ಶಿವಮೊಗ್ಗ: ಲಕ್ಕಿನಕೊಪ್ಪದಲ್ಲಿ ಜೋಕಾಲಿ ಆಡುವಾಗ ಕುಣಿಕೆ ಬಿಗಿದು ಬಾಲಕಿ ಸಾವು! ನಡೆದ ಘಟನೆ ಮೂಡಿಸ್ತಿದೆ ಎಚ್ಚರಿಕೆ

ಹಂಚಿಕೊಳ್ಳಿ
WhatsApp Facebook X Telegram
shimoga chikkamagaluru malnad crime news Annanagar Wife Conspires to Murder Husband in Shivamogga
shimoga chikkamagaluru Wife chikkamagaluru Conspires to Murder Husband in Shivamogga

ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಕುತ್ತಿಗೆಗೆ ಕುಣಿಕೆ ಬಿಗಿದುಕೊಂಡು ಒಂಬತ್ತು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ. ಶಿವಮೊಗ್ಗದ ವಿದ್ಯಾನಗರದ ನಿವಾಸಿಯಾಗಿರುವ 9 ವರ್ಷದ ಪ್ರಣಮ್ಯ ಮೃತ ದುರ್ದೈವಿ. ಈ ಘಟನೆಯು ಮೂರು ದಿನಗಳ ಹಿಂದೆ ನಡೆದಿದ್ದು, ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ.

ಲಕ್ಕಿನಕೊಪ್ಪದಲ್ಲಿ ಜೋಕಾಲಿ ಆಡುವಾಗ ಘಟನೆ

ಬೇಸಿಗೆಯ ರಜೆ ಕಳೆಯುವ ಉದ್ದೇಶದಿಂದ ಪ್ರಣಮ್ಯ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದಳು. ಈ ವೇಳೆ ಮನೆಯ ಒಳಗಡೆ ಕೋಣೆಯ ಬಾಗಿಲನ್ನು ಹಾಕಿಕೊಂಡು, ಪಂಚೆಯನ್ನು ಬಳಸಿ ಜೋಕಾಲಿಯನ್ನು ಕಟ್ಟಿಕೊಂಡು ಆಟವಾಡುತ್ತಿದ್ದಳು. ಹೀಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಂಚೆಯು ಕುತ್ತಿಗೆಗೆ ಬಿಗಿದುಕೊಂಡು ಈ ಅವಘಡ ಸಂಭವಿಸಿದೆ.

ಚಿಕ್ಕಮ್ಮನ ಮನೆಯಲ್ಲಿ ರಜೆಯ ದಿನಗಳನ್ನು ಕಳೆಯಬೇಕಿದ್ದ ಬಾಲಕಿಯು ಆಟವಾಡುತ್ತಿದ್ದಾಗಲೇ ಸಾವನ್ನಪ್ಪಿರುವುದು ಕುಟುಂಬದಲ್ಲಿ ಶೋಕವನ್ನುಂಟುಮಾಡಿದೆ. ಇನ್ನೂ ಘಟನೆ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶಿವಮೊಗ್ಗ: ಲಕ್ಕಿನಕೊಪ್ಪದಲ್ಲಿ ಜೋಕಾಲಿ ಆಡುವಾಗ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಪ್ರಣಮ್ಯ ಸಾವು Shivamogga: 9-Year-Old Girl Dies of Accidental Hanging While Playing on Swing
ಶಿವಮೊಗ್ಗ: ಲಕ್ಕಿನಕೊಪ್ಪದಲ್ಲಿ ಜೋಕಾಲಿ ಆಡುವಾಗ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಪ್ರಣಮ್ಯ ಸಾವು Shivamogga: 9-Year-Old Girl Dies of Accidental Hanging While Playing on Swing

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor