SHIVAMOGGA NEWS TODAY

hosanagara : ಚೌಡಿ ಪೂಜೆಗೆ ಬಂದವನ ಕೊಲೆ | ಏನಿದು ಘಟನೆ 

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

hosanagara : ಹೊಸನಗರ : ದೇವರ ಪೂಜೆಗೆಂದು ಬಂದಿದ್ದ ಅಕ್ಕನ ಗಂಡನ ಮೇಲೆ ಭಾವನೆಂಟ ಓಂಕಾರ್ ಜೈನ್ ​ ಕಟ್ಟಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಹೊಸನಗರ  ತಾಲೂಕಿನ ಕರ್ಕಮುಡಿಯಲ್ಲಿ ನಡೆದಿದೆ.  ದೇವಿಚಂದ್ರ (55) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. 

hosanagara : ಏನಿದು ಘಟನೆ 

ಓಂಕಾರ್  ಜೈನ್ ನ ಅಕ್ಕನ ಗಂಡ ದೇವಿಚಂದ್ರನಿಗೆ ಇದು, ಎರಡನೇ ಮದುವೆಯಾಗಿತ್ತು. ಓಂಕಾರ್  ಮತ್ತು ದೇವಿಚಂದ್ರ  ಕುಟುಂಬದಲ್ಲಿ ಮೊದಲಿನಿಂದಲೂ ಕಲಹಗಳು ಆಗಾಗೆ ನಡೆಯುತ್ತಿತ್ತು ಎನ್ನಲಾಗಿದೆ. ಭಾನುವಾರ ಓಂಕಾರ್ ಜೈನ್  ಮನೆಯಲ್ಲಿ ಚೌಡಿ ಮತ್ತು ಭೂತರಾಯ ಪೂಜೆ  ಆಯೋಜಿಸಲಾಗಿತ್ತು. ಈ ವೇಳೆ ಒಂಕಾರ್ ಅಕ್ಕನ ಗಂಡ  ದೇವಿಚಂದ್ರ ಸಹ  ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದ. ಪೂಜೆ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿ, ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ನಂತರ ಜಗಳ ತಾರಕಕ್ಕೇರಿದ್ದು, ನಾವು ಕಷ್ಟ ಪಟ್ಟು ಪೂಜೆ ಮಾಡಿಸಿದರೆ, ಕಾರ್ಯಕ್ರಮ ಹಾಳು ಮಾಡುತ್ತೀಯಾ ಎಂದು ಓಂಕಾರ್  ಪಕ್ಕದಲ್ಲೇ ಇದ್ದ ಮರದ ದೊಣ್ಣೆಯಿಂದ  ದೇವಿಚಂದ್ರನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.ಈ ವೇಳೆ ದೇವಿಚಂದ್ರನ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಂತರ ಓಂಕಾರ್ ಜೈನ್ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ  ಶೋಧಕಾರ್ಯ ನಡೆಸುತ್ತಿದ್ದಾರೆ.

 

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.