ಶ್ರಮದ ದುಡಿಮೆಯ ಮಾತನಾಡಿದ ಆರಗ/ ವಿಜಯೇಂದ್ರ ರಾಜ್ಯಾಧ್ಯಕ್ಷ? / ಬಣ್ಣ ಹಚ್ಚಿದ ಮೇಲೆ ಎಂದ ಶ್ರೀಕಾಂತ್/ ₹5 ಕೋಟಿ ಟಿಕೆಟ್​ಗೆ ಚನ್ನಬಸಪ್ಪರ ಉತ್ತರ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 16, 2023 SHIVAMOGGA NEWS  

ಶ್ರಮದ ದುಡಿಮೆಯಿಂದ ವಿಮುಖ

ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಸುಲಭದಲ್ಲಿ ಹಣ ಮಾಡುವುದನ್ನೇ ಗುರಿಯನ್ನಾಗಿಸಿಕೊಂಡಿದ್ದಾರೆ.ಶ್ರಮದ ದುಡಿಮೆಯಿಂದ ವಿಮುಖರಾಗುತ್ತಿದ್ದಾರೆ ಅಂತಾ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯ ಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರದ ರಿಪ್ಪನ್​ಪೇಟೆ ಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ ಅವರನ್ನು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿಸಬೇಕು ಎಂದರು. 

ಚೈತ್ರ ಕುಂದಾಪುರದ ಬಂಧನ/ ಎಸ್​ಎನ್ ಚನ್ನಬಸಪ್ಪ ಪ್ರತಿಕ್ರಿಯೆ

ಚೈತ್ರ ಕುಂದಾಪುರ ಬಂಧನ ವಿಚಾರದ ಬಗ್ಗೆ ಮಾತನಾಡಿದ ಎಸ್​ಎನ್  ಚನ್ನಬಸಪ್ಪ, ನಡೆದಿದ್ದು ಸತ್ಯವೇ ಆದರೆ ಇಂತಹ ಘಟನೆ ನಡೆಯಬಾರದು, ಈ ಬಗ್ಗೆ ಸಮಗ್ರ ತನಿಖೆಯಾಗಲಿ ಸತ್ಯಾಂಶ ಹೊರ ಬರಲಿ ಎಂದರು. ಹಿಂದುತ್ವಕ್ಕೆ ಶಕ್ತಿ ಕೊಡ್ತಿದ್ದ ಹೆಣ್ಣುಮಗಳು, ತಪ್ಪು‌ ಮಾಡಿದ್ರೆ ಆಕೆಗೆ ಶಿಕ್ಷೆಯಾಗಲಿ ಎಂದರು. ಅಲ್ಲದೆ  5 ಕೋಟಿ‌ ಕೊಟ್ಟು ಟಿಕೆಟ್ ಪಡೆಯಲು ಮುಂದಾದ ವ್ಯಕ್ತಿ ಬಗ್ಗೆ ವಿಚಾರಣೆ ಆಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ಸರ್ವರ ಹಿತಕ್ಕಾಗಿ ರಾಜಕಾರಣ

ನನಗೆ ಪೌರ ಕಾರ್ಮಿಕರ ಒಡನಾಟ ಇದೆ. ಮತ್ತು ಅವರ ಕಷ್ಟದ ಅರಿವಿದೆ. ನನಗೆ ಯಾವುದೇ ಅಧಿಕಾರ ಇಲ್ಲದಿದ್ದರೂ ಬಡವರ ಸೇವೆ ಮಾಡುತ್ತಾ ಬಂದಿದ್ದೇನೆ. ರಾಜಕಾರಣ ತನ್ನ ಸ್ವಾರ್ಥಕ್ಕಾಗಿ ಮಾಡಬಾರದು. ಬಡವರ ಹಿತಕ್ಕಾಗಿ ರಾಜಕಾರಣ ಮಾಡಬೇಕು. ನಾನು ಸೋತಾಗ ಇನ್ನು ಮುಂದೆ ರಾಜಕಾರಣ ಮಾಡಬಾರದು ಎಂದು ತೀರ್ಮಾನಿಸಿದ್ದೆ. ಆದರೆ, ಬಣ್ಣ ಹಚ್ಚಿದ ಮೇಲೆ ಪಾತ್ರ ಮಾಡಲೇಬೇಕು. ಬಿಡಲು ಮನಸಾಗುವುದಿಲ್ಲ. ಬದಲಾವಣೆ ಬಯಸಿದ್ದೇನೆ. ಇನ್ನು 15 ದಿನದಲ್ಲಿ ಕಾಂಗ್ರೆಸ್ ಸೇರಲು ನಿಶ್ಚಯಿಸಿದ್ದೇನೆ ಎಂದು ಎಂ ಶ್ರೀಕಾಂತ್ ಹೇಳಿದ್ದಾರೆ 

ವರಿಷ್ಟರಿಗೆ ಬಿಟ್ಟ ವಿಚಾರ

ತಮಗೆ ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ಯಾವುದೇ ಸ್ಥಾನಮಾನ ನೀಡುವ ವಿಚಾರದ ಬಗ್ಗೆ ಮಾಹಿತಿಯಿಲ್ಲ. ಈ ವಿಚಾರ ಹೈಕಮಾಂಡ್ ನಾಯಕರಿಗೆಬಿಟ್ಟಿದ್ದು ಎಂದು ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಶಿಕಾರಿಪುರದಲ್ಲಿ ಮಾತನಾಡಿದ ಅವರು,  ಶಿಕಾರಿಪುರದ ಶಾಸಕನಾಗಿ ನನ್ನ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ.   ಸ್ಥಾನಮಾನ ನೀಡುವುದು ವರಿಷ್ಠರಿಗೆ ಬಿಟ್ಟದ್ದು ಎಂದಿದ್ದಾರೆ 


ಇನ್ನಷ್ಟು ಸುದ್ದಿಗಳು 

 


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor