Kashmir Attack : ಕಾಶ್ಮೀರದಲ್ಲಿ ಶಿವಮೊಗ್ಗ ಮಂಜುನಾಥ್ ಸಾವು! ಕಣ್ಣೀರು ಬರಿಸುತ್ತೆ, ಅವರ ಈ ವಿಚಾರ!

Kashmir Attack | ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಶಿವಮೊಗ್ಗದ ವಿಜಯನಗರದ ಮಂಜುನಾಥ್​ ಎಂಬವರು ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಶಿವಮೊಗ್ಗಕ್ಕೆ ತರುವ ಸಲುವಾಗಿ ಪ್ರಯತ್ನಗಳು ನಡೆದಿವೆ. ಇತ್ತ ರಾಜಕೀಯ ಮುಖಂಡರು ಮಂಜುನಾಥ್​ರವರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ. 

ತಾಯಿಗೆ ತಿಳಿಯದ ವಿಚಾರ

ನಿನ್ನೆ ಸಂಜೆ ಮಂಜುನಾಥ್​ ರವರ ಸಾವಿನ ವಿಚಾರ ಶಿವಮೊಗ್ಗದಲ್ಲಿರುವ ಮಂಜುನಾಥ್​ರವರ ಕುಟುಂಬಸ್ಥರಿಗೆ ತಿಳಿಯಿತು. ಆದರೆ ಮಂಜುನಾಥ್​ರವರ ತಾಯಿಗೆ ಈ ಬಗ್ಗೆ ವಿಷಯ ತಿಳಿಸಿರಲಿಲ್ಲ. ಹೀಗಾಗಿ ತಮ್ಮ ಮಗ ಸೊಸೆ ಮೊಮ್ಮಗ ಸುರಕ್ಷಿತವಾಗಿದ್ದಾರಾ? ಎಂದು ಪ್ರಶ್ನಿಸುತ್ತಿದ್ದರು. ಸಂಬಂಧಿಕರು , ನೆರೆಹೊರೆಯವರು ತಾಯಿಯ ಪ್ರಶ್ನೆಯನ್ನು ಕೇಳಿ, ಕಣ್ಣೀರು ತುಂಬಿಕೊಂಡರು. 

Kashmir Attack |ಮಗನ ರಿಸಲ್ಟ್​ ನೋಡಿ ಟೂರ್​ಗೆ ಹೊರಟಿದ್ದರು

ಮಂಜುನಾಥ್​ರವರ ಮಗ ಅಭಿಜಯ ಕಾಮರ್ಸ್​ 98 ಪರ್ಸೆಂಟ್​ ತೆಗೆದುಕೊಂಡು ಸೆಕೆಂಡ್​ ಪಿಯುಸಿ ಪಾಸ್ ಆಗಿದ್ದರು. ಈ ಖುಷಿಯ ಸಾಧನೆಯನ್ನು ಸಂಭ್ರಮಿಸುವ ಸಲುವಾಗಿ ಮಂಜುನಾಥ್ ಕಾಶ್ಮೀರಕ್ಕೆ ತೆರಳಿದ್ದರು. ಏಪ್ರಿಲ್​ 24 ಕ್ಕೆ ಇವರು ವಾಪಸ್ ಆಗಬೇಕಿತ್ತು.  ಅಷ್ಟರಲ್ಲಿ ಅಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮಂಜುನಾಥ್​ರವರು ಸಾವನ್ನಪ್ಪಿದ್ದಾರೆ. 

 

ರಿಯಲ್​ ಎಸ್ಟೇಟ್​ ಉದ್ಯಮಿ

ಮಂಜುನಾಥ್​ ರಾವ್​ ರವರು ರಿಯಲ್ ಎಸ್ಟೇಟ್ ಉದ್ಯಮಿ. ಇವರ ಪತ್ನಿ ಪಲ್ಲವಿ ಮ್ಯಾಮ್ಕೋಸ್‌ನ ಬೀರೂರು ಶಾಖೆಯಲ್ಲಿ ವ್ಯವಸ್ಥಾಪಕಿ ಆಗಿದ್ದಾರೆ.  ತಂದೆ ಮಹಾಬಲ ರಾವ್‌ ನಿಧನರಾಗಿದ್ದು, ತಾಯಿ ಸುಮತಿ ಹಾಗೂ ಕುಟುಂಬದೊಂದಿಗೆ ಮಂಜುನಾಥ್​ ವಾಸವಿದ್ದರು.  

 

Kashmir Attack |ಬೇಲ್​ ಪುರಿ ತಿನ್ನುತ್ತಿದ್ದಾಗ ದಾಳಿ

ಕಾಶ್ಮೀರದ ಪಹಲ್ಗಾಮ್​ನಲ್ಲಿ ಮಂಜುನಾಥ್​ರವರ ಕುಟುಂಬ ಬೇಲ್​ಪುರಿ ತಿನ್ನುತ್ತಿದ್ದರು. ಈ ವೇಳೆ ಗುಂಡಿನ ಮಳೆ ಸುರಿಸಿದ್ದಾರೆ ಉಗ್ರರು. ನಡೆದ ಘಟನೆ ಬನ್ನೆ ಪಲ್ಲವಿಯವರು ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಅವರ ಜೊತೆಗೆ ಸಾಗರದ ಪ್ರವಾಸಿಗರು ಇರುವುದಾಗಿ ತಿಳಿದು ಬಂದಿದೆ.ಇನ್ನೊಂದೆಡೆ ಬೆಂಗಳೂರಿಗೆ ಪ್ರವಾಸಿಗರ ತಂಡವೊಂದು ಐಸ್​ ಕ್ರಿಮ್​ ತಿನ್ನುವ ಸಲುವಾಗಿ ದಾರಿಮಧ್ಯೆ ನಿಂತ ಕಾರಣಕ್ಕೆ, ಉಗ್ರರ ದಾಳಿಯಿಂದ ಬಚಾವ್ ಆಗಿದ್ದಾರೆ.

Leave a Comment