STATE NEWS

ಟಾಪ್ ಆಗಿ ಬರ್ತಾನೆ… ಇದಕ್ಕೆ ಹೇಳಿದ್ದು ಅನಿಸುತ್ತಾ ತಾರಮ್ಮ!? ಯಶ್ ಬಗ್ಗೆ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Yash Toxic ಶಿವಮೊಗ್ಗ: ಯಶ್ ನಟಿಸಿ, ನಿರ್ಮಾಣ ಮಾಡುತ್ತಿರುವ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ವಿಶ್ವದಾದ್ಯಂತ ಆಗಸ್ಟ್ 26 ರಂದು ಬಿಡುಗಡೆಯಾಗುತ್ತಿದೆ. ಚಿತ್ರತಂಡವು ರಿಲೀಸ್ ಡೇಟ್ ಅನ್ನು ಈಗಾಗಲೇ ಸಾಕಷ್ಟು ಬಾರಿ ಮುಂದೂಡಿತ್ತು. ಎರಡು ಬಾರಿ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದ ಚಿತ್ರತಂಡ, ಇದೀಗ ಅಧಿಕೃತವಾಗಿ ಹೊಸ ರಿಲೀಸ್ ಡೇಟ್ ಘೋಷಣೆ ಮಾಡಿದೆ. ಇದರ ನಡುವೆ ಯಶ್ ಅಭಿಮಾನಿಗಳು ಈ ಸುದ್ದಿಯನ್ನು ವಿಭಿನ್ನವಾಗಿ ಸಂಭ್ರಮಿಸುತ್ತಿರುವುದನ್ನು ನಾವು ಸೋಷಿಯಲ್ ಮೀಡಿಯಾದಲ್ಲಿ ನೋಡಬಹುದು.

ಶಿವಮೊಗ್ಗ : ಗಂಡು ಮಗುವಿನ ಭ್ರೂಣ ಪತ್ತೆ ! ಮಕ್ಕಳ ಸಹಾಯವಾಣಿ ಯೋಜನಾ ಸಂಯೋಜಕರಿಂದ ದೂರು

Yash Toxic ಟಾಕ್ಸಿಕ್ ರಿಲೀಸ್ ಡೇಟ್‌ಗೂ ಕಿರಾತಕ ಸಿನಿಮಾ ಡೈಲಾಗ್‌ಗೂ ಇದೆ ಲಿಂಕ್!

ಯಶ್ ಅಭಿನಯದ ಕಿರಾತಕ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ? 2011 ರಲ್ಲಿ ತೆರೆಕಂಡ ಕಿರಾತಕ ಸಿನಿಮಾ ಯಶ್ ಅವರಿಗೆ ದೊಡ್ಡ ಇಮೇಜ್ ತಂದುಕೊಟ್ಟಿತ್ತು. ಅಷ್ಟೇ ಅಲ್ಲದೆ, ಆ ಸಿನಿಮಾದ ಅನೇಕ ಡೈಲಾಗ್‌ಗಳು ಇಂದಿಗೂ ಸಹ ಅನೇಕ ಮೀಮ್ ಕ್ರಿಯೇಟರ್ಸ್ ಹಾಗೂ ಟ್ರೋಲರ್‌ಗಳಿಗೆ ಅಚ್ಚುಮೆಚ್ಚು. ಇದರ ನಡುವೆ, ಕಿರಾತಕ ಸಿನಿಮಾದಲ್ಲಿ ನಟಿ ತಾರಾ ಅವರು ಹೇಳಿರುವ ಒಂದು ಡೈಲಾಗ್ ಅನ್ನು ಇದೀಗ ಯಶ್ ಅಭಿಮಾನಿಗಳು ಮೀಮ್ ಮೂಲಕ ರೀ-ಕ್ರಿಯೇಟ್ ಮಾಡಿದ್ದಾರೆ.

