ಮರಾಠಿಕ್ಯಾಂಪ್​ ಬಳಿಕ ಮಳಲಿಕೊಪ್ಪ ನಜ್ರು ಅರೆಸ್ಟ್! ಮನೆ ಹಿತ್ತಲಲ್ಲಿಯೇ ನಡೆಸಿದ್ದ ಗಾಂಜಾ ಕೃಷಿ! ಲಕ್ಷ ಮೌಲ್ಯದ ಮಾಲು ಸೀಜ್​!

This Article Written by / Malenadu Today / ಡಿಸೆಂಬರ್ 29, 2023

SHIVAMOGGA  |  Dec 29, 2023  |  ಮನೆ ಹಿತ್ತಲಲ್ಲಿ ಗಾಂಜಾ ಕೃಷಿ ಮಾಡ್ತಿದ್ದವನನ್ನ ತುಂಗಾನಗರ ಪೊಲೀಸ್ ಸ್ಟೇಷನ್ ಪೊಲೀಸರು ಬಂಧಿಸಿದ್ದಾರೆ. 

ಶಿವಮೊಗ್ಗದಲ್ಲಿ ಈ ಹಿಂದೇ ಎಸ್​ಪಿ ಲಕ್ಷ್ಮೀಪ್ರಸಾದ್​ ಜಿಲ್ಲೆಗೆ ಬರುತ್ತಿದ್ದ ಗಾಂಜಾ ಮಾಲನ್ನ ಲೋಡ್​ ಗಟ್ಟಲೇ ಸೀಜ್​ ಮಾಡಿದ್ದರು. ಅವರ ನಂತರ ಬಂದ ಎಸ್​ಪಿ ಮಿಥುನ್ ಕುಮಾರ್​ ಕೂಡ ಮಾದಕವಸ್ತುಗಳ ವಿಚಾರದಲ್ಲಿ ಜಿರೋ ಟಾಲರೆನ್ಸ್ ಎಂದಿದ್ದಾರೆ. ಈ ನಡುವೆ ಗಾಂಜಾ ಪ್ರಕರಣಗಳು ಕಡಿಮೆಯಾದರೂ ಇತ್ತೀಚೆಗೆ ಮಾದಕವಸ್ತುಗಳನ್ನ ಪೊಲೀಸರು ಜಪ್ತು ಮಾಡಿ ರೋಡ್​ ಸೈಡ್​ನಲ್ಲಿ ಮಾರಾಟ ಮಾಡುವ ಆರೋಪಿಗಳನ್ನ ಅರೆಸ್ಟ್ ಮಾಡುತ್ತಿದ್ದಾರೆ. ಈ ವಾರದಲ್ಲಿಯೇ ತುಂಗಾನಗರ ಪೊಲೀಸರು ಎರಡು ಕೇಸ್ ಹಿಡಿದಿದ್ದಾರೆ. 

READ: ಮನೆಯವರು ಸೇರಿಸಿದರೂ, ಊರವರ ಬಹಿಷ್ಕಾರ! ಪ್ರೀತಿಸಿ ಮದುವೆಯಾದವರಿಗೆ ಪೊಲೀಸರ ಕಾವಲು! ಏನಿದು ಸ್ಟೋರಿ!

ಮರಾಠಿಕ್ಯಾಂಪ್​ನ ಯುವಕನನ್ನ ಅರೆಸ್ಟ್​ ಮಾಡಿದ್ದ ತುಂಗಾನಗರ ಪೊಲೀಸ್ ಸ್ಟೇಷನ್ ಪೊಲೀಸರು ಇದೀಗ ಮನೆ ಹಿತ್ತಲಲ್ಲಿ ಗಾಂಜಾ ಬೆಳದಿದ್ದ ಆರೋಪಿಯನ್ನ ಮಾಲು ಸಮೇತ ಹಿಡಿದ್ದಿದ್ದಾರೆ.  ದಿನಾಂಕ  28-12-2023 ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿಕೊಪ್ಪ ಗ್ರಾಮದ ವಾಸಿ ನಜರತ್ ನು ತನ್ನ ಮನೆಯ ಹಿಂಬದಿ ಜಾಗದಲ್ಲಿ ಮಾದಕ ವಸ್ತು ಗಾಂಜಾ ಗಿಡಗಳನ್ನ ಬೆಳಸ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. 

ಈ ಸಂಬಂಧ  ತುಂಗಾ ನಗರ ಪೊಲೀಸ್ ಠಾಣೆ  ಸಿಬ್ಬಂದಿಗಳ ತಂಡವು ರೇಡ್ ನಡೆಸಿದೆ. ಅಲ್ಲದೆ ನಜರತ್ @ ನಜ್ರು ವನ್ನ ಅರೆಸ್ಟ್ ಮಾಡಿದ್ದು,  ಅಂದಾಜು ಮೌಲ್ಯ 1,20,00/- ರೂ ಗಳ 12 ಕೆಜಿ 350 ಗ್ರಾಂ ತೂಕದ ಹಸಿ ಗಾಂಜಾ ಗಿಡವನ್ನು ಜಪ್ತು ಮಾಡಿದ್ದಾರೆ.  ಮಳಲಿಕೊಪ್ಪ ಗ್ರಾಮದ ನಿವಾಸಿ ನಜ್ರು ವಿರುದ್ಧ ಕಲಂ 8(ಬಿ), 20 (ಎ)(i), 25 NDPS ಕಾಯ್ದೆ ಅಡಿ ಕೇಸ್ ದಾಖಲಾಗಿದೆ. 

Tunganagar Police Station

ಮುಂದಿನ ಸುದ್ದಿ ಒದಿ

Leave a Comment