Today Horoscope Dec 30 2025 ಶಿವಮೊಗ್ಗ : ವಿಶ್ವಾವಸು ನಾಮ ಸಂವತ್ಸರದ ದಕ್ಷಿಣಾಯನ ಹೇಮಂತ ಋತು, ಪುಷ್ಯ ಮಾಸದ ವೈಕುಂಠ ಏಕಾದಶಿಯ ಶುಭ ಸಂದರ್ಭ. ಶುಕ್ಲ ಪಕ್ಷದ ಏಕಾದಶಿ ತಿಥಿ. ರಾತ್ರಿ 1.11 ರವರೆಗೆ ಭರಣಿ ನಕ್ಷತ್ರವಿದ್ದು ತದನಂತರ ಕೃತ್ತಿಕಾ ನಕ್ಷತ್ರವು ಪ್ರವೇಶಿಸಲಿದೆ. ಅಮೃತ ಘಳಿಗೆಯು ರಾತ್ರಿ 8.40 ರಿಂದ 10.10 ರವರೆಗೆ ಇರಲಿದ್ದು, ರಾಹುಕಾಲವು ಮಧ್ಯಾಹ್ನ 3.00 ರಿಂದ 4.30 ರವರೆಗೆ ಹಾಗೂ ಯಮಗಂಡ ಕಾಲವು ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಪ್ರತಿಭಟನೆ, ಕಾರಣವೇನು
ಇವತ್ತಿನ ರಾಶಿಫಲ/ Today Horoscope Dec 30 2025
ಮೇಷ : ನವೋತ್ಸಾಹದ ದಿನ, ಆರ್ಥಿಕವಾಗಿ ಪ್ರಗತಿ. ಇಂಟರ್ವ್ಯೂಗಳಿಗೆ ಕರೆ ಬರಲಿದೆ. ಉದ್ಯೋಗದಲ್ಲಿ ಯಶಸ್ಸು ನಿಮ್ಮದಾಗಲಿದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶವಿದೆ. ವ್ಯವಹಾರದಲ್ಲಿ ಪರಿಸ್ಥಿತಿ ಪೂರಕವಾಗಿರಲಿವೆ.
ವೃಷಭ: ಒತ್ತಡ ಎದುರಾಗಬಹುದು ಹಾಗೂ ದೂರ ಪ್ರಯಾಣ. ಮನೆ ಮತ್ತು ಹೊರಗಡೆಗಿನ ಜವಾಬ್ದಾರಿ ಹೆಚ್ಚಾಗುವುದರಿಂದ ಅತಿಯಾದ ಶ್ರಮ , ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಸಾಮಾನ್ಯ.
ಮಿಥುನ : ಹೊಸ ಉದ್ಯೋಗ, ದಿನ ವಿಶೇಷ ಯೋಗವಿದ್ದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ. ಹಳೆಯ ನೆನಪು ಮರುಕಳಿಸಲಿದೆ. ವ್ಯಾಪಾರ ವಹಿವಾಟು ಪ್ರಗತಿಯತ್ತ ಸಾಗಲಿವೆ. ಧನಲಾಭ

ಕರ್ಕಾಟಕ : ಹೊಸ ಗುತ್ತಿಗೆ ಲಭ್ಯವಾಗಲಿದ್ದು, ಸಮಾಜದಲ್ಲಿ ಗೌರವ. ಪ್ರಮುಖ ಮಾಹಿತಿಯೊಂದು ಹಂಚಿಕೊಳ್ಳುವಿರಿ. ಬಾಲ್ಯದ ಗೆಳೆಯರನ್ನು ಭೇಟಿ ಮಾಡಲಿದ್ದೀರಿ ಹಾಗೂ ಉದ್ಯೋಗ ಮತ್ತು ವ್ಯವಹಾರ ಲಾಭದಾಯಕವಾಗಿರಲಿದೆ
ಸಿಂಹ : ಹೆಚ್ಚಿನ ಶ್ರಮ ಮತ್ತು ಅಲೆದಾಟ, ಕೆಲಸ ನಿಧಾನಗತಿಯಲ್ಲಿ ಸಾಗಲಿವೆ. ಧಾರ್ಮಿಕ ಕೇಂದ್ರಗಳಿಗೆ ಭೇಟಿ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಮಂದಗತಿಯಲ್ಲಿ ಸಾಗಲಿದದೆ.
ಕನ್ಯಾ : ಕುಟುಂಬದಲ್ಲಿ ಕಿರಿಕಿರಿ, ಅನಿರೀಕ್ಷಿತ ಧನವ್ಯಯವಾಗಲಿದೆ. ಕೆಲಸದಲ್ಲಿ ಒತ್ತಡ, ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಶ್ರಮ .
ತುಲಾ : ಹೊಸ ಕಾರ್ಯಗಳಿಗೆ ಚಾಲನೆ, ಶುಭ ಸುದ್ದಿಯನ್ನು ಕೇಳಲಿದ್ದಾರೆ. ಬಾಕಿ ಇದ್ದ ಹಣ ಕೈ ಸೇರಲಿದೆ. ಕೌಟುಂಬಿಕ ಸಮಸ್ಯೆ ಬಗೆಹರಿಯಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಾಮಾನ್ಯ ದಿನ.

ಶಿವಮೊಗ್ಗ : ಮನೆಯಂಗಳದಲ್ಲಿ ನಿಲ್ಲಿಸಿದ್ದ 18 ಲಕ್ಷದ ಎಕ್ಸ್‌ಯುವಿ 700 ನಾಪತ್ತೆ!
ವೃಶ್ಚಿಕ : ಉದ್ಯೋಗದ ಪ್ರಯತ್ನ ಫಲ ನೀಡಲಿದೆ, ಸಹೋದರರು ಮತ್ತು ಮಿತ್ರರೊಂದಿಗೆ ಇದ್ದ ಭಿನ್ನಾಭಿಪ್ರಾಯ ದೂರವಾಗಲಿವೆ. ಆಸ್ತಿ ವಿಚಾರದಲ್ಲಿ ಒಪ್ಪಂದ, ಗುರಿ ತಲುಪಲು ಈ ದಿನ ಸಹಕಾರಿಯಾಗಿದೆ.ಉದ್ಯೋಗ ಮತ್ತು ವ್ಯಾಪಾರದಲ್ಲಿ ವಿಶೇಷ ದಿನ
ಧನು : ವ್ಯಾಪಾರ ಮತ್ತು ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗಿ ಒತ್ತಡ ಉಂಟಾಗಲಿದೆ. ಆಸ್ತಿ ವ್ಯವಹಾರಗಳಲ್ಲಿ ಅಡಚಣೆ ಹಾಗೂ ಪ್ರಮುಖ ಕೆಲಸ ಮಂದಗತಿಯಲ್ಲಿ ಸಾಗಲಿವೆ.
ಮಕರ : ಆತ್ಮೀಯರ ಜೊತೆ ವಾಗ್ವಾದ, ಶ್ರಮಕ್ಕೆ ತಕ್ಕ ಪ್ರತಿಫಲ.ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಾಮಾನ್ಯ ದಿನ, ಅನಾರೋಗ್ಯ
ಕುಂಭ : ಶುಭ ವಾರ್ತೆಗಳು ಬರಲಿದ್ದು, ಬರಬೇಕಾದ ಹಣವು ವಾಪಸ್ ಬರಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ವಿಶೇಷ ದಿನ
ಮೀನ : ಸಣ್ಣಪುಟ್ಟ ಅಡೆತಡೆ ಎದುರಾಗಲಿದೆ, ದೂರ ಪ್ರಯಾಣ. ಸಂಬಂಧಿಕರಿಂದ ಒತ್ತಡ, ದೇವಸ್ಥಾನಗಳಿಗೆ ಭೇಟಿ ವ್ಯಾಪಾರ ವಹಿವಾಟು ಉದ್ಯೋಗದಲ್ಲಿ ಈ ದಿನ ಸಾಧಾರಣ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!