ಬಹತೇಕ ಟಿಕೇಟ್​ ಸೋಲ್ಡ್​ ಔಟ್​ : ಶಿವಮೊಗ್ಗದಲ್ಲಿ ಹೇಗಿದೆ ಟಾಕ್ಸಿಕ್​ ಹವಾ, ಯಾವ ಯಾವ ಥೇಟರ್​ನಲ್ಲಿ ರಿಲೀಸ್ ಆಗ್ತಿದೆ ಸಿನಿಮಾ ? 

ಹಂಚಿಕೊಳ್ಳಿ
WhatsApp Facebook X Telegram
Toxic Movie Shivamogga
Toxic Movie Shivamogga

ಶಿವಮೊಗ್ಗ: ಯಶ್ ನಟಿಸಿ ನಿರ್ಮಾಣ ಮಾಡಿರುವ ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಇನ್ನು ಕೇವಲ 5 ದಿನಗಳಷ್ಟೇ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದು, ಇದೀಗ ಬುಕ್ ಮೈ ಶೋನಲ್ಲಿ ಚಿತ್ರದ ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಬುಕ್ಕಿಂಗ್ ಓಪನ್ ಆಗುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದು ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳುತ್ತಿದ್ದಾರೆ. ಶಿವಮೊಗ್ಗದಲ್ಲಿ ಟಾಕ್ಸಿಕ್ ಹವಾ ಹೇಗಿದೆ, ಯಾವ ಯಾವ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ ಹಾಗೂ ಟಿಕೆಟ್ ದರ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಟಾಕ್ಸಿಕ್ ಚಿತ್ರ ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ವಿಶ್ವದಾದ್ಯಂತ ಒಟ್ಟು 12 ಸಾವಿರ ಸ್ಕ್ರೀನ್‌ಗಳಲ್ಲಿ ಆಗಸ್ಟ್ 26 ರಂದು ಬಿಡುಗಡೆಯಾಗುತ್ತಿದೆ. ಅದರಂತೆ ಶಿವಮೊಗ್ಗದ ಭಾರತ್ ಸಿನಿಮಾಸ್ ಹಾಗೂ ಮಲ್ಲಿಕಾರ್ಜುನ ಥಿಯೇಟರ್‌ಗಳಲ್ಲಿಯೂ ಟಾಕ್ಸಿಕ್ ಸಿನಿಮಾ ತೆರೆಕಾಣಲಿದೆ. ಇಂದು ಎರಡೂ ಚಿತ್ರಮಂದಿರಗಳಲ್ಲಿಯೂ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ಹೆಚ್ಚಿನ ಶೋಗಳು ಬಹುತೇಕ ಸೋಲ್ಡ್ ಔಟ್ ಆಗಿವೆ. ಯಾವ ಯಾವ ಥಿಯೇಟರ್‌ಗಳಲ್ಲಿ ಎಷ್ಟು ಶೋಗಳಿವೆ ಎಂದು ನೋಡುವುದಾದರೆ

ಭಾರತ್ ಸಿನಿಮಾಸ್, ಶಿವಮೊಗ್ಗ: ಈ ಚಿತ್ರಮಂದಿರದಲ್ಲಿ ದಿನಪೂರ್ತಿ ಒಟ್ಟು 8 ಪ್ರದರ್ಶನಗಳು ಲಭ್ಯವಿವೆ. ದಿನದ ಆರಂಭದಲ್ಲಿ ಬೆಳಗಿನ ಜಾವ 06:30 ಕ್ಕೆ ಎರಡು ಪ್ರತ್ಯೇಕ ಶೋಗಳು ಹಾಗೂ 06:45 ಕ್ಕೆ ಇನ್ನೊಂದು ಶೋ ಪ್ರಾರಂಭವಾಗಲಿವೆ. ತದನಂತರ ಬೆಳಗಿನ ಅವಧಿಯಲ್ಲಿ 10:15 ಮತ್ತು 10:30 ಕ್ಕೆ ಪ್ರದರ್ಶನಗಳಿವೆ. ಮಧ್ಯಾಹ್ನದ ಸಮಯಕ್ಕೆ 02:30 ರ ಶೋ ಲಭ್ಯವಿದ್ದು, ಸಂಜೆ 06:30 ಕ್ಕೆ ಮತ್ತು ದಿನದ ಕೊನೆಯ ಪ್ರದರ್ಶನವಾಗಿ ರಾತ್ರಿ 10:15 ಕ್ಕೆ ಶೋಗಳನ್ನು ನಿಗದಿಪಡಿಸಲಾಗಿದೆ. ಅದರಲ್ಲಿ 02:30, 06:30 ಹಾಗೂ 10:15 ರ ಪ್ರದರ್ಶನಗಳು ಸೋಲ್ಡ್ ಔಟ್ ಆಗಿದ್ದು, ಇನ್ನುಳಿದವು ಬಹುತೇಕ ಭರ್ತಿಯಾಗಿವೆ. ಇನ್ನು ಇಲ್ಲಿ ಟಿಕೆಟ್ ದರಗಳನ್ನು ನೋಡುವುದಾದರೆ, ಕೆಲವೊಂದು ಶೋಗಳಿಗೆ 600 ರೂಪಾಯಿ ಹಾಗೂ ಮತ್ತೆ ಕೆಲವು ಶೋಗಳಿಗೆ 400 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ.

ಮಲ್ಲಿಕಾರ್ಜುನ ಥಿಯೇಟರ್, ಶಿವಮೊಗ್ಗ: ಈ ಚಿತ್ರಮಂದಿರದಲ್ಲಿ ದಿನಕ್ಕೆ ಒಟ್ಟು 4 ಪ್ರದರ್ಶನಗಳನ್ನು ನೀಡಲಾಗಿದೆ. ಇಲ್ಲಿನ ಮೊದಲ ಪ್ರದರ್ಶನ ಬೆಳಿಗ್ಗೆ 10:15 ಕ್ಕೆ ಪ್ರಾರಂಭವಾಗುತ್ತದೆ. ನಂತರ ಮಧ್ಯಾಹ್ನ 01:45 ಕ್ಕೆ ಎರಡನೇ ಶೋ, ಸಂಜೆ 05:45 ಕ್ಕೆ ಮೂರನೇ ಶೋ ಹಾಗೂ ರಾತ್ರಿ 09:15 ಕ್ಕೆ ಕೊನೆಯ ಪ್ರದರ್ಶನವಿರುತ್ತದೆ. ಇಲ್ಲಿಯೂ ಸಹ ಎಲ್ಲಾ ಶೋಗಳು ಬಹುತೇಕ ಭರ್ತಿಯಾಗಿವೆ. ಈ ಥಿಯೇಟರ್‌ನಲ್ಲಿ ಬಾಲ್ಕನಿ ಟಿಕೆಟ್‌ಗೆ 250 ರೂಪಾಯಿ ಹಾಗೂ ಫಸ್ಟ್ ಕ್ಲಾಸ್ ಟಿಕೆಟ್‌ಗೆ 200 ರೂಪಾಯಿ ನಿಗದಿಪಡಿಸಲಾಗಿದೆ.

ಹೀಗೆ ಶಿವಮೊಗ್ಗದಲ್ಲಿ ಟಾಕ್ಸಿಕ್ ಹವಾ ಜೋರಾಗಿದ್ದು, ಟಿಕೆಟ್ ಬುಕ್ ಆಗುತ್ತಿರುವ ವೇಗವನ್ನು ನೋಡಿದರೆ ಚಿತ್ರವು ವಿಶ್ವದಾದ್ಯಂತ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor