ನಾವು ಕೂಲಿ ಮಾಡೋರು, ನಮಗೆ ತಕ್ಷಣ ಪರಿಹಾರ ಕೊಡ್ಸಿ..” ಸಚಿವರ ಮುಂದೆ ಕಣ್ಣೀರಿಟ್ಟ ಸಂತ್ರಸ್ತರು!

ನಾವು ಕೂಲಿ ಮಾಡೋರು, ನಮಗೆ ತಕ್ಷಣ ಪರಿಹಾರ ಕೊಡ್ಸಿ..” ಸಚಿವರ ಮುಂದೆ ಕಣ್ಣೀರಿಟ್ಟ ಸಂತ್ರಸ್ತರು! ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಬಿರುಗಾಳಿ-ಮಳೆಗೆ ತತ್ತರಿಸಿದ ಅರಹತೊಳಲು ಸೇರಿದಂತೆ ವಿವಿಧ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದಾಗ ಕಂಡುಬಂದ ದೃಶ್ಯವಿದು.

​”ನಾವು ದಿನಗೂಲಿ ನಂಬಿ ಬದುಕುವವರು, ಪರಿಹಾರಕ್ಕಾಗಿ 5-6 ವರ್ಷ ಕಾಯಲು ನಮ್ಮಿಂದ ಸಾಧ್ಯವಿಲ್ಲ. ಮಿಶ್ರಬೆಳೆ, ತೋಟಗಾರಿಕೆ ಬೆಳೆ, ಮನೆ ಹಾನಿಯಾಗಿದೆ. ನಮಗೆ ಕೂಡಲೇ ಪರಿಹಾರ ಒದಗಿಸಿ” ಎಂದು ಮಳೆಯಿಂದ ಕಂಗಾಲಾದ ರೈತರು ಹಾಗೂ ಕೂಲಿ ಕಾರ್ಮಿಕರು ಸಚಿವರನ್ನು ಸುತ್ತುವರಿದು ತಮ್ಮ ಅಳಲು ತೋಡಿಕೊಂಡರು.

​ಸಂತ್ರಸ್ತರ ಅಹವಾಲು ಆಲಿಸಿದ ಸಚಿವರು, “ಸರ್ಕಾರ ನಿಮ್ಮೊಂದಿಗಿದೆ, ಯಾರಿಗೂ ಅನ್ಯಾಯವಾಗಲ್ಲ” ಎಂದು ಸಾಂತ್ವನ ಹೇಳಿದರು. ಯಾವುದೇ ವಿಳಂಬ ಮಾಡದೇ ತಕ್ಷಣವೇ ವೈಜ್ಞಾನಿಕವಾಗಿ ಹಾನಿ ಸಮೀಕ್ಷೆ ನಡೆಸಿ, ಗರಿಷ್ಠ ಪರಿಹಾರ ಬಿಡುಗಡೆ ಮಾಡುವಂತೆ ಕಂದಾಯ ಅಧಿಕಾರಿಗಳಿಗೆ ಸ್ಥಳದಲ್ಲೇ ಕಟ್ಟುನಿಟ್ಟಿನ ಸೂಚನೆ ನೀಡಿದರು.

​#Shivamogga #MadhuBangarappa #RainDamage #FarmersIssue #KarnatakaNews #MalenaduToday #ShivamoggaNews #CropLoss #Arahatholalu