Tree fell on bus | ಬಸ್​ ಮೇಲೆಯೇ ಬಿದ್ದ ಮರದ ಕೊಂಬೆ! ಒಂದೇ ಕ್ಷಣದಲ್ಲಿ!!

Tree fell on bus | ಶಿವಮೊಗ್ಗ ಜಿಲ್ಲೆಯಲ್ಲಿ  ದಿಢೀರ್​ ಎಂಬಂತೆ ಮಳೆ ಗಾಳಿ ಬರುತ್ತಿದೆ. ಇದರ ನಡುವೆ ಗಾಳಿಗೆ ಲಡ್ಡಾದ ಮರದ ಕೊಂಬೆಗಳು ರಸ್ತೆ ಮೇಲೆಯೇ ಬೀಳುತ್ತಿದ್ದು, ಇದರಿಂದ ವಾಹನ ಸವಾರರಿಗೆ ಆತಂಕದಲ್ಲಿ ಓಡಾಡುವ ಸ್ಥಿತಿಯಿದೆ. ಇನ್ನೂ ಮರದ ಕೊಂಬೆಯಿಂದ ಅನಾಹುತವಾದ ಬಗ್ಗೆ ಜಿಲ್ಲೆಯ ಹೊಸನಗರ ತಾಲ್ಲೂಕುನಲ್ಲಿ ವರದಿಯಾಗಿದೆ. 

ಇಲ್ಲಿನ ರಿಪ್ಪನ್​​ ಪೇಟೆಯಲ್ಲಿ ನಿನ್ನೆ ಮಂಗಳವಾರ ಸಂಜೆ ಹೊತ್ತಿಗೆ ಬಸ್​ವೊಂದರ ಮೇಳೆ ಬೃಹತ್​ ಮರದ ರಂಬೆ ಬಿದ್ದು ವಾಹನ ಜಖಂ ಆಗಿದೆ. ಪಟ್ಟಣದ ಸಾಗರ ರಸ್ತೆಯ ಹೈಸ್ಕೂಲ್ ಮುಂಭಾಗದಲ್ಲಿ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಬಸ್‌ ಹಾಗೂ ಸ್ಕೂಟಿ ಜಖಂಗೊಂಡಿದೆ. 

Tree fell on bus footage : ತಪ್ಪಿದ ಅನಾಹುತ

ನಿನ್ನೆ ದಿನ ಸಂಜೆ ಆರು ಗಂಟೆ ಸುಮಾರಿಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಖಾಸಗಿ ಬಸ್ ಬಂದಿತ್ತು. ಬಸ್​ ಸ್ಟ್ಯಾಂಡ್​ ಬಳಿಯಲ್ಲಿ ಪ್ರಯಾಣಿಕರಿದ್ದರು. ಇದೇ ವೆಳೆ ಕೊಂಬೆ ಬಿದ್ದಿದೆ. ಬಸ್​ನ ಒಂದು ಭಾಗ ಕೊಂಬೆ ಬಿದ್ದು ಜಖಂ ಆಗಿದೆ. ಘಟನೆಯಲ್ಲಿ ತಾಯಿ ಮಗುವಿಗೆ ಸಣ್ಣ-ಪುಟ್ಟ ಗಾಯವಾಗಿದೆ. ಉಳಿದ ಪ್ರಯಾಣಿಕರು ಬಚಾವ್ ಆಗಿದ್ದಾರೆ. 

ಇನ್ನೂ ಘಟನೆಯನ್ನು ಕಣ್ಣಾರೆ ನೋಡಿದ ಸ್ಥಳೀಯರು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದರು. ಆನಂತರ ಕೊಂಬೆ ಕಡಿದು ವಾಹನಗಳನ್ನು ಸರಿಸಿ, ರಸ್ತೆಯಲ್ಲಿ ವೆಹಿಕಲ್​ಗಳ ಓಡಾಟಕ್ಕೆ ಅನುವು ಮಾಡಿಕೊಟ್ಟರು.  

 

Leave a Comment