ಕಿರಾತಕ ಸಿನಿಮಾದಲ್ಲಿ ಯಶ್ ತಾಯಿ ಪಾತ್ರ ಮಾಡಿರುವ ತಾರಾ ಅವರ ಬಳಿ ವಿಚಾರವೊಂದನ್ನು ಕೇಳಿದಾಗ, ನನ್ನ ಮಗನ ಗ್ರಹಗತಿ ಚೆನ್ನಾಗಿಲ್ಲವಂತೆ ಈ ಜ್ಯೇಷ್ಠ ಹೋಗಿ, ಆಷಾಢ ಹೋಗಿ, ಶ್ರಾವಣ ಬಂದಾಗ ಅವನು ಟಾಪ್‌ನಲ್ಲಿ ಬರ್ತಾನಂತೆ ಎಂಬ ಡೈಲಾಗ್ ಹೇಳುತ್ತಾರೆ. ಇದೀಗ ಆ ಡೈಲಾಗ್ ಅನ್ನು ಯಶ್ ಅವರ ಟಾಕ್ಸಿಕ್ ಸಿನಿಮಾದ ರಿಲೀಸ್ ಡೇಟ್‌ಗೆ ತಾಳೆ ಹಾಕಿ ಮೀಮ್ಸ್ ಕ್ರಿಯೇಟ್ ಮಾಡಲಾಗುತ್ತಿದೆ. ಹೌದು, ಟಾಕ್ಸಿಕ್ ಸಿನಿಮಾ ಆಗಸ್ಟ್ ತಿಂಗಳಲ್ಲಿ ರಿಲೀಸ್ ಆಗ್ತಾ ಇದೆ. ಆ ಸಮಯ ಶ್ರಾವಣ ಮಾಸ ಆಗಿರುವುದರಿಂದ, ಯಶ್ ಅವರು ‘ಟಾಪ್’ ಆಗಿ ಬರುವ ಉದ್ದೇಶದಿಂದಲೇ ಶ್ರಾವಣದಲ್ಲಿ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಮೀಮ್ಸ್ ಹರಿಬಿಟ್ಟಿದ್ದಾರೆ.

ಆದಿತ್ಯ ಅಂಗಡಿ 17 ಎಂಬ ಹೆಸರಿನ ಯಶ್ ಅಭಿಮಾನಿಯ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಟಾಕ್ಸಿಕ್ ರಿಲೀಸ್ ಡೇಟ್ ಪೋಸ್ಟರ್ ಹಾಗೂ ಕಿರಾತಕ’ ಚಿತ್ರದ ಈ ವಿಡಿಯೋ ಕ್ಲಿಪ್ ಹಾಕಿ, ಎಲ್ಲಿಂದ ಎಲ್ಲಿಗೆ ಲಿಂಕ್ ಇಟ್ಟಿದ್ದೀಯಾ ಗುರುವೇ! ಎಂಬ ಕ್ಯಾಪ್ಷನ್ ನೀಡಲಾಗಿದೆ.ಇದಕ್ಕೆ ಅನೇಕರು ಕಮೆಂಟ್ ಮಾಡಿದ್ದು, ಕೆಲವರು ಕ್ರೇಜಿ ಎಂದಿದ್ದಾರೆ. ಇನ್ನೂ ಕೆಲವರು, ಚಿತ್ರವು 26-08-2026 ರಂದು ರಿಲೀಸ್ ಆಗುತ್ತಿದೆ ಯಶ್ ಅವರು ಹುಟ್ಟಿದ್ದು ಜನವರಿ 08 ರಂದು. ಈ ರಿಲೀಸ್ ಡೇಟ್‌ನ ಎಲ್ಲಾ ನಂಬರ್‌ಗಳನ್ನು ಕೂಡಿಸಿದರೆ (2+6=8) 8 ಬರುತ್ತದೆ, ಅದು ಅವರ ಲಕ್ಕಿ ನಂಬರ್ ಇರಬಹುದು ಹಾಗಾಗಿ ಅಂದು ರಿಲೀಸ್ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸುತ್ತಿದ್ದಾರೆ.

ಒಟ್ಟಾರೆಯಾಗಿ, ಚಿತ್ರವು ಆಗಸ್ಟ್ 26, 2026 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಇದರ ಹಾವಳಿ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.

Yash Toxic Release Date Link with Kirataka Movie

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.