200 ಸಿಬ್ಬಂದಿ, 4 ಗಂಟೆ ಕಾರ್ಯಾಚರಣೆ | ಸಿಕ್ಕಿಬಿದ್ದ ಹಾಸನ ಆನೆ ಸಕ್ರೆಬೈಲ್‌ ಬಿಡಾರಕ್ಕೆ ಶಿಫ್ಟ್‌ | ಕ್ರಾಲ್‌ ವಿಡಿಯೋ ನೋಡಿ

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 21, 2025 ‌‌ ‌‌

ಹಾಸನ ಜಿಲ್ಲೆಯಲ್ಲಿ ಕಾಟ ಕೊಡುತ್ತಿರುವ ಕಾಡಾನೆಗಳನ್ನು ಹಿಡಿಯಲು ಅರ‍ಣ್ಯ ಇಲಾಖೆ ಸೂಚನೆ ನೀಡಿದೆ. ಮೇಲಾಗಿ ಈ ಸಂಬಂಧ ಕಾರ್ಯಾಚರಣೆಯು ಸಹ ಆರಂಭವಾಗಿದ್ದು, ಬೇಲೂರು ತಾಲ್ಲುಕು ಬಿಕ್ಕೋಡು ಬಳಿ ಆನೆಯೊಂದನ್ನು ಹಿಡಿದಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ ಆನೆಯನ್ನು ಅರವಳಿಕೆ ಚುಚ್ಚುಮದ್ದು ಬಳಸಿ ಹಿಡಿಯಲಾಗಿದೆ.

ಸುಮಾರು 200 ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹಿಡಿದ ಕಾಡಾನೆಯನ್ನು ನಿನ್ನೆ ದಿನ ರಾತ್ರಿ ಶಿವಮೊಗ್ಗದ ಸಕ್ರೆಬೈಲ್‌ ಆನೆ ಬಿಡಾರಕ್ಕೆ ತರಲಾಗಿದೆ. ರಾತ್ರಿಯೇ ಆನೆಯನ್ನು ಕ್ರಾಲ್‌ನಲ್ಲಿ ಇರಿಸಲಾಗಿದ್ದು, ಆನೆಯನ್ನು ಪಳಗಿಸುವುದೋ ಅಥವಾ ಪುನಃ ಕಾಡಿಗೆ ಬಿಡುವುದೋ ಎಂಬುದು ಇನ್ನಷ್ಟೆ ತೀರ್ಮಾನವಾಗಬೇಕಿದೆ.

Leave a Comment