ಮ್ಯಾಮ್‌ಕೋಸ್‌ ಚುನಾವಣೆಗೆ ಕುರಿತಂತೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ | ಏನದು?

Published: 31 ಜನವರಿ 2025, 9:01 ಅಪರಾಹ್ನ • 1 min read

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 31, 2025

ಶಿವಮೊಗ್ಗ | ಮ್ಯಾಮ್‌ಕೋಸ್‌ ಚುನಾವಣೆಯು ಫೆಬ್ರವರಿ 4 ರಂದು ನಡೆಯುತ್ತಿದ್ದು ನಮ್ಮ ಪಕ್ಷದ 19 ಜನರು ಚುನಾವಣೆಗೆ ಸ್ಫರ್ಧಿಸುತ್ತಿದ್ದಾರೆ ಅವರಿಗೆ ಮತ ನೀಡಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸದಸ್ಯರ ಪರವಾಗಿ ಮತಯಾಚಿಸಿದರು.

ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಫೆಬ್ರವರಿ 04 ರಂದು ಮ್ಯಾಮ್ ಕೋಸ್ ಚುನಾವಣೆ 17 ಜಿಲ್ಲೆಯಲ್ಲಿ ನಡೆಯಯುತ್ತಿದೆ. ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಅಡಿ 19 ಜನ ಕಾಂಗ್ರೆಸ್ ಬೆಂಬಲಿಗರು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲು ನಮಗೆ ಹೈಕಮಾಂಡ್‌ ಸೂಚಿಸಿದೆ

ಹಾಗಾಗಿ ಇಂದು ಎರಡು ಕಡೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಭೆಯಿದೆ. ಅದನ್ನು ಮುಗಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಪ್ರಚಾರಕ್ಕೆ ಇಳಿಯಲಿದ್ದೇವೆ ಎಂದರು. ಹಾಗೆಯೇ ಮ್ಯಾಮ್ ಕೋಸ್ ಸದ್ಯ ಬಹಳ ಹಾಳಾಗಿದ್ದು,  ಬೇರೆ ಪಕ್ಷದವರು ಪಕ್ಷದ ಚಟುವಟಿಕೆಗಾಗಿ ಮ್ಯಾಮ್‌ ಕೋಸ್‌ನ್ನು ಬಳಸಿಕೊಳ್ತಿದ್ದಾರೆ ಎಂದು ಆರೋಪಿಸಿದರು.

SUMMARY | Education Minister Madhu Bangarappa sought votes on behalf of the members, saying that the MAMCOS elections are being held on February 4 and 19 people of our party are contesting the elections.

KEYWORDS | MAMCOS, elections, votes, Madhu Bangarappa,  

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

131

Senior Journalist | Malenadu Today
✓ Verified Journalist