ಭ್ರಷ್ಟಾಚಾರಿ ಎಂದು ಕರೆದಿದ್ದರು, ಬೇಕಿದ್ದರೆ ಹಳೆಯ ವಿಡಿಯೋ ತೆಗೆದುನೋಡಿ : ಸಚಿವ ಮಧು ಬಂಗಾರಪ್ಪ Madhu Bangarappa vs BY Vijayendra
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ‘ಅಭಿಮಾನೋತ್ಸವ’ ಕೇವಲ ರಾಜಕೀಯ ಪ್ರೇರಿತ ಕಾರ್ಯಕ್ರಮವಾಗಿದ್ದು, ಇದರ ಹಿಂದೆ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷವನ್ನು ಬಳುವಳಿಯಾಗಿ ನೀಡುವ ‘ಹಿಡನ್ ಅಜೆಂಡಾ’ ಅಡಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಅಟರ್ ಫ್ಲಾಪ್ ಆಗಿದ್ದಾರೆ. ಯಾವುದೇ ಹೋರಾಟವಿಲ್ಲದೆ, ಪುಕ್ಕಟೆಯಾಗಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದೆ. ಪ್ರಸ್ತುತ ರಾಜ್ಯ ಬಿಜೆಪಿಯಲ್ಲಿ ಐದಾರು ಬಾಗಿಲುಗಳಿದ್ದು (ಬಣಗಳು), ಆ ಪೈಕಿ ಒಂದು ಬಾಗಿಲನ್ನು ಸೃಷ್ಟಿಸಿ ತಮ್ಮ ಮಗನಿಗೆ ರಾಜಕೀಯ ನೆಲೆ ಒದಗಿಸಲು ಯಡಿಯೂರಪ್ಪನವರು ಈ ಇಳಿ ವಯಸ್ಸಿನಲ್ಲಿ ಹೊರಟಿದ್ದಾರೆ. ಇದೇ ಕಾರಣಕ್ಕಾಗಿ ಈ ಅಭಿಮಾನೋತ್ಸವ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಟೀಕಿಸಿದರು.
ರಾಜ್ಯದ ಇತಿಹಾಸದಲ್ಲಿ ಮುಖ್ಯಮಂತ್ರಿಯಾದವರು ಯಾರು ಜೈಲಿಗೆ ಹೋಗಿದ್ದರು ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ. ಕೇಂದ್ರ ಸಚಿವ ಅಮಿತ್ ಶಾ ಅವರೇ ಹಿಂದೆ ಯಡಿಯೂರಪ್ಪನವರನ್ನು ಭ್ರಷ್ಟಾಚಾರಿ ಎಂದು ಕರೆದಿದ್ದರು, ಬೇಕಿದ್ದರೆ ಹಳೆಯ ವಿಡಿಯೋಗಳನ್ನು ತೆಗೆದುನೋಡಿ ಎಂದರು. ಇದೊಂದು ಅಪ್ಪಟ ರಾಜಕೀಯ ಕಾರ್ಯಕ್ರಮವಾಗಿರುವುದರಿಂದ ಯಾವುದೇ ಧರ್ಮದ ಮಠಾಧೀಶರು, ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು. ಭಾಗವಹಿಸಿದರೆ ಸಮಾಜಕ್ಕೆ ಬೇರೆಯದೇ ಆದ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಅವರು ಬಹಿರಂಗವಾಗಿ ಮನವಿ ಮಾಡಿದರು.
Madhu Bangarappa speech today, BS Yediyurappa Abhimanotsava, BY Vijayendra BJP, Shivamogga politics, Karnataka politics news Kannada, Congress vs BJP Karnataka, #MadhuBangarappa #BSYediyurappa #BYVijayendra #Shivamogga #KarnatakaPolitics #BJPKarnataka #Congress #KannadaNews
