ಕಣ್ಣಮುಂದೆಯೇ ಕುಸಿದು ಬಿತ್ತು ಸೂರು! ತೀರ್ಥಹಳ್ಳಿಯಲ್ಲಿ ಎರಡು ದಲಿತ ಕುಟುಂಬಗಳ ಮನೆ ತೆರವು ! ಕಾರಣವೇನು?

KARNATAKA NEWS/ ONLINE / Malenadu today/ Jun 15, 2023 SHIVAMOGGA NEWS

ತೀರ್ಥಹಳ್ಳಿ/ ತಾಲ್ಲೂಕಿನ ಮೇಗರವಳ್ಳಿಯಲ್ಲಿ ನಿನ್ನೆ ಬುಧವಾರ ಎರಡು ದಲಿತ ಕುಟುಂಬಗಳ ಮನೆಗಳನ್ನ ಒಡೆದುಹಾಕಲಾಗಿದೆ. ಪರಿಣಾಮ, ಮನೆ ಕಳೆದುಕೊಂಡ 2 ಕುಟುಂಬಗಳ ಬದುಕಿನಲ್ಲಿಗ ಕತ್ತಲೆ ಆವರಿಸಿದೆ. ಖಾಸಗಿ ಒಡೆತನಕ್ಕೆ ಸೇರಿದ ಜಾಗದ ಸಂಬಂಧ ಉದ್ಭವವಾಗಿದ್ದ ವಿವಾದ ಕೋರ್ಟ್​ ಮೆಟ್ಟಿಲೇರಿತ್ತು. ಕೋರ್ಟ್​ ನಲ್ಲಿ  ದಲಿತ ಕುಟುಂಬಗಳು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದ ಸ್ವತ್ತು ತೆರವಿಗೆ ಆದೇಶ ಹೊರಬಿದ್ದಿದೆ. 

ಈ  ಆದೇಶದ ಹಿನ್ನೆಲೆಯಲ್ಲಿ ನಿನ್ನೆ ತೆರವು ಕಾರ್ಯಾಚರಣೆ ನಡೆದಿದೆ. ಮೇಗರವಳ್ಳಿ ಗ್ರಾಮದ ಸ.ನಂ. 1ರ 10 ಗುಂಟೆ ಜಾಗದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರಾಧ, ಲಕ್ಷ್ಮೀ ಎಂಬ ಹೆಸರಿನ ದಲಿತ ಕುಟುಂಬಕ್ಕೆ ಸೇರಿದ ಮನೆಗಳು ನೆಲಕ್ಕುರುಳಿದೆ.  

ಇನ್ನೂ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜೆಸಿಬಿ ಮೂಲಕ ಮನೆ ತೆರವುಗೊಳಿಸಲಾಗಿದ್ದರೂ, ನಡೆದ ಘಟನೆ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆ ವ್ಯಕ್ತವಾಗಿದೆ. ಕನಿಷ್ಟ ಪಕ್ಷ ಜನಪ್ರತಿನಿಧಿಗಳು ದಲಿತ ಕುಟುಂಬಗಳನ್ನು ಉಳಿಸಬಹುದಿತ್ತು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. 


ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಯುವಕನ ಕೊಲೆ!

ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ  ವ್ಯಕ್ತಿಯೊಬ್ಬನನ್ನ ಹತ್ಯೆ ಮಾಡಲಾಗಿದೆ. ನಗರದ ಗೋಪಾಳದಲ್ಲಿ ಈ ಘಟನೆ ಕೆಲವು ಹೊತ್ತಿಗೂ ಮೊದಲು ನಡೆದಿದ್ದು  ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. 

ಆಸೀಫ್​ ಎಂಬಾ 25 ವರ್ಷದ ಯುವಕನನ್ನ ಜಬಿ ಎಂಬಾತ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದ್ದು, ಈ ಸಂಬಂದ ಎಸ್​ಪಿ ಮಿಥುನ್ ಕುಮಾರ್ ಕೂಡ ವಾಟ್ಸ್ಯಾಪ್ ಮೆಸೇಜ್​ನಲ್ಲಿ ಮಾಹಿತಿ ನೀಡಿದ್ದು, ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕೃತ್ಯ ಎಸೆಗಲಾಗಿದೆ ಎಂದಿದ್ಧಾರೆ. ಅಲ್ಲದೆ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ಧಾರೆ. 

 

   

 

Leave a Comment