ಮಂಗಳೂರು ನಿಂದ ಗೊಬ್ಬರ ತರುತ್ತಿದ್ದ ಲಾರಿ ಪಲ್ಟಿ | ಬೆಳಗಿನ ಜಾವ ಕರೆಂಟ್‌ ಸ್ಪಾರ್ಕ್‌ಗೆ ಜನ ಶಾಕ್

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 9, 2024 ‌ 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹೊಸನಗರ ಪೇಟೆಯಲ್ಲಿ ಲಾರಿಯೊಂದು ಮಗುಚಿ ಬಿದ್ದಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ  766  ಸಿಯಲ್ಲಿ ಇವತ್ತು ಬೆಳಗಿನ ಜಾವ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಗೊಬ್ಬರ ಸಾಗಿಸುತ್ತಿದ್ದ ಹೋಗುತ್ತಿದ್ದ ಲಾರಿ ಪಲ್ಟಿಯಾಗಿದೆ. 

- Advertisement -

ಹಾನಗಲ್‌ ಮೂಲದ ಲಾರಿಯು ಮಂಗಳೂರಿನಿಂದ ಸೊರಬಕ್ಕೆ ಗೊಬ್ಬರ ಸಾಗಿಸುತ್ತಿತ್ತು.ಇವತ್ತು ಬೆಳಗ್ಗೆ ಮೂರು ಗಂಟೆಯ ಹೊತ್ತಿಗೆ ಲಾರಿಯು ಲೈಟ್‌ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಘಟನೆಯಲ್ಲಿ ಲಾರಿ ಅಪಘಾತಕ್ಕೀಡಾಗುತ್ತಲೇ ಕೈಂಟ್‌ ಕಂಬಗಳು ತುಂಡಾಗಿದ್ದಷ್ಟೆ ಅಲ್ಲದೆ ವೈಯರ್‌ಗಳು ಒಂದಕ್ಕೊಂಡು ಬಡಿದು ದೊಡ್ಡ ಶಬ್ಧದೊಂದಿಗೆ ಸ್ಪಾರ್ಕ್‌ ಆಗಿದೆ. ಇದನ್ನ ಕೇಳುತ್ತಲೇ ಮನೆಗಳಿಂದ ಎದ್ದು ಬಂದ ಸ್ಥಳೀಯರು ಲಾರಿ ಚಾಲಕನನ್ನು ಬಚಾವ್‌ ಮಾಡಿದ್ದಾರೆ.

 

SUMMARY | A lorry overturned at Hosanagar Shivamogga district. 

KEY WORDS  lorry overturned at Hosanagar, Hosanagara taluk , Shivamogga district 

Share This Article