನೀಡಿದ್ದು, ಎಡದಂಡೆ ಹಾಗೂ ಬಲದಂಡೆಯ ಕಾಲುವೆ ಪಾತ್ರಗಳಲ್ಲಿ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ಜಾನುವಾರುಗಳ ಮೈ ತೊಳೆಯುವುದು ಸೇರಿದಂತೆ ಎಲ್ಲ ಚಟುವಟಿಕೆ ನಿಷೇಧಿಸಲಾಗಿದೆ. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ರೈತರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಆರ್.ರವಿಚಂದ್ರ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.  

 

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
Malenadu Today