SHIVAMOGGA | MALENADUTODAY NEWS | ಮಲೆನಾಡು ಟುಡೆ Dec 9, 2024
ಪುಟ್ಟ ಮಗುವೊಂದರ ತುರ್ತುಚಿಕಿತ್ಸೆಗಾಗಿ ನಿನ್ನೆ ದಿನ ಶಿವಮೊಗ್ಗದಲ್ಲಿ ಜಿರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೀರೋ ಟ್ರಾಫಿಕ್ ಮೂಲಕ ಶಿವಮೊಗ್ಗದಿಂದ ಮಂಗಳೂರು ಆಸ್ಪತ್ರೆಗೆ ಮಗುವನ್ನು ರವಾನೆ ಮಾಡಲಾಗಿದೆ.
ಸಾಗರ ತಾಲ್ಲೂಕು ಸಮಂಗಳ ಹಾಗೂ ಲೋಕೇಶ್ ದಂಪತಿಯ ಆರು ದಿನದ ಹಸುಗೂಸಿಗೆ ಉಸಿರಾಟದ ಸಮಸ್ಯೆಯಾಗಿತ್ತು. ಹೀಗಾಗಿ ಸಾಗರ ಸರ್ಕಾರಿ ಆಸ್ಪತ್ರೆಯಿಂದ ಮಗುವನ್ನು ಶಿವಮೊಗ್ಗಕ್ಕೆ ಕರೆತರಲಾಗಿತ್ತು. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ , ಮಗುವನ್ನ ಜೀರೋ ಟ್ರಾಫಿಕ್ ವ್ಯವಸ್ಥೆ ಮೂಲಕ ಮಂಗಳೂರಿಗೆ ರವಾನೆ ಮಾಡಲಾಗಿದೆ.
ಶಿವಮೊಗ್ಗ ಟ್ರಾಫಿಕ್ ಪೊಲೀಸ್, ಆಂಬುಲೆನ್ಸ್ , ಸಿಬ್ಬಂದಿ ಸೇರಿದಂಥೆ ವಿವಿಧ ಇಲಾಖೆಯ ಅಧಿಕಾರಿಗಳು ಮಗುವನ್ನ ಸರಿಯಾದ ಸಮಯಕ್ಕೆ ಮಂಗಳೂರಿಗೆ ರವಾನೆ ಮಾಡಲು ನೆರವಾಗಿದ್ದಾರೆ.

SUMMARY | child, who hails from Sagar taluk, was shifted from Shimoga’s Meggan Hospital to Mangaluru by zero traffic.
KEY WORDS | Sagar taluk, child shifted zero traffic, Shimoga Meggan Hospital , Mangaluru