ಮೂರು ದಿನ ಶಿವಮೊಗ್ಗ-ಭದ್ರಾವತಿ ನಡುವೆ ಸಂಚಾರ ಬಂದ್! ಡಿಸಿ ಆದೇಶ! ಯಾಕೆ? ಪರ್ಯಾಯ ಮಾರ್ಗ ಯಾವುದು? ಡಿಟೇಲ್ಸ್ ಓದಿ!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  | SHIMOGA RAIL |   Dec 5, 2023 |   ರೈಲ್ವೆ ಕ್ರಾಸಿಂಗ್​ನಲ್ಲಿ ಪರಿಶೀಲನೆ ನಡೆಸುವ ಸಂಬಂಧ ಶಿವಮೊಗ್ಗ-ಭದ್ರಾವತಿ ಸಂಚಾರ ಮಾರ್ಗ ಮೂರು ದಿನ ಬಂದ್ ಆಗಲಿದೆ. ಆ ಬಗೆಗಿನ ಸಂಪೂರ್ಣ ವಿವರ ಇಲ್ಲಿದೆ 

ಶಿವಮೊಗ್ಗ-ಭದ್ರಾವತಿ 

ಶಿವಮೊಗ್ಗ-ಭದ್ರಾವತಿ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ:34 (ಕಿ.ಮೀ.47/400- 500)ನ್ನು ತಾಂತ್ರಿಕವಾಗಿ ಪರಿಶೀಲನೆ ಮಾಡುವುದಕ್ಕಾಗಿ ಮೂರು ದಿನಗಳ ಕಾಲ ಬಂದ್ ಮಾಡಲಾಗುತ್ತಿದೆ. ಈ  ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ತಾಂತ್ರಿಕವಾಗಿ ಪರಿಶೀಲನೆ ಮಾಡುವುದಕ್ಕಾಗಿ ಡಿ.5 ರಿಂದ ಡಿ.7 ರವರೆಗೆ  ಗೇಟ್ ಮುಚ್ಚಿ ಪರ್ಯಾಯ ಮಾರ್ಗ ಕಲ್ಪಿಸುವಂತೆ ರೈಲ್ವೆ ಇಲಾಖೆ ಕೋರಿತ್ತು.

ರೈಲ್ವೆ ಇಲಾಖೆ 

ಶಿವಮೊಗ್ಗದಿಂದ ಬಿಳಕಿ ಕ್ರಾಸ್ ಮುಖಾಂತರ ಕೃಷ್ಣಪ್ಪ ವೃತ್ತ ತಲುಪಿ ಭದ್ರಾವತಿಗೆ ಬರುವ ರಸ್ತೆಯಲ್ಲಿ ರೈಲ್ವೆ ಕ್ರಾಸನ್ನು ಮುಚ್ಚಿ ಪರ್ಯಾಯ ಮಾರ್ಗವಾಗಿ ಶಿವಮೊಗ್ಗದಿಂದ ಭದ್ರಾವತಿಗೆ ಹಾಗೂ ಭದ್ರಾವತಿಯಿಂದ ಶಿವಮೊಗ್ಗಕ್ಕೆ ಸಂಚರಿಸಲು ಅನಕೂಲ ಮಾಡಿಕೊಡಲಾಗಿದೆ. ಈ ಸಂಬಂಧ  ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಈ ಮಾರ್ಗಗಳನ್ನ ಉಲ್ಲೇಖಿಸಿ ಎರಡು ದಿನ ರೈಲ್ವೆ ಕ್ರಾಸಿಂಗ್ ತಾತ್ಕಾಲಿಕ ಬಙದ್ ಗೆ ಆದೇಶಿಸಿದ್ದಾರೆ.

ಶಿವಮೊಗ್ಗ ಭದ್ರಾವತಿ ಪರ್ಯಾಯ ಮಾರ್ಗ

ಕಾರು, ಟ್ಯಾಕ್ಸಿ ಹಾಗೂ ಇತರೆ ನಾಲ್ಕು ಚಕ್ರದ ಲಘು ವಾಹನಗಳ ಸಂಚಾರಕ್ಕೆ ಬಿಳಕಿ ಕ್ರಾಸ್ -ಲಕ್ಷ್ಮೀಪುರ-ಹೆಬ್ಬಂಡಿ -ವಿಧ್ಯಾಧಿರಾಜ ಕಲ್ಯಾಣ ಮಂಟಪ್ಪ -ಐಟಿಐ ಮಾರ್ಗವಾಗಿ ಭದ್ರಾವತಿ ಬಸ್‌ ನಿಲ್ದಾಣ ಹಾಗೂ ಕೆಎಸ್ ಆರ್ ಟಿ ಸಿ ಬಸ್ ಗಳು, ಲಾರಿ,ಟ್ರಕ್, ವಾಹನ ಹಾಗೂ ಭಾರಿ ವಾಹನಗಳು ಅಂಡರ್ ಬ್ರಿಡ್ಜ್ – ಉಂಬ್ಳೆಬೈಲ್ ರಸ್ತೆ-ಕೃಷ್ಣಪ್ಪ ಸರ್ಕಲ್ ತಲುಪಿ ರಾಷ್ಟ್ರೀಯ ಹೆದ್ದಾರಿ 69ರ ಮೂಲಕ ಸಂಚರಿಸಬಹುದಾಗಿದೆ 

ಎಲ್ಲಿಂದ ಎಲ್ಲಿಯವರೆಗೂ!

ದಿನಾಂಕ: 5.12.2023 ರ ಬೆಳಗ್ಗೆ 8-00 ಗಂಟೆಯಿಂದ ದಿನಾಂಕ: 7.12.20230 ಸಂಜೆ 6-00 ಗಂಟೆಯವರೆಗೆ

ವಾಹನ ಸವಾರರಿಗೆ ಮಾಹಿತಿ

ಶಿವಮೊಗ್ಗದಿಂದ ಭದ್ರಾವತಿಗೆ ಹಾಗೂ ಭದ್ರಾವತಿಯಿಂದ ಶಿವಮೊಗ್ಗಕ್ಕೆ ಸಂಚರಿಸುವ ಕಾರು, ಟ್ಯಾಕ್ಸಿ ಹಾಗೂ ಇತರೆ ನಾಲ್ಕು ಚಕ್ರದ ಲಘು ವಾಹನಗಳ ಸಂಚಾರಕ್ಕೆ ಬಿಳಕಿ ಕ್ರಾಸ್ -ಲಕ್ಷ್ಮೀಪುರ- ಹೆಬ್ಬಂಡಿ -ವಿಧ್ಯಾಧಿರಾಜ ಕಲ್ಯಾಣ ಮಂಟಪ್ಪ -ಐಟಿಐ ಮಾರ್ಗವಾಗಿ ಭದ್ರಾವತಿ ಬಸ್ ನಿಲ್ದಾಣ ತಲುಪಬಹುದಾಗಿದೆ

ಕೆಎಸ್ ಆರ್ ಟಿ ಸಿ ಬಸ್ ಗಳು . ಲಾರಿ ಟ್ರಕ್, ಗೂಡ್ಸ್ ವಾಹನ ಹಾಗೂ ಭಾರಿ ವಾಹನಗಳು ಅಂಡರ್ ಬ್ರಿಡ್ಜ್ – ಉಂಬ್ಳೆಬೈಲ್ ರಸ್ತೆ-ಕೃಷ್ಣಪ್ಪ ಸರ್ಕಲ್ ತಲುಪಿ ರಾಷ್ಟ್ರೀಯ ಹೆದ್ದಾರಿ 69ರ ಮೂಲಕ ಸಂಚರಿಸಬಹುದಾಗಿದೆ 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor