ಶಾದಿಮಹಲ್‍ಗಳೇ ಈಕೆಯ ಟಾರ್ಗೆಟ್! 18 ಲಕ್ಷ ಮೌಲ್ಯದ ಚಿನ್ನದ ಜೊತೆ ಸಿಕ್ಕಿಬಿದ್ದ ಲೇಡಿ!

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಾದಿ ಮಹಲ್​ಗಳಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಗಳನ್ನೆ ಟಾರ್ಗೆಟ್ ಮಾಡಿಕೊಂಡು, ಅಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯೊಬ್ಬರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ತುಂಗಾನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಶಿವಮೊಗ್ಗ ನಗರದ ಸೂಳೆಬೈಲು ನಿವಾಸಿ 30 ವರ್ಷದ ರುಕ್ಸಾರ್ ಫಿರ್ದೋಸ್ ಎಂದು ಗುರುತಿಸಲಾಗಿದೆ

ಆರೋಪಿತ ಮಹಿಳೆಯಿಂದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಒಟ್ಟು 04 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ವಿಚಾರಣೆ ಬಳಿಕ ಆಕೆಯಿಂದ ಅಂದಾಜು 18,00,000 ರೂಪಾಯಿ ಮೌಲ್ಯದ 120 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಾದಿಮಹಲ್‍ಗಳಿಗೆ ನುಗ್ಗಿ ಕೈಚಳಕ ತೋರುತ್ತಿದ್ದ ಈಕೆಯ ಬಂಧನ ಪೊಲೀಸರಿಗೆ ಹಲವು ಪ್ರಕರಣಗಳಲ್ಲಿ ಪ್ರಮುಖ ಮಾಹಿತಿಯು ಸಿಕ್ಕಿದೆ.

Wedding Hall Theft Woman Arrest stealing case Shadi Mahals
Wedding Hall Theft Woman Arrest stealing case Shadi Mahals

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಹಾರಾಟ ನಿಗದಿಯಂತೆ ನಡೆಯುತ್ತಾ? ಕುತೂಹಲ ಮೂಡಿಸಿದ ಸಂಸದರ ಮಾತು!

ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಐಪಿಎಸ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಎ.ಜಿ. ಕಾರಿಯಪ್ಪ ಹಾಗೂ ರಮೇಶ್ ಕುಮಾರ್ ಎಸ್. ಮತ್ತು ಉಪವಿಭಾಗದ ಡಿವೈಎಸ್ಪಿ ಬಾಬು ಅಂಜನಪ್ಪ ಅವರ ಮಾರ್ಗದರ್ಶನದಲ್ಲಿ  ನಡೆದ ಕಾರ್ಯಾಚರಣೆಯಲ್ಲಿ ತುಂಗಾನಗರ ಠಾಣೆಯ ಇನ್ಸ್‌ಪೆಕ್ಟರ್ ಕೆ.ಟಿ. ಗುರುರಾಜ್ ಹಾಗೂ ಪಿಎಸ್ಐ ಗಾದಿಲಿಂಗಪ್ಪ ಗೌಡರ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡದಲ್ಲಿ ಸಿಬ್ಬಂದಿಗಳಾದ ಹೆಡ್ ಕಾನ್‌ಸ್ಟೇಬಲ್‌ಗಳಾದ ಕಿರಣ್ ಮೋರೆ, ಅರುಣ್ ಕುಮಾರ್, ಶೋಭಾರಾಣಿ ಮತ್ತು ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಹರೀಶ್, ರಂಗನಾಥ್, ತಮ್ಮಣ್ಣ ಜಂಬಗಿ ಅವರು ಪಾಲ್ಗೊಂಡಿದ್ದರು.

Wedding Hall Theft Woman Arrest stealing case Shadi Mahals
Wedding Hall Theft Woman Arrest stealing case Shadi Mahals

ಮತ್ತೆ ನಡೆಯಲಿದೆ ಶಿವಮೊಗ್ಗದ ಹುಣಸೋಡು ಸ್ಫೋಟದ ತನಿಖೆ? ಕಾರಣವೇನು ಗೊತ್ತಾ? JP EXCLUSIVE

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Wedding Hall Theft Woman Arrest stealing case Shadi Mahals ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾದಿಮಹಲ್‍ಗಳಲ್ಲಿ ಮದುವೆ ವೇಳೆ ಕಳ್ಳತನ ಮಾಡುತ್ತಿದ್ದ ಸೂಳೆಬೈಲು ನಿವಾಸಿ ರುಕ್ಸಾರ್ ಫಿರ್ದೋಸ್ ಬಂಧನ. 18 ಲಕ್ಷ ರೂ ಮೌಲ್ಯದ 120 ಗ್ರಾಂ ಬಂಗಾರ ವಶ.