ಉಗ್ರ ಶಾರೀಕ್‌ಗೆ 10 ವರ್ಷ ಕಠಿಣ ಶಿಕ್ಷೆ: ಕಾಂಗ್ರೆಸ್ ವಿರುದ್ಧ ಶಾಸಕ ಎಸ್​ ಚನ್ನಬಸಪ್ಪ ಹರ್ಷ

ಕೊನೆಯ ನವೀಕರಣ: 28 ಏಪ್ರಿಲ್ 2026, 9:27 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
ಉಗ್ರ ಶಾರೀಕ್‌ಗೆ 10 ವರ್ಷ ಕಠಿಣ ಶಿಕ್ಷೆ: ಕಾಂಗ್ರೆಸ್ ವಿರುದ್ಧ ಶಾಸಕ ಎಸ್​ ಚನ್ನಬಸಪ್ಪ ಹರ್ಷ

ಉಗ್ರ ಶಾರೀಕ್‌ಗೆ 10 ವರ್ಷ ಕಠಿಣ ಶಿಕ್ಷೆ: ಕಾಂಗ್ರೆಸ್ ವಿರುದ್ಧ ಶಾಸಕ ಎಸ್​ ಚನ್ನಬಸಪ್ಪ ಹರ್ಷ

ಮಂಗಳೂರು ಕುಕ್ಕರ್ ಬ್ಲಾಸ್ಟ್ ಆರೋಪಿ ಉಗ್ರ ಶಾರೀಕ್‌ಗೆ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ಶಾಸಕ ಎಸ್​ ಎನ್​ ಚನ್ನಬಸಪ್ಪಸ್ವಾಗತಿಸಿದ್ದಾರೆ. ಎನ್.ಐ.ಎ ತಂಡದ ದಕ್ಷತೆ ಹಾಗೂ ನ್ಯಾಯಾಧೀಶರ ಈ ತೀರ್ಪಿನಿಂದ ದೊಡ್ಡ ಅನಾಹುತವೇ ತಪ್ಪಿದಂತಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದ ತುಂಗಾ ನದಿ ತೀರದಲ್ಲೇ ಟ್ರಯಲ್ ಬ್ಲಾಸ್ಟ್ ನಡೆಸಿದ್ದ ಶಾರೀಕ್ ಕೃತ್ಯಗಳನ್ನು ಸ್ಮರಿಸಿದ ಶಾಸಕರು, ಈ ಹಿಂದೆ ಇಂತಹವರನ್ನು ‘ಬ್ರದರ್ಸ್’ ಎಂದು ಕರೆದಿದ್ದ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್‌ನವರ ಮನಸ್ಥಿತಿ ಈಗಲಾದರೂ ಬದಲಾಗಲಿ ಎಂದು ಚಾಟಿ ಬೀಸಿದ್ದಾರೆ. ಶಿವಮೊಗ್ಗ ಜಿಲ್ಲೆ ಉಗ್ರರ ನೆಲೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಸಂಕೇತ್ ಹತ್ಯೆಯಂತಹ ಪ್ರಕರಣಗಳನ್ನು ಹಗುರವಾಗಿ ತೆಗೆದುಕೊಳ್ಳದೆ ಎನ್.ಐ.ಎ ತನಿಖೆಗೆ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಪಿಎಫ್‌ಐ ಸಂಘಟನೆ ನಿಷೇಧಗೊಂಡಿದ್ದರೂ ಅದರ ಚಟುವಟಿಕೆಗಳು ರಹಸ್ಯವಾಗಿ ನಡೆಯುತ್ತಿದ್ದು, ರಾಜ್ಯ ಸರ್ಕಾರ ಇಡೀ ಹಿಂದೂ ಸಮಾಜದ ರಕ್ಷಣೆಗೆ ಮುಂದಾಗಬೇಕು ಎಂದು ಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ., #TerrorismFreeIndia, #ShariqSentenced, #JusticeForSanketh, #NIASuccess, #ShivamoggaNews, #DKShivakumar, #CongressExposed, #InternalSecurity, #Hindutva, #KarnatakaPolitics, #MalenaduToday,

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor