ಸಂಕಷ್ಟ ಚತುರ್ಥಿಯ ಶುಭ ಸಂಕಲ್ಪ!ಸೋಮವಾರದ ಶುಭ ಯೋಗ! ಇವತ್ತಿನ ಪಂಚಾಗ ಮತ್ತು ದಿನಭವಿಷ್ಯದ ವಿಶೇಷ

ajjimane ganesh

Today Panchanga and Horoscope December 08  ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ವಿಶ್ವಾವಸು ನಾಮ ಸಂವತ್ಸರದ, ದಕ್ಷಿಣಾಯನ ಹೇಮಂತ ಋತುವಿನ ಮಾರ್ಗಶಿರ ಮಾಸದ ಈ ದಿನವು ಸಂಕಷ್ಟಹರ ಚತುರ್ಥಿಯ ವಿಶೇಷ ದಿನ. 

ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ:ಮತ್ತೆ ಸದ್ದು ಮಾಡ್ತಿದೆ ಅಡಿಕೆ ಧಾರಣೆ! ಎಷ್ಟಿದೆ ಅಡಕೆ ದರ?

ಹಿಂದೂ ಪಂಚಾಂಗದ ಪ್ರಕಾರ ಶಾಲಿವಾಹನ ಶಕೆ 1947ರ ವಿಶ್ವಾವಸು ಸಂವತ್ಸರದ ಮಾರ್ಗಶಿರ ಮಾಸದ ದಿನವಾದ ಇಂದು ಸೋಮವಾರ, ರಾತ್ರಿ 09:33ರವರೆಗೆ ಚತುರ್ಥಿ ತಿಥಿ ಇರಲಿದೆ.ರಾಹುಕಾಲವು ಬೆಳಿಗ್ಗೆ 07:30 ರಿಂದ 09:00 ರವರೆಗೆ ಇರಲಿದ್ದು, ಗುಳಿಕ ಕಾಲ ಮಧ್ಯಾಹ್ನ 01:30 ರಿಂದ 03:00 ರವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ಇರಲಿದೆ. ಶುಭ ಸಮಯವು ರಾತ್ರಿ 08:48 ರಿಂದ 10:19 ರವರೆಗೆ ಇದೆ.

ಭದ್ರಾವತಿಯಲ್ಲಿ ಬಸ್ ಡಿಕ್ಕಿಗೆ ಬೈಕ್ ಸವಾರ ಸ್ಥಳದಲ್ಲೇ ಸಾವು! ಅಪಘಾತ, ಗಲಾಟೆ, ಅಳಿಯನ ಕಿರಿಕಿರಿ! ಇವತ್ತಿನ ಶಾರ್ಟ್ ನ್ಯೂಸ್​

ಮೇಷ : ಸವಾಲಿನ ದಿನವಾಗಿದ್ದು, ಹೊಸದಾಗಿ ಸಾಲ ಆಗುವ ಸಾಧ್ಯತೆ. ದೂರ ಪ್ರಯಾಣ ದಿನದ ಕೆಲಸ ಆಯಾಸ ತರಲಿದೆ , ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆ, ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಒತ್ತಡ, ವಹಿವಾಟಲ್ಲಿ ಸಾಮಾನ್ಯದಿನ.

Today Panchanga and Horoscope December 08

ವೃಷಭ :  ಸಕಾರಾತ್ಮಕ ದಿನ. ಹೊಸ ಕೆಲಸ  ಹಮ್ಮಿಕೊಳ್ಳಲು ಇದು ಸೂಕ್ತ ಸಮಯ. ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ, ವ್ಯಾಪಾರದಲ್ಲಿ ಉತ್ತಮ ಲಾಭ, ಉದ್ಯೋಗದಲ್ಲಿ ಹೊಸ ಅವಕಾಶ ಹುಡುಕಿಕೊಂಡು ಬರಲಿವೆ.

ಮಿಥುನ: ಆಕಸ್ಮಿಕ ಪ್ರಯಾಣ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಅಡೆತಡೆ, ಮನೆಯಲ್ಲಿ ಮತ್ತು ಹೊರಗೆ ತಾಳ್ಮೆಯಿರಲಿ. ಬಂಧು-ಮಿತ್ರರೊಂದಿಗೆ ವೈಮನಸ್ಯ. ಉದ್ಯೋಗದಲ್ಲಿ ಸ್ಥಾನಪಲ್ಲಟ ,ಹಠಾತ್ ಬದಲಾವಣೆ, ವ್ಯವಹಾರದಲ್ಲಿ ಸಾಮಾನ್ಯದಿನ.

Today Panchanga and Horoscope December 08
Today Panchanga and Horoscope December 08

ಹೆದರಿ ಓಡಿದ್ದಾತನ ಬೆನ್ನಟ್ಟಿದ್ದ ಖಾಕಿ ಸಿಕ್ತು ಭರ್ಜರಿ ಬೇಟೆ! ಸಾಗರ,ಸೊರಬ, ಕಾರ್ಗಲ್ ದೇಗುಲದಲ್ಲಿ ಕಳ್ಳತನದ ರಹಸ್ಯ!

ಕರ್ಕಾಟಕ : ಹೊಸ ವಿಷಯ ಕಲಿಯಲು ಆಸಕ್ತಿ ತೋರುತ್ತೀರಿ. ಭಿನ್ನಾಭಿಪ್ರಾಯ ದೂರವಾಗಲಿವೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆ ಮತ್ತು ದೇವಸ್ಥಾನಗಳಿಗೆ ಭೇಟಿ. ಬೆಲೆಬಾಳುವ ವಸ್ತುಗಳ ಸಂಗ್ರಹಣೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಲಭಿಸಲಿದೆ.

ಸಿಂಹ : ಆದಾಯಕ್ಕಿಂತ ಖರ್ಚು ಅಧಿಕವಾಗುವ ಸಾಧ್ಯತೆ ಇದೆ, ಸಾಲ ಮಾಡಬೇಕಾದ ಅನಿವಾರ್ಯತೆ. ಅನಗತ್ಯ ವಿವಾದ , ಮನಸ್ಸಿಗೆ ಕಿರಿಕಿರಿ. ಹಿತೈಷಿಗಳೊಂದಿಗೆ ಜಗಳ. ವ್ಯಾಪಾರದಲ್ಲಿ ಲಾಭ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕೆಲಸದ ಒತ್ತಡ

ಕನ್ಯಾ : ನಿರುದ್ಯೋಗಿಗಳಿಗೆ ಇವತ್ತು ಶುಭದಿನ. ಹಳೆಯ ಗೆಳೆಯರ ಭೇಟಿ. ದೀರ್ಘಕಾಲದಿಂದ ಕಾಡುತ್ತಿದ್ದ ಸಮಸ್ಯ ಇಂದು ಬಗೆಹರಿಯಲಿದೆ. ವ್ಯಾಪಾರವು ಚೇತರಿಕೆ ಕಾಣಲಿದ್ದು, ಉದ್ಯೋಗಿಗಳಿಗೆ ಹೊಸ ವಿಚಾರ ತಿಳಿಯಲಿದೆ. 

Today Panchanga and Horoscope December 08
Today Panchanga and Horoscope December 08

ತುಲಾ: ಅತ್ಯಂತ ಉತ್ಸಾಹದಿಂದ ಕೆಲಸದಲ್ಲಿ ತೊಡಗುವಿರಿ. ಹಣಕಾಸಿನ ವ್ಯವಹಾರ ನಿರೀಕ್ಷೆಗಿಂತ ಉತ್ತಮವಾಗಿರಲಿವೆ. ಹೊಸ ವ್ಯಕ್ತಿಗಳ ಪರಿಚಯ. ವ್ಯಾಪಾರ ಸುಗಮವಾಗಿ ಸಾಗಲಿದೆ, ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗಲಿದೆ.

ವೃಶ್ಚಿಕ :  ಆತಂಕಕಾರಿ  ಎನಿಸಬಹುದು ದಿನ, ಕೆಲಸಗಳಲ್ಲಿ ಹಠಾತ್ ಅಡೆತಡೆ. ಸಂಬಂಧಿಕರೊಂದಿಗೆ ವಾಗ್ವಾದ, ಕೌಟುಂಬಿಕ ಸಮಸ್ಯೆ ಕಾಡಬಹುದು. ವ್ಯಾಪಾರ ವಹಿವಾಟಿನಲ್ಲಿ ಏರಿಳಿತ ಮತ್ತು ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆ ಭೀತಿ.

ನಾಯಕನಹಟ್ಟಿ ದೇಗುಲದಲ್ಲಿ ಕಳೆದಿದ್ದನ್ನ ಭಕ್ತರೇ ಹುಡುಕಿದರು! ಸಾಗರ ನಿವಾಸಿಯ 40 ಗ್ರಾಮ್​ ಚಿನ್ನದ ಕಥೆಯಿದು!

ಧನು : ಆರ್ಥಿಕವಾಗಿ ಇಂದು ಕಷ್ಟದ ಪರಿಸ್ಥಿತಿ. ಕೆಲಸ ಕಾರ್ಯ ಅಂದುಕೊಂಡಂತೆ ನಡೆಯದೆ ವಿಳಂಬವಾಗಲಿವೆ. ವಾಹನ ಚಾಲನೆ ಮಾಡುವಾಗ ಮತ್ತು ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ವ್ಯಾಪಾರ ವಿಸ್ತರಣೆ ಮತ್ತು ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಬದಲಾವಣೆ.

ಮಕರ: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಲಾಭ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ಹೊಸ ಸ್ನೇಹ ಸಂಬಂಧ ಬೆಳೆಯಲಿವೆ. ಹೊಸ ವ್ಯಾಪಾರೋದ್ದೇಶದ ಚಿಂತನೆ ಯಶಸ್ಸು ಕಾಣಲಿದೆ, ಉದ್ಯೋಗಿಗಳಿಗೆ ಉತ್ತಮ ಗೌರವ ಸಿಗಲಿದೆ.

Today Panchanga and Horoscope December 08
Today Panchanga and Horoscope December 08

ಕುಂಭ :  ಹೊಸ ಕೆಲಸ ಪ್ರಾರಂಭಿಸಲಿದ್ದೀರಿ. ಹತ್ತಿರದ ಸಂಬಂಧಿಗಳೊಂದಿಗೆ ಇದ್ದ ಮುನಿಸು ದೂರವಾಗಲಿದೆ. ದೂರದ ಊರುಗಳಿಂದ ಶುಭ ಸಮಾಚಾರ ಕೇಳಿಬರಲಿದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ, ಉದ್ಯೋಗದಲ್ಲಿನ ಅಡಚಣೆ ನಿವಾರಣೆ. 

ಮೀನ:  ಕುಟುಂಬದಲ್ಲಿ ಕಲಹದ, ಆರ್ಥಿಕವಾಗಿ ಸ್ವಲ್ಪ ಇಕ್ಕಟ್ಟಿನ ಪರಿಸ್ಥಿತಿ ಇರಲಿದೆ. ಆರೋಗ್ಯದಲ್ಲಿ ಏರುಪೇರಾಗಬಹುದು, ದೇವಾಲಯದಲ್ಲಿ ಮನಸ್ಸಿಗೆ ಶಾಂತಿ ಸಿಗಲಿದೆ. ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿ ಮತ್ತು ಉದ್ಯೋಗಿಗಳಿಗೆ ಇತರೆ ವಿಷಯಗಳ ಚಿಂತೆ  

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!‘

ಸದ್ಯ ಟ್ರೆಂಡ್​ನಲ್ಲಿದ್ದಾರೆ 73ರ ಬಾಡಿಬಿಲ್ಡರ್​ ರಾಮಪ್ಪ! ವಯಸ್ಸಿಗೆ ಸೆಡ್ಡು ಹೊಡೆದ ಇವರ ಕಥೆ ಗೊತ್ತಾ! ಇವರು ಶಿವಮೊಗ್ಗದವರು!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ ಡಿಸೆಂಬರ್ 08 2025 ಸೋಮವಾರ Today Panchanga and Horoscope December 08 2025, Monday Predictions , shivamogga news today
Today Panchanga and Horoscope December 08
Today Panchanga and Horoscope December 08
Share This Article